ನಟ ಯಶ್ ಕೆರಿಯರ್ ಬೆಳಗಿದ ದಶಕದ ಹಿಂದಿನ ಸೂಪರ್ ಹಿಟ್ ಸಿನಿಮಾ ಮರು ಬಿಡುಗಡೆಗೆ ದಿನಾಂಕ ನಿಗದಿ
- ನಟ ಯಶ್ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್ ಸಿನಿಮಾಗಳಿಂದ ಸ್ಯಾಂಡಲ್‌ವುಡ್ ಜತೆಗೆ ತಮ್ಮ ಸ್ಟಾರ್‌ಡಮ್‌ಅನ್ನು ಮಗದಷ್ಟು ಎತ್ತರಕ್ಕೆ ಕೊಂಡೊಯ್ದರು. ಇದೀಗ ಟಾಕ್ಸಿಕ್ ಸಿನಿಮಾ ಮಾಡುತ್ತಿದ್ದಾರಾದರೂ, 2025ರ ವರೆಗೂ ಕಾಯಲೇಬೇಕು. ಹೀಗಿರುವಾಗಲೇ, ನಟ ಯಶ್ ನಟನೆಯ ದಶಕದ ಹಿಂದಿನ ಸಿನಿಮಾವೊಂದು ಇದೀಗ ಮರು ಬಿಡುಗಡೆ ಆಗಲು ಸಿದ್ಧತೆ ನಡೆಸುತ್ತಿದೆ.

(1 / 6)
ಸ್ಯಾಂಡಲ್‌ವುಡ್‌ನಲ್ಲೀಗ ರೀ ರಿಲೀಸ್ ಸಿನಿಮಾಗಳ ಕ್ರೇಜ್ ಹೆಚ್ಚಾಗುತ್ತಿದೆ. ಈಗಾಗಲೇ ಸಾಕಷ್ಟು ಸಿನಿಮಾಗಳು ಮರು ಬಿಡುಗಡೆ ಆಗುತ್ತಿವೆ. ಆ ಸಾಲಿಗೆ ಯಶ್ ಸಿನಿಮಾ ಸಹ ಸೇರಿಕೊಳ್ಳಲಿದೆ.
(2 / 6)
ನಟ ಯಶ್ ಸಿನಿಮಾ ಕೆರಿಯರ್‌ಗೆ ದೊಡ್ಡ ಹಿಟ್ ಕೊಟ್ಟ ಸಿನಿಮಾಗಳಲ್ಲಿ ರಾಜಾಹುಲಿ ಸಹ ಒಂದು. ದಶಕದ ಹಿಂದೆಯೇ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು ಈ ಸಿನಿಮಾ.
(3 / 6)
2013ರ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ಸು ಗಳಿಸಿತ್ತು. ಕಲೆಕ್ಷನ್ ವಿಚಾರದಲ್ಲಿಯೂ ಕೋಟಿ ಕೋಟಿ ಬಾಚಿಕೊಂಡಿತ್ತು.
(4 / 6)
ಗುರು ದೇಶಪಾಂಡೆ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ಕೆ. ಮಂಜು ನಿರ್ಮಿಸಿದ್ದರು. ಇದೀಗ ಇದೇ ಸಿನಿಮಾಕ್ಕೆ ಮರು ಬಿಡುಗಡೆ ಭಾಗ್ಯ ಸಿಕ್ಕಿದೆ.
(5 / 6)
ಯಶ್ ಜತೆಗೆ ವಸಿಷ್ಠ ಸಿಂಹ, ಮೇಘನಾ ರಾಜ್ ಸರ್ಜಾ, ಚರಣ್ ರಾಜ್, ಮಿತ್ರಾ, ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು.
ಇತರ ಗ್ಯಾಲರಿಗಳು