ಕೊನೆಗೂ ಬಿಡುಗಡೆ ದಿನಾಂಕ ಲಾಕ್ ಮಾಡಿದ ‘ಗೌರಿ’; ಈ ದಿನದಂದು ಚಿತ್ರಮಂದಿರಕ್ಕೆ ಬರಲು ಸಮರ್ಜಿತ್ ಲಂಕೇಶ್ ರೆಡಿ
- ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಗೌರಿ ಸಿನಿಮಾ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಇವಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಚಿತ್ರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

(1 / 6)
ಇಂದ್ರಜಿತ್ ಲಂಕೇಶ್ ನಿರ್ದೇಶನದ ಅವರ ಪುತ್ರ ಸಮರ್ಜಿತ್ ಮತ್ತು ನಟಿ ಸಾನಿಯಾ ಅಭಿನಯದ ಮೊದಲ ಗೌರಿ. ಬೆಂಗಳೂರಿನ MES ಕಾಲೇಜಿನಲ್ಲಿ ಇಡೀ ಸಿನಿಮಾ ತಂಡ ಮಾಧ್ಯಮದ ಮುಂದೆ ಬಂದು ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
(2 / 6)
ಬೆಂಗಳೂರಿನ MES ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಿನಿಮಾತಂಡ 'ಗೌರಿ' ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ.
(3 / 6)
ಅಂದಹಾಗೆ 'ಗೌರಿ' ಸಿನಿಮಾ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ.
(4 / 6)
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಕನ್ನಡದ ಯುವ ಪ್ರತಿಭೆಗಳನ್ನು ಬೆಳೆಸಿ. ಆಗಸ್ಟ್ 15 ಒಳ್ಳೆಯ ದಿನ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಇದು. ಎಲ್ಲಾ ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹಿಸಬೇಕು'ಎಂದರು.
(5 / 6)
ಕನಸು ನನಸಾದ ಸಮಯವಿದು. ನನ್ನ ಮೊದಲ ಸಿನಿಮಾವನ್ನು ಎಲ್ಲರೂ ನೋಡಿ ಎಂದರು ಸಮರ್ಜಿತ್ ಲಂಕೇಶ್. ಈಗಾಗಲೇ ವೈರಲ್ ಆಗಿರುವ 'ಟೈಮ್ ಬರುತ್ತೆ...' ಮತ್ತು ಧೂಳ್ ಎಬ್ಬಿಸಾವ.. ಹಾಡಿಗೆ ವಿದ್ಯಾರ್ಥಿಗಳ ಜೊತೆ ಸಮರ್ಜಿತ್ ಲಂಕೇಶ್ ಮತ್ತು ನಾಯಕಿ ಸಾನ್ಯಾ ಅಯ್ಯರ್ ಡಾನ್ಸ್ ಮಾಡಿ ಸಂಭ್ರಮಿಸಿದರು.
ಇತರ ಗ್ಯಾಲರಿಗಳು