ಈ ರೀತಿ ಬೆತ್ತಲೆ ಬೆನ್ನು ತೋರಿಸಿದ್ರೆ, ಬೆನ್ನ ಹಿಂದೆ ಮಾತನಾಡೋರ ಸಂಖ್ಯೆಯೂ ಹೆಚ್ಚೇ ಎಂದ ಈ ಮಚ್ಚೆ ಸುಂದರಿ ಯಾರಿರಬಹುದು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ರೀತಿ ಬೆತ್ತಲೆ ಬೆನ್ನು ತೋರಿಸಿದ್ರೆ, ಬೆನ್ನ ಹಿಂದೆ ಮಾತನಾಡೋರ ಸಂಖ್ಯೆಯೂ ಹೆಚ್ಚೇ ಎಂದ ಈ ಮಚ್ಚೆ ಸುಂದರಿ ಯಾರಿರಬಹುದು?

ಈ ರೀತಿ ಬೆತ್ತಲೆ ಬೆನ್ನು ತೋರಿಸಿದ್ರೆ, ಬೆನ್ನ ಹಿಂದೆ ಮಾತನಾಡೋರ ಸಂಖ್ಯೆಯೂ ಹೆಚ್ಚೇ ಎಂದ ಈ ಮಚ್ಚೆ ಸುಂದರಿ ಯಾರಿರಬಹುದು?

  • Chaithra J Achar: ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಆಚಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಬೋಲ್ಡ್‌ ಎನಿಸುವ ಫೋಟೋ ಶೇರ್‌ ಮಾಡಿ ಸುದ್ದಿಯಲ್ಲಿರುತ್ತಾರೆ. ಟೀಕೆಗಳ ಮಳೆ ಸುರಿದರೂ ಡೋಂಟ್‌ ಕೇರ್‌ ಮನಸ್ಥಿತಿ ಈ ಯುವ ನಟಿಯದ್ದು. ಇದೀಗ ಒಂದು ಹೆಜ್ಜೆ ಮುಂದೆ ಹೋಗೆ ಬೆತ್ತಲೆ ಬೆನ್ನು ಪ್ರದರ್ಶಿಸಿ, ಬೆನ್ನ ಹಿಂದೆ ಮಾತನಾಡುವವರಿಗೆ ಕೌಂಟರ್‌ ಕೊಟ್ಟಿದ್ದಾರೆ.

ತಮ್ಮ ನಟನೆಯಿಂದಲೇ ನೋಡುಗರ ಗಮನ ಸೆಳೆದ ನಟಿ, ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಬೆತ್ತಲೆ ಬೆನ್ನು ಪ್ರದರ್ಶಿಸಿ ನೆಟ್ಟಿಗರ ಹುಬ್ಬೇರಿಸಿದ್ದಾರೆ. 
icon

(1 / 6)

(Instgram\ Chaithra j Achar)

ಸದಾ ಒಂದಿಲ್ಲೊಂದು ಫೋಟೋ ಗೊಂಚಲಗಳ ಮೂಲಕ ಜಾಲತಾಣದಲ್ಲಿ ಪ್ರತ್ಯಕ್ಷರಾಗುವ ಮಚ್ಚೆ ಸುಂದರಿ, ನಟಿ ಚೈತ್ರಾ ಆಚಾರ್‌ ಇದೀಗ ಹೊಸ ಫೋಟೋಶೂಟ್‌ನಲ್ಲಿ ಎದುರಾಗಿದ್ದಾರೆ. 
icon

(2 / 6)

ಸೀರೆಯುಟ್ಟು ಬೇರ್‌ ಬ್ಯಾಕ್‌ ಪ್ರದರ್ಶಿಸಿದ ನಟಿ ಚೈತ್ರಾ ಆ ಫೋಟೋಕ್ಕೊಂದು ಕ್ಯಾಪ್ಷನ್‌ ಸಹ ನೀಡಿದ್ದಾರೆ. ಹೀಗಿದೆ ಆ ಕ್ಯಾಪ್ಷನ್‌. "ಈ ರೀತಿ ನಮ್ಮ ಬೆನ್ನು ತೋರಿಸಿದ್ರೆ, ಖಂಡಿತವಾಗಿಯೂ ಜನ ನಮ್ಮ ಬೆನ್ನಹಿಂದೆಯೇ ಸಾಕಷ್ಟು ಮಾತನಾಡ್ತಾರೆ" ಎಂದು ಬರೆದುಕೊಂಡಿದ್ದಾರೆ. 
icon

(3 / 6)

ಚೈತ್ರಾ ಆಚಾರ್‌ ಹೀಗೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ, ನಟಿ ಸಂಯುಕ್ತಾ ಹೆಗ್ಡೆ ಉಫ್‌ ಎಂದು ಉದ್ಗರಿಸಿ ಶಾಕ್‌ ಆಗಿದ್ದಾರೆ. ಈ ಮೂಲಕ ತಮ್ಮ ಬೆನ್ನ ಹಿಂದೆ ಮಾತನಾಡುವವರಿಗೆ ನೇರವಾಗಿಯೇ ಈ ಒಂದು ಫೋಟೋ ಮೂಲಕ ಚೈತ್ರಾ ಕೌಂಟರ್‌ ಕೊಟ್ಟಿದ್ದಾರೆ. 
icon

(4 / 6)

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಟೋಬಿ, ಸಪ್ತ ಸಾಗರದಾಚೆ ಎಲ್ಲೋ ಮತ್ತು ಬ್ಲಿಂಕ್‌ ಮೂಲಕ ಗಮನ ಸೆಳೆದ ಚೈತ್ರಾ ಸದ್ಯ ತಮಿಳಿನ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. 
icon

(5 / 6)

ಕನ್ನಡದಲ್ಲಿ ರೋಹಿತ್‌ ಪದಕಿ ನಿರ್ದೇಶನದ ಉತ್ತರಕಾಂಡ ಚಿತ್ರದಲ್ಲಿಯೂ ಚೈತ್ರಾ ನಟಿಸಿದ್ದಾರೆ. ಸ್ಟ್ರಾಬೆರಿ ಸಿನಿಮಾ ಕೆಲಸವನ್ನೂ ಮುಗಿಸಿದ್ದಾರೆ. ಇನ್ನೂ ಹಲವು ಸಿನಿಮಾ ಅವಕಾಶಗಳನ್ನೂ ಗಿಟ್ಟಿಸಿಕೊಂಡಿರುವ ಚೈತ್ರಾ, ಮುಂದಿನ ದಿನಗಳಲ್ಲಿ ಅವುಗಳ ಘೋಷಣೆ ಮಾಡಲಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು