ಸಮುದ್ರದ ಮೇಲೆ ನಿನ್ನ ಕಣ್ಣು ಅಂದ್ರು ಆಂಕರ್‌ ಅನುಶ್ರೀ; ನೀವು ನನ್ನ ಚಿನ್ನು ಅಂದ್ರು ಚೈತ್ರಾ ಜೆ ಆಚಾರ್‌- ಸಾಗರದಾಚೆ ಚೆಲುವೆ ಫೋಟೋಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಮುದ್ರದ ಮೇಲೆ ನಿನ್ನ ಕಣ್ಣು ಅಂದ್ರು ಆಂಕರ್‌ ಅನುಶ್ರೀ; ನೀವು ನನ್ನ ಚಿನ್ನು ಅಂದ್ರು ಚೈತ್ರಾ ಜೆ ಆಚಾರ್‌- ಸಾಗರದಾಚೆ ಚೆಲುವೆ ಫೋಟೋಗಳು

ಸಮುದ್ರದ ಮೇಲೆ ನಿನ್ನ ಕಣ್ಣು ಅಂದ್ರು ಆಂಕರ್‌ ಅನುಶ್ರೀ; ನೀವು ನನ್ನ ಚಿನ್ನು ಅಂದ್ರು ಚೈತ್ರಾ ಜೆ ಆಚಾರ್‌- ಸಾಗರದಾಚೆ ಚೆಲುವೆ ಫೋಟೋಗಳು

  • ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ನಟಿಸಿದ್ದ ಚೈತ್ರಾ ಜೆ ಆಚಾರ್‌ ಇದೀಗ ಸಮುದ್ರ ತೀರದಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಆಂಕರ್‌ ಅನುಶ್ರೀ ಸೇರಿದಂತೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ.

Chaitra J Achar photoshoot in Beach: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ನಟಿಸಿದ್ದ ಚೈತ್ರಾ ಜೆ ಆಚಾರ್‌ ಇದೀಗ ಸಮುದ್ರ ತೀರದಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಆಂಕರ್‌ ಅನುಶ್ರೀ ಸೇರಿದಂತೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ.
icon

(1 / 8)

ನಟಿ ಚೈತ್ರಾ ಜೆ ಆಚಾರ್‌ ಈ ಫೋಟೋಗಳಿಗೆ "ನನ್ನ ಸಮುದ್ರ ನೀನು" ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಅದಕ್ಕೆ ಆಂಕರ್‌ ಅನುಶ್ರೀ ಅವರು "ಸಮುದ್ರದ ಮೇಲೆ ನಿನ್ನ ಕಣ್ಣು" ಎಂದು ಕಾಮೆಂಟ್‌ ಮಾಡಿದ್ದಾರೆ. ಇದಕ್ಕೆ ಪ್ರೀತಿಯಿಂದ ಚೈತ್ರಾ "ನೀವು ನನ್ನ ಚಿನ್ನು" ಎಂದು ಪ್ರಾಸಬದ್ಧವಾಗಿ ಮಾರುತ್ತರ ನೀಡಿದ್ದಾರೆ.  
icon

(2 / 8)

ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಜೆ ಆಚಾರ್‌ ಈಗ ತಮಿಳು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಶ್ರೀ ಗಣೇಶ್‌ ಅವರು ನಟ ಸಿದ್ಧಾರ್ಥ್‌ 40ನೇ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ  ತಮಿಳು ಸಿನಿಮಾ ತಂಡಕ್ಕೆ  ಸಪ್ತ ಸಾಗರದಾಚೆ ಚೆಲುವೆ ಚೈತ್ರಾ ಜೆ ಆಚಾರ್‌ ಸೇರ್ಪಡೆಯಾಗಿದ್ದಾರೆ. 
icon

(3 / 8)

ಚೈತ್ರಾ ಜೆ ಆಚಾರ್‌ ಕನ್ನಡದ ಹಲವು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇವರು ನಟಿಸುತ್ತಿರುವ ಉತ್ತರಕಾಂಡ ಸಿನಿಮಾದ ಮೇಲೆ ಕನ್ನಡ ಸಿನಿಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಡಾಲಿ ಧನಂಜಯ್‌ ಮತ್ತು ಶಿವಣ್ಣ ನಟಿಸುವ ಈ ಚಿತ್ರ  ಈ ವರ್ಷ ಬಿಡುಗಡೆಯಾಗಲಿದೆ. 
icon

(4 / 8)

ಚೈತ್ರಾ ಜೆ ಆಚಾರ್‌, ಸಿದ್ದು ಮೂಲಿಮನಿ ಮತ್ತು ಇತರೆ ಯುವ ಕಲಾವಿದರು ನಟಿಸಿರುವ ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾ ಇತ್ತೀಚೆಗೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.  ಈ ಸಿನಿಮಾಕ್ಕೂ ಮುನ್ನ ಬ್ಲಿಂಕ್‌ ಮತ್ತು ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ಚೈತ್ರಾ ಜೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.  
icon

(5 / 8)

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ಚೈತ್ರಾ ಆಚಾರ್‌ ರಕ್ಷಿತ್‌ ಶೆಟ್ಟಿ ಜತೆ ನಟಿಸಿದ್ದರು. ನಾಯಕ ಮನುವಿನ ಪ್ರೇಯಸಿಯಾಗಿ ನಟಿಸಿದ್ದರು.  ಈ ಸಿನಿಮಾದ ಕುರಿತು ಸಾಕಷ್ಟು ಪಾಸಿಟಿವ್‌ ವಿಮರ್ಶೆಗಳು ಬಂದಿದ್ದವು.
icon

(6 / 8)

ತಲೆದಂಡ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಚೈತ್ರಾ ಆಚಾರ್‌ ಸ್ಯಾಂಡಲ್‌ವುಡ್‌ನ ಗಮನ ಸೆಳೆದಿದ್ದರು.  ಗಿಲ್ಕಿ ಎಂಬ ಸಿನಿಮಾದಲ್ಲೂ ನಟಿಸಿದ್ದರು. ರಾಜ್‌ ಬಿ ಶೆಟ್ಟಿ ಜತೆ ಟೋಬಿ ಸಿನಿಮಾದಲ್ಲಿ ನಟಿಸಿದ್ದರು. 
icon

(7 / 8)

ಈಕೆ ಹಾಡುಗಾರ್ತಿ ಕೂಡ ಹೌದು. ಇತ್ತೀಚೆಗೆ ರೂಪಾಂತರ ಸಿನಿಮಾದಲ್ಲಿ "ಕಿತ್ತಳೆ ಹಣ್ಣಿನ" ಹಾಡಿಗೆ ಧ್ವನಿಯಾಗಿದ್ದರು. ಗರುಡ ಗಮನ ವೃಷಭ ವಾಹನ ಚಿತ್ರದ ಇವರ "ಸೋಜುಗದ ಸೂಜು ಮಲ್ಲಿಗೆ" ಹಾಡಂತೂ ಸಖತ್‌ ಹಿಟ್‌ ಆಗಿತ್ತು.
icon

(8 / 8)

ಇತರ ಗ್ಯಾಲರಿಗಳು