Actor Dwarakish Death: ಕರ್ನಾಟಕದ ಕುಳ್ಳ ಹಿರಿಯ ನಟ ದ್ವಾರಕೀಶ್ ನಿರ್ದೇಶನ ಮಾಡಿರುವ ಫೇಮಸ್ ಸಿನಿಮಾಗಳ ಫೋಟೋ ಗ್ಯಾಲರಿ
ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ನಿರ್ಮಾಪಕನಾಗಿ, ನಟನಾಗಿ, ನಿರ್ದೇಶಕನಾಗಿ ಹಲವಾರು ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ್ದ ದ್ವಾರಕೀಶ್ ಮಂಗಳವಾರ ಇಹಲೋಹ ತ್ಯಜಿಸಿದ್ದಾರೆ.
(1 / 8)
ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ದ್ವಾರಕೀಶ್ ನಿಧನದ ಸುದ್ದಿಯನ್ನು ಅವರ ಕುಟುಂಬದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ದ್ವಾರಕೀಶ್ ಚಿತ್ರರಂಗಕ್ಕೆ ಸಹ ನಿರ್ಮಾಪನಾಗಿ ಬಂದವರು. ನಂತರ ನಟನೆ ಆರಂಭಿಸಿದ ಅವರು ಸಿನಿಮಾ ನಿರ್ದೇಶನಕ್ಕೂ ಇಳಿದರು. ಅವರು ನಿರ್ದೇಶಿಸಿದ ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ ಇಲ್ಲಿದೆ. (PC: DwarakishChitra website)
(2 / 8)
ಡಾ ವಿಷ್ಣುವರ್ಧನ್, ಭವ್ಯ ಜೊತೆಯಾಗಿ ನಟಿಸಿದ್ದ ನೀ ಬರೆದ ಕಾದಂಬರಿ ದ್ವಾರಕೀಶ್ ಆಕ್ಷನ್ ಕಟ್ ಹೇಳಿದ ಮೊದಲ ಸಿನಿಮಾ. ಈ ಸಿನಿಮಾ 1985ರಲ್ಲಿ ತೆರೆ ಕಂಡಿತ್ತು.
(3 / 8)
ನೀ ಬರೆದ ಕಾದಂಬರಿ ಹಿಟ್ ಆದ ಅದೇ ವರ್ಷ ದ್ವಾರಕೀಶ್ ಹಾಗೂ ವಿಷ್ಣು ಕಾಂಬೋದಲ್ಲಿ ನೀ ತಂದ ಕಾಣಿಕೆ ಸಿನಿಮಾ ಬಿಡುಗಡೆ ಆಯ್ತು. ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆಯಾಗಿ ಜಯಸುಧಾ ನಟಿಸಿದ್ದರು.
(4 / 8)
ಚರಣ್ ರಾಜ್ ಹಾಗೂ ಸಹಿಲಾ ಚಂದ್ರಾ ನಟಿಸಿದ್ದ ಆಫ್ರಿಕಾದಲ್ಲಿ ಶೀಲಾ ಸಿನಿಮಾ 1986 ಮೇ ತಿಂಗಳಲ್ಲಿ ತೆರೆ ಕಂಡಿತ್ತು. ಈ ಚಿತ್ರದ ಹಾಡುಗಳಿಗೆ ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಸಂಗೀತ ನೀಡಿದ್ದರು.
(5 / 8)
ವಿನೋದ್ ರಾಜ್ ಅಭಿನಯದ ಮೊಟ್ಟ ಮೊದಲ ಸಿನಿಮಾ ಡ್ಯಾನ್ಸ್ ರಾಜ ಡ್ಯಾನ್ಸ್. ಈ ಚಿತ್ರಕ್ಕೆ ಕೂಡಾ ದ್ವಾರಕೀಶ್ ಆಕ್ಷನ್ ಕಟ್ ಹೇಳಿದ್ದರು. 1987 ರಲ್ಲಿ ಸಿನಿಮಾ ತೆರೆ ಕಂಡಿತ್ತು
(6 / 8)
ನಟಿ ಶ್ರುತಿಗೆ ಚಿತ್ರರಂಗದಲ್ಲಿ ಬ್ರೇಕ್ ನೀಡಿದ ಸಿನಿಮಾ ಶ್ರುತಿ. ಈ ಸಿನಿಮಾಗಾಗಿ ದ್ವಾರಕೀಶ್ ಶ್ರುತಿಯನ್ನು ಕರೆ ತಂದರು. 1990 ಅಕ್ಟೋಬರ್‌ನಲ್ಲಿ ಸಿನಿಮಾ ತೆರೆ ಕಂಡಿತ್ತು.
(7 / 8)
ಮುದ್ದಿನ ಹುಡುಗಿ ಚೆಂದ, ಮೌನದ ರೂಪವೇ ಅಂದ ಈ ಹಾಡನ್ನು ಯಾರಿಗೆ ತಾನೇ ಮರೆಯಲು ಸಾಧ್ಯ. ರಾಯರು ಬಂದರು ಮಾವನ ಮನೆಗೆ ಸಿನಿಮಾ ಹಾಡು ಇದು. ರಾಜ್ ಕೋಟಿ ಸಂಗೀತ ನೀಡಿದ್ದ ಈ ಚಿತ್ರಕ್ಕೆ ದ್ವಾರಕೀಶ್ ಆಕ್ಷನ್ ಕಟ್ ಹೇಳಿದ್ದರು. ಜೊತೆಗೆ ಒಂದು ಪಾತ್ರವನ್ನೂ ನಿಭಾಯಿಸಿದ್ದರು.
ಇತರ ಗ್ಯಾಲರಿಗಳು