ದಿಢೀರ್ ಆಗಿ ಒಟಿಟಿಗೆ ಲಗ್ಗೆಯಿಟ್ಟ ಒಂದು ಸರಳ ಪ್ರೇಮ ಕಥೆ; ವಿನಯ್ ರಾಜ್ ಕುಮಾರ್ ನಟನೆಯ ಸಿನಿಮಾವನ್ನು ಮನೆಯಲ್ಲೇ ನೋಡಿ
- OTT Movies: ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಒಂದು ಸರಳ ಪ್ರೇಮಕಥೆ ಇದೀಗ ಸದ್ದಿಲ್ಲದೆ ಒಟಿಟಿಗೆ ಪ್ರವೇಶಿಸಿದೆ. ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರವು ಇಷ್ಟು ಬೇಗ ಒಟಿಟಿಗೆ ಆಗಮಿಸಿರುವುದು ಎಲ್ಲರಿಗೂ ಅಚ್ಚರಿ ತಂದಿದೆ.
- OTT Movies: ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಒಂದು ಸರಳ ಪ್ರೇಮಕಥೆ ಇದೀಗ ಸದ್ದಿಲ್ಲದೆ ಒಟಿಟಿಗೆ ಪ್ರವೇಶಿಸಿದೆ. ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರವು ಇಷ್ಟು ಬೇಗ ಒಟಿಟಿಗೆ ಆಗಮಿಸಿರುವುದು ಎಲ್ಲರಿಗೂ ಅಚ್ಚರಿ ತಂದಿದೆ.
(1 / 7)
Ondu Sarala Prema Kathe Movie: ಫೆಬ್ರವರಿ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಒಂದು ಸರಳ ಪ್ರೇಮಕಥೆ ಇದೀಗ ಸದ್ದಿಲ್ಲದೆ ಒಟಿಟಿಗೆ ಪ್ರವೇಶಿಸಿದೆ. ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರವು ಇಷ್ಟು ಬೇಗ ಒಟಿಟಿಗೆ ಆಗಮಿಸಿರುವುದು ಎಲ್ಲರಿಗೂ ಅಚ್ಚರಿ ತಂದಿದೆ. ಅಮೆಜಾನ್ ಪ್ರೈಮ್ ಚಂದಾದಾರರು ಈಗ ಮನೆಯಲ್ಲಿಯೇ ಈ ಪ್ರೇಮಕಥೆಯನ್ನು ಕಣ್ತುಂಬಿಕೊಳ್ಳಬಹುದು.
(2 / 7)
ಒಂದು ಸರಳ ಪ್ರೇಮಕಥೆ ಸಿನಿಮಾವು ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿತ್ತು. ವಿನಯ್ ರಾಜ್‌ಕುಮಾರ್ ನಟನೆಯ ಈ ಚಿತ್ರದ ಸ್ಟೋರಿ ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಆದರೆ, ಥಿಯೇಟರ್‌ನಲ್ಲಿ ಗಳಿಕೆ ನಿರೀಕ್ಷೆಯ ಪ್ರಮಾಣದಲ್ಲಿ ಆಗಿರಲಿಲ್ಲ.
(3 / 7)
ಇದೀಗ ದಿಢೀರ್ ಆಗಿ ಒಂದು ಸರಳ ಪ್ರೇಮಕಥೆ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಅಮೆಜಾನ್ ಪ್ರೈಮ್‌ನಲ್ಲಿ ಕಾಣಿಸಿಕೊಂಡಿದೆ. ಅಮೆಜಾನ್ ಪ್ರೈಮ್ ವಿಡಿಯೋ ಚಂದದಾರರು ಈಗ ಮನೆಯಲ್ಲಿ ಕುಳಿತು ಒಂದು ಸರಳ ಪ್ರೇಮಕಥೆ ನೋಡಬಹುದು.
(4 / 7)
ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಜತೆ ಮಲ್ಲಿಕಾ ಸಿಂಗ್ ಹಾಗೂ ಸ್ವಾತಿಷ್ಟ ನಟಿಸಿದ್ದಾರೆ. ರಾಜೇಶ್ ನಟರಂಗ ಸಾಧುಕೋಕಿಲ, ರಾಘವೇಂದ್ರ ರಾಜ್‌ಕುಮಾರ್, ಶ್ವೇತಾ ಶ್ರೀವಾಸ್ತವ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
(5 / 7)
ಒಳ್ಳೊಳ್ಳೆಯ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ, ಜನರು ಒಟಿಟಿಗೆ ಬರುವುದನ್ನು ಕಾಯುತ್ತಾರೆ. ಇದರಿಂದ ಚಿತ್ರ ನಿರ್ಮಾಪಕರಿಗೆ ಲಾಸ್ ಆಗುತ್ತಿದೆ ಎಂದು ಈಗ ಚರ್ಚೆ ನಡೆಯುತ್ತಿದೆ. ಇದೇ ಬೇಸರವನ್ನು ಒಂದು ಸರಳ ಪ್ರೇಮಕಥೆ ತಂಡವೂ ಹಾಕಿತ್ತು.
(6 / 7)
"ನಮ್ಮ ಸಿನಿಮಾ ನೋಡದೆ ಇದ್ದರೆ ಪರವಾಗಿಲ್ಲ, ಬ್ಲಿಂಕ್ ಸಿನಿಮಾ ಚೆನ್ನಾಗಿದೆ ಥಿಯೇಟರ್‌ಗೆ ಬಂದು ನೋಡಿ" ಎಂದು ಸ್ವತಃ ಸಿಂಪಲ್ ಸುನಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಒಂದು ಸರಳ ಪ್ರೇಮಕಥೆಯನ್ನು ಸದ್ದಿಲ್ಲದೆ ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್ ಮಾಡಿದ್ದಾರೆ.
(7 / 7)
ಒಂದು ಸರಳ ಪ್ರೇಮಕಥೆಯು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವ ಮಧ್ಯಮ ವರ್ಗದ ಹುಡುಗನ ಕಥೆ. ಅದೇ ಸಮಯದಲ್ಲಿ ಗಾಯಕಿಯಾಗಿ ಆಗಮಿಸುವ ಹೀರೋಯಿನ್ ಜತೆ ಲವ್ ಆಗುವಂತಹ ಸನ್ನಿವೇಶ ಚಿತ್ರದಲ್ಲಿದೆ. ಇದು ನೋಡುಗರಿಗೆ ಮುದುನೀಡುವಂತಹ ಸುಂದರ ಲವ್‌ಸ್ಟೋರಿಯಾಗಿ ಇಷ್ಟವಾಗಿತ್ತು. ಈ ಲವ್ ಸ್ಟೋರಿಯನ್ನು ಥಿಯೇಟರ್‌ನಲ್ಲಿ ನೋಡದೆ ಇರುವವರು ಒಟಿಟಿಯಲ್ಲಿ ಈಗ ನೋಡಬಹುದು.
ಇತರ ಗ್ಯಾಲರಿಗಳು