ಕೊರಗಜ್ಜ ಚಿತ್ರ ಪ್ರದರ್ಶನಕ್ಕೆ ದೈವದಿಂದಲೇ ಸಿಕ್ತು ಒಪ್ಪಿಗೆ; ನಿರ್ದೇಶಕರಿಂದ ವಿಶೇಷ ಕೋಲಸೇವೆ ಅರ್ಪಣೆ PHOTOS
- ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಸಿನಿಮಾದ ಮೋಷನ್ ಪೋಸ್ಟರ್ ಸಹ ಸಿದ್ಧವಾಗಿದ್ದು, ಅದರ ಮೊದಲ ಪ್ರತಿಯನ್ನು ದೈವಕ್ಕೆ ಅರ್ಪಿಸಿ, ದೈವದ ಒಪ್ಪಿಗೆ ಪಡೆದುಕೊಂಡಿದೆ ಚಿತ್ರತಂಡ. ಇದೇ ವೇಳೆ ನಿರ್ದೇಶಕ ಸುಧೀರ್ ಅತ್ತಾವರ್ ದೈವಕ್ಕೆ ಕೋಲಸೇವೆ ನೀಡಿದರು. ಚಿತ್ರ ಪ್ರದರ್ಶನಕ್ಕೆ ದೈವದಿಂದಲೂ ಒಪ್ಪಿಗೆ ಸಿಕ್ಕಿದ್ದು, ಶೀಘ್ರದಲ್ಲಿ ಫಸ್ಟ್ ಲುಕ್ ಬಿಡುಗಡೆ ಆಗಲಿದೆ.

(1 / 7)
ವಿಕ್ರಮ ಸಾಫಲ್ಯ ನಿರ್ಮಾಣದ ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ನಡಿ, ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಈಗ ಬಹುತೇಕ ಶೂಟಿಂಗ್ ಮುಗಿಸಿಕೊಂಡಿದೆ.
(2 / 7)
ಇದೀಗ ಚಿತ್ರದ ಮೋಷನ್ ಪೋಸ್ಟರ್ ಜತೆ ಫಸ್ಟ್ ಲುಕ್ ಸಿದ್ಧಗೊಂಡಿದ್ದು, ಕೊರಗಜ್ಜ ದೈವದ ಕಳೆ ಕಾರ್ಣಿಕ ಮತ್ತು ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ಈ ಸಿನಿಮಾ ಕಟ್ಟಿಕೊಡಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
(3 / 7)
ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ದೈವದ ಮುಂದಿರಿಸಿ, ದೈವದ ಒಪ್ಪಿಗೆ ಪಡೆದುಕೊಂಡೇ ಮುಂದುವರಿಯುತ್ತಿದೆ ಚಿತ್ರತಂಡ.
(4 / 7)
ಈ ಹಿನ್ನೆಲೆಯಲ್ಲಿ ಕೊರಗಜ್ಜ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ನಿರ್ದೇಶಕ ಸುಧೀರ್ ಅತ್ತಾವರ್ ವಿಶೇಷ ಕೋಲಸೇವೆ ನೀಡಿ, ದೈವದ ಸಮಕ್ಷಮದಲ್ಲಿ ಒಪ್ಪಿಗೆಗಾಗಿ ಪ್ರದರ್ಶಿಸಲಾಯಿತು.
(5 / 7)
ಎಲ್ಲೆಂದರಲ್ಲಿ ಈ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರನ್ನು ದೈವಕ್ಕೆ ಅಪಚಾರ ಆಗುವ ರೀತಿಯಲ್ಲಿ ಸಾರ್ವಜನಿಕರು ದುರುಪಯೋಗ ಪಡಿಸಬಾರದು ಎಂದು ದೈವಗಳು ಅಪ್ಪಣೆ ನೀಡಿದವು ಎಂದಿದ್ದಾರೆ ನಿರ್ದೇಶಕರು.
(6 / 7)
ನಟಿ ಭವ್ಯ ಮತ್ತು ಪುತ್ರಿ ಅದಿತಿ, ಎಡಿಟರ್ ಈಪಿ ವಿದ್ಯಾಧರ್ ಶೆಟ್ಟಿ, ಖ್ಯಾತ ಗಾಯಕ ರಮೇಶ್ಚಂದ್ರ, ನಾಯಕ ನಟ ಭರತ್ ಸೂರ್ಯ, ಶ್ಲಾಘ್ಯ ಕಮಲಿನಿ ಹಾಗೂ ಚಿತ್ರತಂಡದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದರು.
ಇತರ ಗ್ಯಾಲರಿಗಳು