ನಿವೇದಿತ ಗೌಡ ಸಿನಿಮಾಕ್ಕೆ ಚಂದನ್‌ ಶೆಟ್ಟಿ ಮ್ಯೂಸಿಕ್‌; ಸೃಜನ್‌ ಲೋಕೇಶ್‌ ಜಿಎಸ್‌ಟಿ ಸಿನಿಮಾದಿಂದ ಬಂತೊಂದು ಹೊಸ ಮಾಹಿತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿವೇದಿತ ಗೌಡ ಸಿನಿಮಾಕ್ಕೆ ಚಂದನ್‌ ಶೆಟ್ಟಿ ಮ್ಯೂಸಿಕ್‌; ಸೃಜನ್‌ ಲೋಕೇಶ್‌ ಜಿಎಸ್‌ಟಿ ಸಿನಿಮಾದಿಂದ ಬಂತೊಂದು ಹೊಸ ಮಾಹಿತಿ

ನಿವೇದಿತ ಗೌಡ ಸಿನಿಮಾಕ್ಕೆ ಚಂದನ್‌ ಶೆಟ್ಟಿ ಮ್ಯೂಸಿಕ್‌; ಸೃಜನ್‌ ಲೋಕೇಶ್‌ ಜಿಎಸ್‌ಟಿ ಸಿನಿಮಾದಿಂದ ಬಂತೊಂದು ಹೊಸ ಮಾಹಿತಿ

  • ಸೃಜನ್‌ ಲೋಕೇಶ್‌ ನಾಯಕ ನಟನಾಗಿ ನಟಿಸಿರುವ ಜಿಎಸ್‌ಟಿ ಸಿನಿಮಾದ ಕುರಿತು ಹೊಸ ವಿವರವೊಂದನ್ನು ಚಿತ್ರತಂಡ ನೀಡಿದೆ. ಈ ಸಿನಿಮಾಕ್ಕೆ ಸ್ವತಃ ಸೃಜನ್‌ ಲೋಕೇಶ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಜಿಎಸ್‌ಟಿ ಸಿನಿಮಾದಲ್ಲಿ ನಿವೇದಿತಾ ಗೌಡ, ಚಂದನ್‌ ಶೆಟ್ಟಿಯೂ ಇದ್ದಾರೆ.

ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಸೃಜನ್ ಲೋಕೇಶ್ ನಾಯಕನಾಗಿ ನಟಿಸುವುದಲ್ಲದೆ, ಪ್ರಥಮ ಬಾರಿಗೆ ನಿರ್ದೇಶನವನ್ನು ಮಾಡುತ್ತಿರುವ ಜಿಎಸ್‌ಟಿ  ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. 
icon

(1 / 7)

(2 / 7)

ಜಿಎಸ್‌ಟಿ ಸಿನಿಮಾದ  ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಬೆಂಗಳೂರಿನಲ್ಲೇ, ಅದರಲ್ಲೂ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ಚಿತ್ರದ ಡಬ್ಬಿಂಗ್ ಸಹ ಸಂಪೂರ್ಣವಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
icon

(3 / 7)

 ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ನಟನೆ: ಜಿಎಸ್‌ಟಿ ಸಿನಿಮಾ ಚಿತ್ರದ ಮತ್ತೊಂದು ವಿಶೇಷವೆಂದರೆ ನಿರ್ಮಾಪಕ ಸಂದೇಶ್ ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಸಿದ್ದಾರೆ. ಅವರ ಪಾತ್ರ ಏನೆಂಬುದನ್ನು ನಿರ್ದೇಶಕ ಸೃಜನ್ ಗುಪ್ತವಾಗಿಟ್ಟಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಮೂರು ಜನ ಅಭಿನಯಿಸುತ್ತಿದ್ದಾರೆ. 
icon

(4 / 7)

ಅಜ್ಜಿ, ಮಗ ಹಾಗೂ ಮೊಮ್ಮಗ ಮೂರು ಜನರನ್ನು ಒಟ್ಟಿಗೆ ತೆರೆಯ ಮೇಲೆ ನೋಡಬಹುದು. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೇ ಸೃಜನ್ ತಮ್ಮ ತಾಯಿ ಹಾಗೂ ಮಗನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪರಿಶುದ್ಧ ಮನೋರಂಜನೆಯ ಕಥಾಹಂದರ ಹೊಂದಿರುವ "ಜಿಎಸ್‌ಟಿ"ಗೆ, " ಘೋಸ್ಟ್ ಇನ್ ಟ್ರಬಲ್" ಎಂಬ ಅಡಿಬರಹವಿದೆ.
icon

(5 / 7)

ತಾರಾಗಣ: ಸೃಜನ್ ಲೋಕೇಶ್ ಅವರಿಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ.  ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್, ಶೋಭ್ ರಾಜ್, ಶರತ್ ಲೋಹಿತಾಶ್ವ, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ, ಮಾಸ್ಟರ್ ಸುಕೃತ್ ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ. 
icon

(6 / 7)

ನಿವೇದಿತಾ ಗೌಡ ನಟನೆಯ ಚಿತ್ರಕ್ಕೆ ಚಂದನ್‌ ಶೆಟ್ಟಿ ಸಂಗೀತ: ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ  ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ     ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ತೇಜಸ್ವಿ ಕೆ ನಾಗ್ ಈ ಚಿತ್ರದ ಸಹ ನಿರ್ದೇಶಕರು ಎಂದು ಚಿತ್ರತಂಡ ಮಾಹಿತಿ ನೀಡಿದೆ. 
icon

(7 / 7)

ಇತರ ಗ್ಯಾಲರಿಗಳು