ಸೋನಲ್ ಮಂಥೆರೊ ಜತೆ ಚರ್ಚ್‌ನಲ್ಲಿ ಪ್ರೇಮಕಾವ್ಯ ಬರೆದ ತರುಣ್ ಸುಧೀರ್, ಕ್ರಿಶ್ಚಿಯನ್ ಸಂಪ್ರದಾಯದಂತೆ ಒಂದಾದ ಜೋಡಿ- Photos
- ಇತ್ತೀಚೆಗೆ ಹಿಂದೂ ಸಂಪ್ರದಾಯದಂತೆ ಬೆಂಗಳೂರಿನಲ್ಲಿ ಶುಭವಿವಾಹವಾಗಿದ್ದ ಸೋನಲ್- ತರುಣ್ ಸುಧೀರ್ ದಂಪತಿ ಇದೀಗ ಮಂಗಳೂರಿನಲ್ಲಿ ಕಿಶ್ಚಿಯನ್ ಸಂಪ್ರದಾಯದಂತೆ ವಿವಾಹ (ರೋಸ್ ಸೆರೆಮನಿ)ವಾಗಿದ್ದಾರೆ.
- ಮಂಗಳೂರು ಚರ್ಚ್‌ನಲ್ಲಿ ಇವರಿಬ್ಬರು ಮಾಡಿಕೊಂಡ ಫೋಟೋಶೂಟ್ ಈಗ ವೈರಲ್ ಆಗಿವೆ.
- ಇತ್ತೀಚೆಗೆ ಹಿಂದೂ ಸಂಪ್ರದಾಯದಂತೆ ಬೆಂಗಳೂರಿನಲ್ಲಿ ಶುಭವಿವಾಹವಾಗಿದ್ದ ಸೋನಲ್- ತರುಣ್ ಸುಧೀರ್ ದಂಪತಿ ಇದೀಗ ಮಂಗಳೂರಿನಲ್ಲಿ ಕಿಶ್ಚಿಯನ್ ಸಂಪ್ರದಾಯದಂತೆ ವಿವಾಹ (ರೋಸ್ ಸೆರೆಮನಿ)ವಾಗಿದ್ದಾರೆ.
- ಮಂಗಳೂರು ಚರ್ಚ್‌ನಲ್ಲಿ ಇವರಿಬ್ಬರು ಮಾಡಿಕೊಂಡ ಫೋಟೋಶೂಟ್ ಈಗ ವೈರಲ್ ಆಗಿವೆ.
(1 / 8)
ಆಗಸ್ಟ್ 10ರಂದು ಸ್ಯಾಂಡಲ್‌ವುಡ್‌ನ ನವಜೋಡಿ ಸೋನಲ್ ಮಂಥೆರೊ ಮತ್ತು ತರುಣ್ ಸುಧೀರ್ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಶುಭವಿವಾಹವಾಗಿದ್ದರು. ಹಿಂದೂ ಸಂಪ್ರದಾಯದಂತೆ ಸೋನಲ್‌ಗೆ ತರುಣ್ ಸುಧೀರ್ ತಾಳಿಕಟ್ಟಿದ್ದರು. ಇದೀಗ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ರೋಸ್ ಸೆರೆಮನಿ ನಡೆದಿದೆ.
(2 / 8)
ಚರ್ಚ್‌ನಲ್ಲಿ ನವ ಜೋಡಿ ಫೋಟೋಶೂಟ್ ಮಾಡಿದ್ದಾರೆ. ಮಂಗಳೂರಿನ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಂಪ್ರದಾಯದಂತೆ ರೋಸ್ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದ ಫೋಟೋಗಳು ಇದೀಗ ಲಭ್ಯವಾಗಿವೆ. ಈ ಕಾರ್ಯಕ್ರಮದಲ್ಲಿ ಸೋನಲ್ ಮತ್ತು ತರುಣ್ ಶುಭ್ರ ಬಿಳಿಬಣ್ಣದ ಉಡುಗೆಯಲ್ಲಿ ಚರ್ಚ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
(3 / 8)
ಇತ್ತೀಚೆಗೆ ಆಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಜೋಡಿ ತಮ್ಮ ಪ್ರೀತಿ, ಮದುವೆಯ ಸಂಭ್ರಮದ ಕುರಿತು ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದರು. ತಾವಿಬ್ಬರು ಒಂದಾಗಲು ದರ್ಶನ್ ಮತ್ತು ಇತರೆ ಗೆಳೆಯರು ಕಾರಣ ಎಂಬ ವಿವರವನ್ನು ತರುಣ್ ಸುಧೀರ್ ನೀಡಿದ್ದರು.
(4 / 8)
ತರುಣ್ ಸುಧೀರ್ ಕಾಟೇರ ಸಿನಿಮಾದ ನಿರ್ದೇಶಕರು. ಇವರು ಕನ್ನಡದ ಪ್ರತಿಭಾನ್ವಿತ ಡೈರೆಕ್ಟರ್. ಚೌಕಾ ಸಿನಿಮಾಕ್ಕೆ ಫಿಲ್ಮ್‌ಫೇರ್ ಅವಾರ್ಡ್ (ಬೆಸ್ಟ್ ಡೈರೆಕ್ಟರ್) ಪಡೆದಿದ್ದರು. ಇದಾದ ಬಳಿಕ ನಟ ದರ್ಶನ್ ಅಭಿನಯಿಸಿದ್ದ ರಾಬರ್ಟ್ ಸಿನಿಮಾದ ನಿರ್ದೇಶನಕ್ಕೆ ಬೆಸ್ಟ್ ಡೈರೆಕ್ಟರ್ ಸೈಮಾ ಅವಾರ್ಡ್ 2022 ಪಡೆದಿದ್ದರು. ತರುಣ್ ನಿರ್ದೇಶನದ ಕಾಟೇರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು.
(5 / 8)
ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ದೇಶಕ ಎಂಬ ಖ್ಯಾತಿಯ ತರುಣ್ ಸುಧೀರ್ ಒಳ್ಳೆಯ ನಟ ಕೂಡ. ಣೇಶನ ಮದುವೆ ಸಿನಿಮಾದಲ್ಲಿ ಬಾಲಕಲಾವಿದರಾಗಿ ಮಿಂಚಿದ್ದರು. ಇದಾದ ಬಳಿಕ ಎಕ್ಸ್‌ಕ್ಯೂಸ್ ಮೀ, ಚಪ್ಪಾಳೆ, ಕ್ರೈಮ್ ಸ್ಟೋರಿ, ವಿಷ್ಣುಸೇನಾ, ಜೊತೆಜೊತೆಯಲಿ, ವಿದ್ಯಾರ್ಥಿ, ನವಗ್ರಹ, ಹೊಂಗನಸು, ಚೆಲುವೆಯೇ ನಿನ್ನೇ ನೋಡಲು, ಹಗ್ಗದ ಕೊನೆ, ಗಜಕೇಸರಿ, ವ್ರಿತ್ರ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
(6 / 8)
ತರುಣ್ ಸುಧೀರ್ ಮತ್ತು ಸೋನಲ್ ಮಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಸಮಾರಂಭದಲ್ಲಿ ಇಬ್ಬರೂ ಸಖತ್ ಎಂಜಾಯ್ ಮಾಡಿದ್ದಾರೆ.
(7 / 8)
ನಟಿ ಸೋನಾಲ್ ಮೊಂತೆರೋ ಅವರು ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿರುವ ಪಂಚತಂತ್ರ ಸಿನಿಮಾದಲ್ಲಿ ನಟಿಸಿ ಗಾಂಧಿನಗರದಲ್ಲಿ ಗಮನ ಸೆಳೆದಿದ್ದರು. ಇದಾದ ಬಳಿಕ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲೂ ನಟಿಸಿದ್ದರು. ಬನಾರಸ್ ಸಿನಿಮಾದಲ್ಲಿ ನಟ ಝೈದ್ ಖಾನ್ ಜತೆ ನಟಿಸಿದ್ದರು. ಗರಡಿಯಲ್ಲಿ ಯಶಸ್ ಸೂರ್ಯನ ಜತೆ ನಟಿಸಿದ್ದರು.
(8 / 8)
ಗರಡಿ ಬಳಿಕ ರೋಲೆಕ್ಸ್, ಬುದ್ಧಿವಂತ 2, ಶುಗರ್ ಫ್ಯಾಕ್ಟರಿ, ಮಾದೇವ, ಮಿ. ನಟವರ್ ಲಾಲ್, ಸರೋಜಿನಿ, ತಲ್ವಾರ್ ಪೇಟೆ, ಭಗವಾನ್ ಶ್ರೀ ಕೃಷ್ಣ ಪರಮಾತ್ಮ, ಮಾರ್ಗರೇಟ್ ಲವರ್ ಆಫ್ ರಾಮಚಾರಿ ಮುಂತಾದ ಪ್ರಾಜೆಕ್ಟ್‌ಗಳಿಗೆ ಸಹಿಹಾಕಿದ್ದರು. ಇವುಗಳಲ್ಲಿ ಕೆಲವು ಸಿನಿಮಾಗಳು ಈಗಾಗಲೇ ಬಿಡುಗಡೆಯಾಗಿವೆ. ಇನ್ನು ಕೆಲವು ಸಿನಿಮಾಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿವೆ.
ಇತರ ಗ್ಯಾಲರಿಗಳು