ತರುಣ್‌ ಸುಧೀರ್‌- ಸೋನಲ್‌ ಮೊಂತೆರೋ ಪ್ರೀತಿ ಸಸಿಗೆ ನೀರು ಹಾಕಿ ಬೆಳೆಸಿದ್ದೇ ದರ್ಶನ್‌; ಅಣ್ಣನ ಬಗ್ಗೆ ತರುಣ್‌ ಹೇಳಿದ್ದಿಷ್ಟು-sandalwood news tharun sudhir talked about his marriage with sonal monteiro and remembers brother darshans help mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತರುಣ್‌ ಸುಧೀರ್‌- ಸೋನಲ್‌ ಮೊಂತೆರೋ ಪ್ರೀತಿ ಸಸಿಗೆ ನೀರು ಹಾಕಿ ಬೆಳೆಸಿದ್ದೇ ದರ್ಶನ್‌; ಅಣ್ಣನ ಬಗ್ಗೆ ತರುಣ್‌ ಹೇಳಿದ್ದಿಷ್ಟು

ತರುಣ್‌ ಸುಧೀರ್‌- ಸೋನಲ್‌ ಮೊಂತೆರೋ ಪ್ರೀತಿ ಸಸಿಗೆ ನೀರು ಹಾಕಿ ಬೆಳೆಸಿದ್ದೇ ದರ್ಶನ್‌; ಅಣ್ಣನ ಬಗ್ಗೆ ತರುಣ್‌ ಹೇಳಿದ್ದಿಷ್ಟು

  • ಸ್ಯಾಂಡಲ್‌ವುಡ್‌ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ನಟಿ ಸೋನಲ್‌ ಮೊಂತೆರೋ ಇನ್ನೇನು ಶೀಘ್ರದಲ್ಲಿ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾರೆ. ಈ ನಡುವೆ, ಮಾಧ್ಯಮಗಳ ಮುಂದೆ ಬಂದ ಈ ಜೋಡಿ, ಪ್ರೀತಿ ಹುಟ್ಟಿದ ಕಥೆ ಸೇರಿ ಮದುವೆ ತಯಾರಿ ಮತ್ತು ದರ್ಶನ್‌ ಅಣ್ಣನ ಬಗ್ಗೆಯೂ ಹೇಳಿಕೊಂಡಿದೆ.

ಆಗಸ್ಟ್ 10ರಂದು ಆರತಕ್ಷತೆ ನಡೆದರೆ, 11ರ ಭಾನುವಾರ ಬೆಳಗ್ಗೆ 10;50 ರಿಂದ 11;35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಜೋಡಿ ಸಪ್ತಪದಿ ತುಳಿಯಲಿದೆ. 
icon

(1 / 6)

ಈಗಾಗಲೇ ಮದುವೆ ಹಿನ್ನೆಲೆಯಲ್ಲಿ ಸಕಲ ಸಿದ್ದತೆಗಳು ಶುರುವಾಗಿವೆ. ಪರಿಸರ ಸ್ನೇಹಿ ಲಗ್ನ ಪತ್ರಿಕೆ ಮೂಲಕವೂ ಗಮನ ಸೆಳೆದಿದೆ ಈ ಜೋಡಿ. ಅದರಂತೆ ಬೆಂಗಳೂರಿನ ಮೈಸೂರು ರಸ್ತೆ, ಆರ್‌ವಿ ಕಾಲೇಜ್‌ ಬಳಿಯ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಈ ಜೋಡಿಯ ಅದ್ಧೂರಿ ವಿವಾಹ ನೆರವೇರಲಿದೆ. 
icon

(2 / 6)

ಇದೀಗ ತಮ್ಮ ಮದುವೆ ಬಗ್ಗೆ ಒಂದಷ್ಟು ಮಾಹಿತಿ ನೀಡಲೆಂದೇ ಮಾಧ್ಯಮದ ಮುಂದೆ ಬಂದಿತ್ತು ತರುಣ್‌ ಸೋನಲ್‌ ಜೋಡಿ. ಈ ವೇಳೆ ನಮ್ಮ ಪ್ರೀತಿ ಮದುವೆ ವರೆಗೂ ಬರಲು ದರ್ಶನ್‌ ಅಣ್ಣನೇ ಕಾರಣ ಎಂದೂ ಹೇಳಿದ್ದಾರೆ ತರುಣ್.‌ 
icon

(3 / 6)

ರಾಬರ್ಟ್‌ ಸಿನಿಮಾ ಸಮಯದಿಂದಲೇ ಸೋನಲ್‌ ಮತ್ತು ತರುಣ್‌ ನಡುವೆ ಏನೋ ನಡೀತಿದೆ ಎಂಬ ಮಾತು ಕೇಳಿಬಂದಿತ್ತು. ಶೂಟಿಂಗ್‌ ಸೆಟ್‌ನಲ್ಲಿ ದರ್ಶನ್‌ ಅವರೇ ಬೇಕು ಅಂತ ತರುಣ್‌ ಅವರನ್ನು ರೇಗಿಸ್ತಿದ್ರಂತೆ. 
icon

(4 / 6)

ತಮಾಷೆಯಾಗಿಯೇ ಮದ್ವೆ ಆಗ್ತಿಯಾ ಅಂತೆಲ್ಲ ಕೇಳ್ತಿದ್ರು. ಸೆಟ್‌ನ ಇತರೆ ಕಲಾವಿದರಿಗೂ ಈ ವಿಚಾರ ಗೊತ್ತಾಗಿತ್ತು. ಹರಿದಾಡಿದ ವದಂತಿಗಳ ಬಗ್ಗೆ ನಾವಿಬ್ಬರೂ ಮಾತನಾಡಿದ್ವಿ. ನಿಧಾನಕ್ಕೆ ನಮ್ಮ ನಡುವಿನ ಸಂಬಂಧ ಗಟ್ಟಿಯಾಗ್ತಾ ಹೋಯಿತು. ಸ್ನೇಹ ಪ್ರೀತಿಯಾಗಿ ತಿರುಗಿತು. 
icon

(5 / 6)

ಕಾಟೇರ ಸಿನಿಮಾ ರಿಲೀಸ್‌ ಆಗಲಿ, ಆ ಸಿನಿಮಾ ನನ್ನ ಕೆರಿಯರ್‌ಗೆ ತುಂಬ ಮಹತ್ವದ್ದು ಎಂದು ಒಂದಷ್ಟು ಟೈಮ್‌ ತೆಗೊಂಡಿದ್ದೆ. ಸಿನಿಮಾಕ್ಕೆ ಸಿಕ್ಕ ರೆಸ್ಪಾನ್ಸ್‌ ನೋಡಿ ಖುಷಿಯಾಯ್ತು. ದರ್ಶನ್‌ ಅವರೇ ಸೋನಲ್‌ ಮನೆಯಲ್ಲಿ ಮಾತನಾಡಿದ್ರು ಎಂದಿದ್ದಾರೆ ತರುಣ್.‌ ಒಟ್ಟಿನಲ್ಲಿ ಈ ಪ್ರೀತಿ ಸಸಿಗೆ ನೀರು ಹಾಕಿ ಬೆಳೆಸಿದ್ದೇ ದರ್ಶನ್‌ ಎಂದಿದ್ದಾರೆ.  
icon

(6 / 6)

ಇತರ ಗ್ಯಾಲರಿಗಳು