ಕನ್ನಡ ಸುದ್ದಿ  /  Photo Gallery  /  Sandalwood News Top 8 Kannada Songs About Kaveri River Kannada Film Songs List Karnataka Bandh Kaveri Water Dispute Pcp

Kannada Film Songs: ಕಾವೇರಿ ಏಕೆ ಓಡುವೆ, ಕರ್ನಾಟಕ ಬಂದ್‌ ಸಮಯದಲ್ಲಿ ಕಾವೇರಿ ನದಿಗೆ ಸಂಬಂಧಪಟ್ಟ ಈ 8 ಜನಪ್ರಿಯ ಚಿತ್ರಗೀತೆಗಳನ್ನು ಕೇಳಿ

  • Kannada Film Songs: ಕನ್ನಡ ನಾಡಿಗೆ ಕಾವೇರಿ ನದಿ ಉಸಿರು. ಸ್ಯಾಂಡಲ್‌ವುಡ್‌ ಸಿನಿಮಾಗಳಲ್ಲಿ ಕಾವೇರಿ ನದಿಗೆ ಸಂಬಂಧಪಟ್ಟಂತೆ ಸಾಕಷ್ಟು ಸುಮಧುರ ಹಾಡುಗಳು ಬಂದಿವೆ. ಕಾವೇರಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಕರ್ನಾಟಕ ಬಂದ್‌ ನಡೆಯುತ್ತಿರುವ ಈ ಸಮಯದಲ್ಲಿ ಕಾವೇರಿ ನದಿಗೆ ಸಂಬಂಧಪಟ್ಟ ಈ ಸುಂದರ ಹಾಡುಗಳನ್ನು ನೆನಪಿಸಿಕೊಳ್ಳೋಣ.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದೇ ಸಮಯದಲ್ಲಿ ಕಾವೇರಿ ನದಿಗೆ ಸಂಬಂಧಪಟ್ಟ ಈ ಸುಂದರ ಹಾಡುಗಳ ವಿವರ ಇಲ್ಲಿದೆ.
icon

(1 / 9)

ಕೊಡಗಿನ ಕಾವೇರಿ.. ನೀ ಬೆಡಗಿನ ವಯ್ಯಾರಿ: ಈ ಹಾಡು ನೆನಪಿದೆಯೇ ನಿಮಗೆ. ಇದು 1971ರ ಶರಪಂಜರ ಸಿನಿಮಾದ ಹಾಡು. ಕಲ್ಪನಾ ಮತ್ತು ಗಂಗಾಧರ್‌  ನಟಿಸಿದ ಈ ಸಿನಿಮಾದ ಈ ಹಾಡು ಎಂದೆಂದಿಗೂ ಕೇಳಲು ಮಧುರ.
icon

(2 / 9)

ಕನ್ನಡ ನಾಡಿನ ಜೀವನದಿ ಈ ಕಾವೇರಿ: ಈ ಹಾಡು ಕೇಳುವಾಗ ಈಗಲೂ ಕನ್ನಡಿಗರ ಹೃದಯ ತುಂಬಿಬರುತ್ತದೆ.  1996ರ ಜೀವನದಿ ಎಂಬ ಸಿನಿಮಾದಲ್ಲಿ ಡಾ. ವಿಷ್ಣುವರ್ಧನ್‌ ನಟಿಸಿದ ಸಿನಿಮಾದಲ್ಲಿದ್ದ  ಕನ್ನಡ ನಾಡಿನ ಜೀವನದಿ ಈ ಕಾವೇರಿ ಹಾಡನ್ನು ಈಗಲೂ ಕನ್ನಡಿಗರು ಮತ್ತೆಮತ್ತೆ ಕೇಳುತ್ತಿರುತ್ತಾರೆ.
icon

(3 / 9)

ಜನ್ಮ ನೀಡುತ್ತಾಳೆ ನಮ್ಮ ತಾಯಿ: 1993ರ ಜಗ್ಗೇಶ್‌ ನಟನೆಯ ಬೇವುಬೆಲ್ಲ ಸಿನಿಮಾದಲ್ಲಿ  "ಜನ್ಮ ನೀಡುತ್ತಾಳೆ ನಮ್ಮ ತಾಯಿ, ಪಾಪ ಕಳೆಯುವ ತಾಯಿ" ಎಂದು ಕಾವೇರಿ ಹಾಡು ಸುಮಧುರವಾಗಿದೆ.
icon

(4 / 9)

ಕಾವೇರಮ್ಮ ಕಾಪಾಡಮ್ಮ: ರೆಬಲ್‌ ಸ್ಟಾರ್‌ ಅಂಬರೀಷ್‌ ಅವರ ಹಲವು ಸಿನಿಮಾಗಳಲ್ಲಿ ಕಾವೇರಿ ನದಿ, ಕಾವೇರಿ ನೀರಿನ ಉಲ್ಲೇಖ ಇದೆ. 1992ರ ಸೋಲಿಲ್ಲದ ಸರದಾರ ಚಿತ್ರದಲ್ಲಿ "ಕಾವೇರಮ್ಮ ಕಾಪಾಡಮ್ಮ" ಎಂಬ ಹಾಡು ಈಗಲೂ ಜನಪ್ರಿಯತೆ ಉಳಿಸಿಕೊಂಡಿದೆ. 1994ರ ಮಂಡ್ಯದ ಗಂಡು ಸಿನಿಮಾದ ಕಾವೇರಿ ನೀರನು ಕುಡಿದು, ಕಬ್ಬಿನ ಹಾಲನ್ನು ಕುಡಿದು" ಎಂಬ ಹಾಡು ಕೇಳಿದರೆ ಕನ್ನಡಿಗರಿಗೆ ಈಗಲೂ ಎದೆಯುಬ್ಬಿ ಬರುತ್ತದೆ.
icon

(5 / 9)

ಕಾವೇರಿ ಏಕೆ ಓಡುವೆ:  ಡಾ. ರಾಜ್‌ಕುಮಾರ್‌ ಅಭಿನಯದ ಯಾರಿವನು ಹಾಡಿದು. 1984ರ ಈ ಚಿತ್ರ ಕಾವೇರಿ ನದಿಗೆ ನೇರವಾಗಿ ಸಂಬಂಧಿಸಿದ್ದಲ್ಲ. ನಾಯಕಿ ಕಾವೇರಿಯ ಕುರಿತಾದ ಈ ಹಾಡನ್ನು ಕಾವೇರಿ ನದಿಗೂ ಅನ್ವಯಿಸಬಹುದು. ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ಏಕೆ ಓಡುವೆ ಎಂದುಕೊಳ್ಳಬಹುದು. 
icon

(6 / 9)

ಕಾವೇರಿ ಸೀಮೆಯ ನಾಯಕನಿವನು: ದರ್ಶನ್‌ ನಟನೆಯ ಸಾರಥಿ ಚಿತ್ರದ ಈ ಹಾಡು ಕೂಡ ಜನಪ್ರಿಯ ಕಾವೇರಿ ಹಾಡು. ಈ ಸಿನಿಮಾವನ್ನು ದಿನಕರ್‌ ತೂಗದೀಪ ನಿರ್ದೇಶನ ಮಾಡಿದ್ದರು.
icon

(7 / 9)

ಹುಚ್ಚ ವೆಂಕಟ್‌ ಅವರ ಪೊರ್ಕಿ ಸಿನಿಮಾದಲ್ಲಿಯೂ ಕಾವೇರಿ ನಿನ್ನ ಮಡಿಲಲ್ಲಿ ಎಂಬ ಸುಂದರ ಹಾಡಿದೆ. 
icon

(8 / 9)

ಚೈತ್ರದ ಪ್ರೇಮಾಂಜಲಿ ಚಿತ್ರದ ಕಾವೇರಿ ತೀರದಲ್ಲಿ ಮುಂಗಾರಿಗೆ ಎಂಬ ಹಾಡು ಕೇಳಲು ಇಂಪಾಗಿದೆ. ಇದೇ ರೀತಿ ಹಲವು ಸಿನಿಮಾ ಹಾಡುಗಳಲ್ಲಿ ಕನ್ನಡನಾಡಿನ ಕಾವೇರಿಯ ಸುಂದರ ಹಾಡುಗಳಿವೆ. 
icon

(9 / 9)

ಇತರ ಗ್ಯಾಲರಿಗಳು