ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Darshan Case: ದರ್ಶನ್‌ ಪರಪ್ಪನ ಅಗ್ರಹಾರಕ್ಕೆ ಹೋಗಿಲ್ಲವೇಕೆ? 4 ಆರೋಪಿಗಳ ಕಸ್ಟಡಿ ವಿಸ್ತರಣೆಗೆ 5 ಕಾರಣಗಳು

Darshan Case: ದರ್ಶನ್‌ ಪರಪ್ಪನ ಅಗ್ರಹಾರಕ್ಕೆ ಹೋಗಿಲ್ಲವೇಕೆ? 4 ಆರೋಪಿಗಳ ಕಸ್ಟಡಿ ವಿಸ್ತರಣೆಗೆ 5 ಕಾರಣಗಳು

  • ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಸೇರಿದ್ದಾರೆ. ಪವಿತ್ರಾ ಗೌಡ ಸಹಿತ 13 ಆರೋಪಿಗಳ ವಿಚಾರಣಾ ಅವಧಿ ಮುಗಿದಿದ್ದರಿಂದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ದರ್ಶನ್‌ ಮತ್ತು ಇನ್ನಿತರ 3 ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. 

ಕನ್ನಡ ನಟ ದರ್ಶನ್‌ ಸೇರಿದಂತೆ ಒಟ್ಟು ನಾಲ್ಕು ಆರೋಪಿಗಳ ಪೊಲೀಸ್‌ ಕಸ್ಟಡಿ ವಿಸ್ತರಣೆ ಮಾಡಲಾಗಿದೆ. ಎರಡು ದಿನಗಳ ಕಾಲ ಕಸ್ಟಡಿ ವಿಸ್ತರಣೆ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ.  ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪವಿತ್ರ ಗೌಡ ಮತ್ತು ಇತರೆ 13 ಆರೋಪಿಗಳ ವಿಚಾರಣೆ ಪೂರ್ಣಗೊಂಡಿರುವುದರಿಂದ ಇವರೆಲ್ಲ ಪರಪ್ಪನ ಅಗ್ರಹಾರ ಸೇರಿದ್ದಾರೆ.  A2 ದರ್ಶನ್‌, A9 ಧನರಾಜ್, A10 ವಿನಯ್ ಹಾಗೂ A14 ಪ್ರದೋಶ್‌ ಅವರ ಕಸ್ಟಡಿ ವಿಸ್ತರಣೆ ಮಾಡಲಾಗಿದೆ. ಜೂನ್‌ 22 ಸಂಜೆ 5 ಗಂಟೆಯ ಮೊದಲು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು  ಸೂಚಿಸಲಾಗಿದೆ. ವಿವಿಧ ವರದಿಗಳ ಪ್ರಕಾರ ದರ್ಶನ್‌ ಮತ್ತು ಉಳಿದ ಮೂವರ ಕಸ್ಟಡಿ ವಿಸ್ತರಣೆಗೆ ಕಾರಣವಾದ ಅಂಶಗಳು ಇಲ್ಲಿದೆ. 
icon

(1 / 6)

ಕಾರಣ 1: ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿ ಇದ್ದಾರೆ. ಪ್ರತ್ಯಕ್ಷ ಸಾಕ್ಷಿಗಳು ನೀಡಿರುವ ಹೇಳಿಕೆಗಳ ಆಧಾರದ ಮೇಲೆ ದರ್ಶನ್‌ ಅವರನ್ನು ವಿಚಾರಣೆ ನಡೆಸಬೇಕೆಂದು ನ್ಯಾಯಾಲಯಕ್ಕೆ ಕಾರಣ ನೀಡಲಾಗಿದೆ. 
icon

(2 / 6)

ಕಾರಣ 2:  ಮೊಬೈಲ್ ನೆಟ್​ವರ್ಕಿಂಗ್, ಎಫ್​ಎಸ್​ಎಲ್ ವರದಿ ಸೇರುದತೆ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ವಿಚಾರಣೆ ನಡೆಸಬೇಕಿದೆ.  
icon

(3 / 6)

ಕಾರಣ 3: ರೇಣುಕಾ ಸ್ವಾಮಿಯ ಶವ ಎಸೆಯಲು ನೀಡಲಾದ 37 ಲಕ್ಷ ರೂಪಾಯಿ ಹಣದ ಮೂಲದ ಪತ್ತೆ ಮಾಡಬೇಕಿದೆ. 
icon

(4 / 6)

ಕಾರಣ 4: ರೇಣುಕಾ ಸ್ವಾಮಿಗೆ ಶಾಕ್‌ ನೀಡಿದ್ದ ಧನರಾಜ್‌ ಮೊಬೈಲ್‌ ಹುಡುಕಾಟಕ್ಕೆ ಸಹಕರಿಸುತ್ತಿಲ್ಲ. ಈತನೇ ರೇಣುಕಾ ಸ್ವಾಮಿಯ ಮೊಬೈಲ್‌ ಅನ್ನು ಮೋರಿಗೆ ಎಸೆದವ. ಮೊಬೈಲ್‌ ಹುಡುಕಾಟದಲ್ಲಿ ಈತನ ಸಹಕಾರ ಸರಿಯಾಗಿ ದೊರಕುತ್ತಿಲ್ಲ ಎನ್ನುವುದು ಇನ್ನೊಂದು ಕಾರಣ.
icon

(5 / 6)

ಕಾರಣ 5: ವಿನಯ್‌ ಮತ್ತು  ದೀಪಕ್‌ ತನಿಖೆಗೆ ಸರಿಯಾದ ಸಹಕಾರ ನೀಡುತ್ತಿಲ್ಲ. ಅವರ ಇನ್ನಷ್ಟು ವಿಚಾರಣೆ ಅಗತ್ಯವಿದೆ ಎಂಬ ಕಾರಣವನ್ನೂ ಪೊಲೀಸರು ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ. ದರ್ಶನ್‌ ಪರ ವಕೀಲರ ತಕರಾರು ಕಾರಣದಿಂದ ಕೇವಲ ಎರಡೇ ದಿನಗಳ ಕಾಲ ನ್ಯಾಯಾಲಯವು ಪೊಲೀಸ್‌ ಕಸ್ಟಡಿಗೆ ನೀಡಿದೆ.  
icon

(6 / 6)

ಇತರ ಗ್ಯಾಲರಿಗಳು