ಕಿಚ್ಚ ಸುದೀಪ್‌ ʻಬಿಲ್ಲ ರಂಗ ಬಾಷಾʼ ಚಿತ್ರಕ್ಕೆ ಮಂಗಳೂರು ಬೆಡಗಿಯೇ ಹೀರೋಯಿನ್‌?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಿಚ್ಚ ಸುದೀಪ್‌ ʻಬಿಲ್ಲ ರಂಗ ಬಾಷಾʼ ಚಿತ್ರಕ್ಕೆ ಮಂಗಳೂರು ಬೆಡಗಿಯೇ ಹೀರೋಯಿನ್‌?

ಕಿಚ್ಚ ಸುದೀಪ್‌ ʻಬಿಲ್ಲ ರಂಗ ಬಾಷಾʼ ಚಿತ್ರಕ್ಕೆ ಮಂಗಳೂರು ಬೆಡಗಿಯೇ ಹೀರೋಯಿನ್‌?

  • ಅನೂಪ್‌ ಭಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿದೆ ʻಬಿಲ್ಲ ರಂಗ ಬಾಷಾʼ ಸಿನಿಮಾ. ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್‌ ಆಗಲಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ನಾಯಕನಾಗಿ ನಟಿಸುತ್ತಿದ್ದಾರೆ. ಈ ನಡುವೆ ಇದೇ ಸಿನಿಮಾದ ನಾಯಕಿ ಯಾರು? ಈ ಪ್ರಶ್ನೆಗೆ ಉತ್ತರವೊಂದು ಹರಿದಾಡುತ್ತಿದೆ. ಅಚ್ಚರಿಯ ವಿಚಾರ ಏನೆಂದರೆ ಕರ್ನಾಟಕ ಮೂಲದ ನಟಿಯೇ ನಾಯಕಿಯಂತೆ.

ಕಳೆದ ವರ್ಷದ ಸೆಪ್ಟೆಂಬರ್‌ 2ರಂದು ಸುದೀಪ್‌ ಹುಟ್ಟು ಹಬ್ಬದ ಪ್ರಯುಕ್ತ ʻಬಿಲ್ಲ ರಂಗ ಬಾಷಾʼ ಸಿನಿಮಾದ ಕಾನ್ಸೆಪ್ಟ್‌ ವಿಡಿಯೋ ಬಿಡುಗಡೆ ಆಗಿತ್ತು. ಅಲ್ಲಿಂದೀಚೆಗೆ ಈ ಸಿನಿಮಾದ ಹೊಸ ಅಪ್‌ಡೇಟ್‌ ಸಿಕ್ಕಿರಲಿಲ್ಲ.
icon

(1 / 7)

(instagram)

ತೆಲುಗಿನಲ್ಲಿ ʻಹನುಮಾನ್‌ʼ ಸಿನಿಮಾ ನಿರ್ಮಾಣ ಮಾಡಿದ್ದ ಪ್ರೈಂ ಶೋ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ʻಬಿಲ್ಲ ರಂಗ ಬಾಷಾʼ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ ಎಂಬುದು ಇತ್ತೀಚೆಗಷ್ಟೇ ರಿವೀಲ್‌ ಆಗಿತ್ತು.
icon

(2 / 7)

ಪ್ರೈಂ ಶೋ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಲ್ಲಿ ಕೆ ನಿರಂಜನ್‌ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ʻಬಿಲ್ಲ ರಂಗ ಬಾಷಾʼ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
icon

(3 / 7)

ಇದೀಗ ಇದೇ ʻಬಿಲ್ಲ ರಂಗ ಬಾಷಾʼ ಚಿತ್ರಕ್ಕೆ ನಾಯಕಿ ಯಾರು? ಈ ವಿಚಾರಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟಿಯ ಹೆಸರು ಮುನ್ನೆಲೆಗೆ ಬಂದಿದೆ. ಅಚ್ಚರಿಯ ವಿಚಾರ ಏನೆಂದರೆ ಆ ನಟಿ ಕರ್ನಾಟಕ ಮೂಲದವರೇ!
icon

(4 / 7)

ಹೌದು, ಆ ನಟಿ ಬೇರಾರು ಅಲ್ಲ ಪೂಜಾ ಹೆಗ್ಡೆ. ಮಂಗಳೂರು ಮೂಲದ ಪೂಜಾ, ʻಬಿಲ್ಲ ರಂಗ ಬಾಷಾʼ ಸಿನಿಮಾ ಮೂಲಕ ಕನ್ನಡಕ್ಕೆ ಬಂದಿದ್ದೇ ಆದರೆ, ಇದು ಅವರ ಮೊದಲ ಕನ್ನಡ ಸಿನಿಮಾ ಆಗಿರಲಿದೆ.
icon

(5 / 7)

ಸೋಷಿಯಲ್‌ ಮೀಡಿಯಾದಲ್ಲಿ ಹೀಗೊಂದು ವಿಚಾರ ಇದೀಗ ಗುಲ್ಲೆದ್ದಿದೆ. ಕಿಚ್ಚ ಸುದೀಪ್‌ಗೆ ಪೂಜಾ ಹೆಗ್ಡೆ ನಾಯಕಿ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದಷ್ಟೇ ಅಧಿಕೃತವಾಗಿ ಘೋಷಣೆ ಆಗಬೇಕಿದೆ.
icon

(6 / 7)

ಸದ್ಯ ಪೂಜಾ ಹೆಗ್ಡೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರೆಟ್ರೋ ಬಿಡುಗಡೆಗೆ ರೆಡಿಯಾಗಿದ್ದರೆ, ಕೂಲಿ ಸಿನಿಮಾದಲ್ಲಿಯೂ ನಟಿಸಿದ್ದಾರೆ. ತಮಿಳಿನ ಜನ ನಾಯಗನ್‌ ಮತ್ತು ಕಾಂಚನಾ 4ರಲ್ಲಿಯೂ ನಟಿಸುತ್ತಿದ್ದಾರೆ.
icon

(7 / 7)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು