ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯಶ್‌ ‘Toxic’ ಸಿನಿಮಾದಿಂದ ಕರೀನಾ ಕಪೂರ್‌ ಔಟ್; ಸೌತ್‌ ಲೇಡಿ ಸೂಪರ್‌ಸ್ಟಾರ್‌ಗೆ ಮಣೆ ಹಾಕ್ತಾ ಚಿತ್ರತಂಡ?

ಯಶ್‌ ‘TOXIC’ ಸಿನಿಮಾದಿಂದ ಕರೀನಾ ಕಪೂರ್‌ ಔಟ್; ಸೌತ್‌ ಲೇಡಿ ಸೂಪರ್‌ಸ್ಟಾರ್‌ಗೆ ಮಣೆ ಹಾಕ್ತಾ ಚಿತ್ರತಂಡ?

  • ಕಳೆದ ಹಲವು ದಿನಗಳಿಂದ ಬಹು ಚರ್ಚೆಯಲ್ಲಿರುವ ಟಾಕ್ಸಿಕ್‌ ಪಾತ್ರವರ್ಗದ ವಿಚಾರ, ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ವರೆಗೂ ಬಾಲಿವುಡ್‌ ನಟಿ ಕರೀನಾ ಕಪೂರ್‌ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದ್ರೀಗ ಅವರು ಈ ಚಿತ್ರದಲ್ಲಿ ನಟಿಸುವುದಿಲ್ಲವಂತೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಟಾಕ್ಸಿಕ್‌ ಸಿನಿಮಾ ನಿರ್ಮಾಣವಾಗುತ್ತಿರುವುದು ಗೊತ್ತಿರುವ ಸಂಗತಿ. 
icon

(1 / 5)

ಮಲಯಾಳಂ ಮೂಲದ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಈ ಸಿನಿಮಾ ನಿರ್ದೇಶನ ಮಾಡಿದರೆ, ಕೆವಿಎನ್‌ ಪ್ರೊಡಕ್ಷನ್‌ ಸಂಸ್ಥೆ ಚಿತ್ರ ನಿರ್ಮಿಸುತ್ತಿದೆ. 
icon

(2 / 5)

ಪಾತ್ರ ವರ್ಗದ ವಿಚಾರವಾಗಿಯೂ ಟಾಕ್ಸಿಕ್‌ ಸಿನಿಮಾ ಸಖತ್‌ ಟಾಕ್ಸ್‌ ಕ್ರಿಯೆಟ್‌ ಮಾಡುತ್ತಲೇ ಬಂದಿದೆ. ಭಾರತೀಯ ಚಿತ್ರೋದ್ಯಮದ ಘಟಾನುಘಟಿಗಳೇ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. 
icon

(3 / 5)

ಹೀಗಿರುವಾಗಲೇ ಇದೇ ಚಿತ್ರದಲ್ಲಿ ಯಶ್‌ ಸಹೋದರಿಯಾಗಿ ಕರೀನಾ ಕಪೂರ್‌ ನಟಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಈಗ ಡೇಟ್ಸ್‌ ಹೊಂದಾಣಿಕೆ ಸಮಸ್ಯೆಯಿಂದ ಕರೀನಾ ಹೊರನಡೆದಿದ್ದಾರಂತೆ.  
icon

(4 / 5)

ಇನ್ನೊಂದೆಡೆ, ಕರೀನಾ ಅವರ ಸ್ಥಾನಕ್ಕೆ, ಸೌತ್‌ ಲೇಡಿ ಸೂಪರ್‌ಸ್ಟಾರ್‌ ನಯನತಾರಾ ಅವರ ಆಗಮನವಾಗಲಿದ್ದು, ಯಶ್‌ ಅಕ್ಕನಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. 
icon

(5 / 5)

IPL_Entry_Point

ಇತರ ಗ್ಯಾಲರಿಗಳು