ಈ ವಾರ ತೆರೆ ಕಾಣುವ ಕನ್ನಡ ಸಿನಿಮಾಗಳು: ಕೋರ, ಯುದ್ಧಕಾಂಡದಿಂದ ವೀರ ಚಂದ್ರಹಾಸನ ತನಕ ಇಲ್ಲಿದೆ 6 ಚಿತ್ರಗಳ ವಿವರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ವಾರ ತೆರೆ ಕಾಣುವ ಕನ್ನಡ ಸಿನಿಮಾಗಳು: ಕೋರ, ಯುದ್ಧಕಾಂಡದಿಂದ ವೀರ ಚಂದ್ರಹಾಸನ ತನಕ ಇಲ್ಲಿದೆ 6 ಚಿತ್ರಗಳ ವಿವರ

ಈ ವಾರ ತೆರೆ ಕಾಣುವ ಕನ್ನಡ ಸಿನಿಮಾಗಳು: ಕೋರ, ಯುದ್ಧಕಾಂಡದಿಂದ ವೀರ ಚಂದ್ರಹಾಸನ ತನಕ ಇಲ್ಲಿದೆ 6 ಚಿತ್ರಗಳ ವಿವರ

  • ಈ ವಾರ ಯುದ್ಧಕಾಂಡ, ವೀರಚಂದ್ರಹಾಸ, ಕೋರ ಸೇರಿದಂತೆ ಆರು ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಇವುಗಳಲ್ಲಿ ಯುದ್ಧಕಾಂಡ, ವೀರ ಚಂದ್ರಹಾಸ, ಕೋರ ಸಿನಿಮಾಗಳು ಹೆಚ್ಚಿನ ನಿರೀಕ್ಷೆ ಹುಟ್ಟುಹಾಕಿವೆ. ಜತೆಗೆ ಹೊಸಬರ ಮೂರು ಸಿನಿಮಾಗಳೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ.

ಈ ವಾರ ತೆರೆ ಕಾಣುವ ಕನ್ನಡ ಸಿನಿಮಾಗಳು: ಈ ವಾರ ಯುದ್ಧಕಾಂಡ, ವೀರಚಂದ್ರಹಾಸ, ಕೋರ ಸೇರಿದಂತೆ ಆರು ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಇವುಗಳಲ್ಲಿ ಯುದ್ಧಕಾಂಡ, ವೀರ ಚಂದ್ರಹಾಸ, ಕೋರ ಸಿನಿಮಾಗಳು ಹೆಚ್ಚಿನ ನಿರೀಕ್ಷೆ ಹುಟ್ಟುಹಾಕಿವೆ. ಜತೆಗೆ ಹೊಸಬರ ಮೂರು ಸಿನಿಮಾಗಳೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ.
icon

(1 / 7)

ವೀರ ಚಂದ್ರಹಾಸ: ರವಿ ಬಸ್ರೂರು ನಿರ್ದೇಶನದ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.  ಯಕ್ಷಗಾನ ಪ್ರಸಂಗ ಆಧರಿತ ಚಿತ್ರ. ಈ ಸಿನಿಮಾ ಏಪ್ರಿಲ್‌ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
icon

(2 / 7)

ಕೋರ: ಸುನಾಮಿ ಕಿಟ್ಟಿ ಅಭಿನಯದದ ಕೋರಾ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಸಕಲೇಶಪುರ, ಶೃಂಗೇರಿ, ಉಡುಪಿ, ಮಂಗಳೂರು ಮುಂತಾದ ಕಡೆ ಈ ಸಿನಿಮಾದ ಶೂಟಿಂಗ್‌ ನಡೆದಿದೆ. ಬುಡಕಟ್ಟು ಜನಾಂಗ, ರಾಕ್ಷಸನೊಬ್ಬನ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ.
icon

(3 / 7)

ಯುದ್ಧಕಾಂಡ: ಅಜಯ್‌ ರಾವ್‌ ನಿರ್ಮಾಣ ಮತ್ತು ನಟನೆಯ ಯುದ್ಧ ಕಾಂಡ ಸಿನಿಮಾ ಈ ವಾರ ತೆರೆ ಕಾಣಲಿದೆ. ಮಗಳ ಮೇಲೆ ಅತ್ಯಾಚಾರ ಮಾಡಿರುವ ಅತ್ಯಾಚಾರಿಯ ವಿರುದ್ಧ ಸೇಡು ತೀರಿಸಿಕೊಂಡ ತಾಯಿಯ ಕೋರ್ಟ್‌ ಡ್ರಾಮಾದ ಕಥೆಯನ್ನು ಈ ಸಿನಿಮಾ ಹೊಂದಿದೆ.
icon

(4 / 7)

ಪ್ರೀತಿಯ ಹುಚ್ಚ: ವಿ. ಕುಮಾರ್‌ ನಿರ್ದೇಶನದ ಪ್ರೀತಿಯ ಹುಚ್ಚ ಸಿನಿಮಾ ಈ ವಾರ ಬಿಡುಗಡೆಯಾಗಲಿದೆ. ನಾಯಕ ವಿಜಯ್‌ಗೆ ಕುಂಕಮ್‌ ಹರಿಹರ್‌ ಜೋಡಿಯಾಗಿದ್ದಾರೆ. ದಲಿತ ಯುವತಿಯೊಬ್ಬಳನ್ನು ಮದುವೆಯಾದ ಬಳಿಕ ಆಕೆಯ ಪತಿಯ ಮನೆಯಲ್ಲಿ ಆಕೆ ಅನುಭವಿಸಿದ ಕಷ್ಟ, ಮುಂದೆ ಆಕೆ ಕಾಮಾಟಿಪುರ ಸೇರಿದ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ.
icon

(5 / 7)

ರಿಕ್ಷಾಚಾಲಕ: ಈ ವಾರ ರಿಕ್ಷಾ ಚಾಲಕ ಎಂಬ ಸಿನಿಮಾ ಬಿಡುಗಡೆಯಾಗಲಿದೆ. ಆಯುಷ್‌ ಶಶಿಕುಮಾರ್‌ ನಿರ್ದೇಶನದ ಈ ಸಿನಿಮಾದಲ್ಲಿ ರಿಕ್ಷಾ ಚಾಲಕರ ಕಥೆ ಇದೆಯಂತೆ. ಚಿರಂತ್‌ ಮತ್ತು ನಂದಿನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
icon

(6 / 7)

ಖದೀಮ: ಇದು ಚಂದನ್‌ ಅಭಿನಯದ ಸಿನಿಮಾ. ಸಾಯಿ ಪ್ರದೀಪ್‌ ನಿರ್ದೇಶನವಿದೆ. ಹೀಗೆ, ಮೂರು ಹೊಸಬರ ಚಿತ್ರ ಮತ್ತು ಮೂರು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಸಿನಿಮಾಗಳು ಈ ವಾರ ಬಿಡುಗಡೆಯಾಗಲಿವೆ. ಈ ಆರು ಸಿನಿಮಾಗಳಲ್ಲಿ ಕನ್ನಡದ ಈ ವಾರದ ಬ್ಲಾಕ್‌ಬಸ್ಟರ್‌ ಸಿನಿಮಾ ಯಾವುದು ಆಗಿಲಿದೆ ಎಂದು ಕಾದುನೋಡೋಣ.
icon

(7 / 7)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು