ವಿದೇಶಿ ಹುಡುಗನ ವರಿಸಲಿರುವ ನಟ ಅರ್ಜುನ್ ಸರ್ಜಾ ಪುತ್ರಿ; 13 ವರ್ಷ ಪ್ರೀತಿಸಿದ ಇನಿಯನ ಜೊತೆ ಅಂಜನಾ ಎಂಗೇಜ್‌ಮೆಂಟ್
- ಸ್ಯಾಂಡಲ್‌ವುಡ್ ನಟ ಅರ್ಜುನ್ ಸರ್ಜಾ ಮನೆಯಲ್ಲಿ ಮತ್ತೊಮ್ಮೆ ಮಂಗಳವಾದ್ಯ ಮೊಳಗಲಿದೆ. ಅರ್ಜುನ್ ಎರಡನೇ ಪುತ್ರಿ ಅಂಜನಾ ಎಂಗೇಜ್‌ಮೆಂಟ್ ಸದ್ದಿಲ್ಲದೇ ನಡೆದಿದೆ. 13 ವರ್ಷಗಳ ಕಾಲ ಪ್ರೀತಿಸಿದ್ದ, ವಿದೇಶಿ ಹುಡುಗನನ್ನು ವರಿಸಲಿದ್ದಾರೆ ಅರ್ಜುನ್ ಪುತ್ರಿ.
- ಸ್ಯಾಂಡಲ್‌ವುಡ್ ನಟ ಅರ್ಜುನ್ ಸರ್ಜಾ ಮನೆಯಲ್ಲಿ ಮತ್ತೊಮ್ಮೆ ಮಂಗಳವಾದ್ಯ ಮೊಳಗಲಿದೆ. ಅರ್ಜುನ್ ಎರಡನೇ ಪುತ್ರಿ ಅಂಜನಾ ಎಂಗೇಜ್‌ಮೆಂಟ್ ಸದ್ದಿಲ್ಲದೇ ನಡೆದಿದೆ. 13 ವರ್ಷಗಳ ಕಾಲ ಪ್ರೀತಿಸಿದ್ದ, ವಿದೇಶಿ ಹುಡುಗನನ್ನು ವರಿಸಲಿದ್ದಾರೆ ಅರ್ಜುನ್ ಪುತ್ರಿ.
(1 / 8)
ಚಂದನವನದ ಖ್ಯಾತ ನಟ ಅರ್ಜುನ್ ಸರ್ಜಾ ತಮ್ಮ ಮೊದಲ ಮಗಳ ಮದುವೆ ಮಾಡಿ ವರ್ಷ ಕಳೆಯುವ ಮೊದಲೇ ಎರಡನೇ ಮಗಳ ಎಂಗೇಜ್‌ಮೆಂಟ್ ಮಾಡಿ ಮುಗಿಸಿದ್ದಾರೆ. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ಕಳೆದ ವರ್ಷ ಜೂನ್ 10 ರಂದು ಉಮಾಪತಿ ರಾಮಯ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಎರಡನೇ ಪುತ್ರಿ ಅಂಜನಾ ಎಂಗೇಜ್‌ಮೆಂಟ್ ಸದ್ದಿಲ್ಲದೇ ನಡೆದಿದೆ.
(PC: Instagram )(2 / 8)
ಅಂಜನಾ ವಿದೇಶಿ ಹುಡುಗನ ಕೈ ಹಿಡಿಯಲಿದ್ದಾರೆ. 13 ವರ್ಷಗಳ ಕಾಲ ಪ್ರೀತಿಸಿದ್ದ ವಿದೇಶಿ ಯುವಕನ ಜೊತೆ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಅರ್ಜುನ್ ಸರ್ಜಾ ಎರಡನೇ ಪುತ್ರಿ. ಅರ್ಜುನ್–ನಿವೇದಿತಾ ಪುತ್ರಿ ಉಂಗುರ ಬದಲಿಸುವ ಕಾರ್ಯಕ್ರಮ ನಡೆದಿದ್ದು ಇಟಲಿಯ ಲೇಕ್ ಕೊಮೊದಲ್ಲಿ.
(3 / 8)
ಅಂಜನಾ ಎಂಗೇಜ್‌ಮೆಂಟ್ ಫೋಟೊಗಳು ಈಗ ವೈರಲ್ ಆಗಿದ್ದು, ಕುಟುಂಬದ ಆಪ್ತರು ಮಾತ್ರ ಭಾಗವಹಿಸಿದಂತೆ ಕಾಣುತ್ತಿದೆ. ಫೋಟೊದಲ್ಲಿ ಅರ್ಜುನ್ ಸರ್ಜಾ, ಪತ್ನಿ ನಿವೇದಿತಾ, ಐಶ್ವರ್ಯಾ ಅರ್ಜುನ್, ಪತಿ ಉಮಾಪತಿ ರಾಮಯ್ಯ ಅವರನ್ನು ಫೋಟೊದಲ್ಲಿ ಕಾಣಬಹುದು.
(4 / 8)
ಚಿತ್ರರಂಗದಿಂದ ದೂರವಿರುವ ಅಂಜನಾ ಈಗ ವಿದೇಶ ಹುಡುಗನನ್ನು ವರಲಿಸಲು ಸಜ್ಜಾಗಿದ್ದಾರೆ. 13 ವರ್ಷಗಳ ತಮ್ಮ ಪ್ರೀತಿಗೆ ಮನೆಯವರಿಂದ ಒಪ್ಪಿಗೆ ಮುದ್ರೆ ಪಡೆದು ಮುಂದಡಿ ಇಟ್ಟಿದ್ದಾರೆ.
(5 / 8)
ಪ್ರಿಯಕರನ ಜೊತೆ ರೊಮ್ಯಾಂಟಿಕ್ ಆಗಿ ಫೋಟೊಶೂಟ್ ಮಾಡಿಸಿದ್ದಾರೆ ಅಂಜನಾ. ಮಗಳ ಪ್ರೀತಿಗೆ ಅರ್ಜುನ್ ಗ್ರೀನ್ ಸಿಗ್ನಲ್ ಕೊಟ್ಟು, ಮನೆಯಲ್ಲಿ ಮತ್ತೊಂದು ಮದುವೆ ಮಾಡಿಸಲು ರೆಡಿಯಾಗಿದ್ದಾರೆ.
(6 / 8)
13 ವರ್ಷಗಳ ನಂತರ ಕೊನೆಗೆ ಯೆಸ್ ಎಂದಿದ್ದೇನೆ ಎಂದು ಶೀರ್ಷಿಕೆ ಬರೆದುಕೊಂಡಿರುವ ಅಂಜನಾ, ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
(7 / 8)
ಅಂಜನಾ ವರಿಸುತ್ತಿರುವ ಹುಡುಗನ ಹೆಸರನ್ನು ಹೊರತುಪಡಿಸಿ ಅವರು ಎಲ್ಲಿಯವರು, ಏನು ಮಾಡಿಕೊಂಡಿದ್ದಾರೆ ಎಂಬಿತ್ಯಾದಿ ವಿವರಗಳು ಇನ್ನೂ ಲಭ್ಯವಾಗಿಲ್ಲ.
ಇತರ ಗ್ಯಾಲರಿಗಳು