ಸೀರೆಯಲ್ಲಿ ಎಷ್ಟು ಮುದ್ದಾಗಿ ಕಾಣ್ತಿದ್ದಾರೆ ನೋಡಿ ವಧು ಸೀರಿಯಲ್ ನಾಯಕಿ; ಯಾವ ಸಿನಿಮಾ ಹೀರೊಯಿನ್‌ಗೂ ಕಮ್ಮಿ ಇಲ್ಲ ದುರ್ಗಾಶ್ರೀ
- Vadhu Serial Heroine Photos: ಕಲರ್ಸ್ ಕನ್ನಡದ ವಧು ಧಾರಾವಾಹಿ ನಾಯಕಿ ದುರ್ಗಾಶ್ರೀ ಯಾವ ಸಿನಿಮಾ ಹೀರೊಯಿನ್‌ಗೂ ಕಮ್ಮಿ ಇಲ್ಲ. ತಮ್ಮ ಸರಳ ಸೌಂದರ್ಯದ ಜೊತೆಗೆ ಅದ್ಭುತ ನಟನೆಯಿಂದಲೂ ಗಮನ ಸೆಳೆಯುತ್ತಿದ್ದಾರೆ ಈಕೆ. ಇತ್ತೀಚಿಗೆ ತಮ್ಮ ಸುಂದರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
- Vadhu Serial Heroine Photos: ಕಲರ್ಸ್ ಕನ್ನಡದ ವಧು ಧಾರಾವಾಹಿ ನಾಯಕಿ ದುರ್ಗಾಶ್ರೀ ಯಾವ ಸಿನಿಮಾ ಹೀರೊಯಿನ್‌ಗೂ ಕಮ್ಮಿ ಇಲ್ಲ. ತಮ್ಮ ಸರಳ ಸೌಂದರ್ಯದ ಜೊತೆಗೆ ಅದ್ಭುತ ನಟನೆಯಿಂದಲೂ ಗಮನ ಸೆಳೆಯುತ್ತಿದ್ದಾರೆ ಈಕೆ. ಇತ್ತೀಚಿಗೆ ತಮ್ಮ ಸುಂದರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
(1 / 7)
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ವಧು ಧಾರಾವಾಹಿ ನಾಯಕಿ ದುರ್ಗಾಶ್ರೀ ಕನ್ನಡ ಕಿರುತೆರೆಯಲ್ಲಿ ಮಿಂಚಿ ನಂತರ ತೆಲುಗು ಕಿರುತೆರೆಯಲ್ಲಿ ಹೆಸರು ಮಾಡಿದವರು. ಇವರು ಉದಯ ಟಿವಿಯಲ್ಲಿ ಪ್ರಸಾರವಾದ ‘ನೇತ್ರಾವತಿ‘ ಧಾರಾವಾಹಿ ಮೂಲಕ ತಮ್ಮ ಕಿರುತೆರೆ ಪಯಣ ಆರಂಭಿಸುತ್ತಾರೆ.
(PC: Instagram)(2 / 7)
ನಂತರ ತೆಲುಗು ಕಿರುತೆರೆಯತ್ತ ಮುಖ ಮಾಡುವ ಇವರು ‘ಕೂಡಲ್ಲು ಮೀಕು ಜೋಹಾರ್ಲು‘ ಎಂಬ ಧಾರಾವಾಹಿಯಲ್ಲಿ ನಟಿಸುತ್ತಾರೆ. ಈ ಧಾರಾವಾಹಿ ಅವರಿಗೆ ಸಾಕಷ್ಟು ಹೆಸರು ತಂದುಕೊಡುತ್ತದೆ. ಇದು ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಿತ್ತು.
(3 / 7)
ನಂತರ ಜೆಮಿನಿ ಟಿವಿಯಲ್ಲಿ ಪ್ರಸಾರವಾದ ಅರ್ಧಾಂಗಿ ಧಾರಾವಾಹಿಯಲ್ಲೂ ನಟಿಸುತ್ತಾರೆ ದುರ್ಗಾಶ್ರೀ. ಈ ಧಾರಾವಾಹಿ ಮೂಲಕ ಲಕ್ಷಣ್ ತೇಕುಮುಡಿ ಹಾಗೂ ದುರ್ಗಾಶ್ರೀ ಜೋಡಿ ಸಾಕಷ್ಟು ಖ್ಯಾತಿ ಗಳಿಸಿತ್ತು. ಇವರು ಮಾಡುತ್ತಿರುವ ರೀಲ್ಸ್‌ಗಳನ್ನು ನೋಡಿರುವ ಅಭಿಮಾನಿಗಳು ನೀವು ರಿಯಲ್ ಲೈಫ್‌ನಲ್ಲೂ ಜೋಡಿಯಾಗಿ ಎಂದು ಹಾರೈಸುತ್ತಿದ್ದರು.
(4 / 7)
ಇದೀಗ ಮತ್ತೆ ಕನ್ನಡ ಕಿರುತೆರೆಗೆ ಮರಳಿರುವ ದುರ್ಗಾಶ್ರೀ ವಧು ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಡೀವೋರ್ಸ್ ಲಾಯರ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ಈಕೆ ಸರಳ, ಸಹಜ ಸುಂದರಿ. ಇತ್ತೀಚೆಗೆ ಇವರು ಸೀರೆಯುಟ್ಟು, ಸರಳವಾಗಿ ಅಲಂಕಾರ ಮಾಡಿಕೊಂಡಿರುವ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
(5 / 7)
ಇವರ ಫೋಟೊ ನೋಡಿರುವ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಾತ್ರವಲ್ಲ ನೀವು ಸಿಂಪಲ್ ಬ್ಯೂಟಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
(6 / 7)
ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ದುರ್ಗಾಶ್ರೀ ಬೆಂಗಳೂರಿನ ಜಕ್ಕೂರಿನವರು. ಇಲ್ಲಿನ ಆಚಾರ್ಯ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದಾರೆ. ಕ್ಲಾಸಿಕಲ್ ಡಾನ್ಸರ್ ಕೂಡ ಆಗಿದ್ದಾರೆ ವಧು ಅಲಿಯಾಸ್ ದುರ್ಗಾಶ್ರೀ
ಇತರ ಗ್ಯಾಲರಿಗಳು