ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೊದಲ ಸೋಲಿನ ಆಘಾತದ ನಡುವೆ ಸಂಜು ಸ್ಯಾಮ್ಸನ್​ಗೆ ದಂಡದ ಬರೆ; ಆರ್​ಆರ್​ ನಾಯಕ ತೆರಬೇಕಾದ ದಂಡವೆಷ್ಟು?

ಮೊದಲ ಸೋಲಿನ ಆಘಾತದ ನಡುವೆ ಸಂಜು ಸ್ಯಾಮ್ಸನ್​ಗೆ ದಂಡದ ಬರೆ; ಆರ್​ಆರ್​ ನಾಯಕ ತೆರಬೇಕಾದ ದಂಡವೆಷ್ಟು?

  • Sanju Samson: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಅವರಿಗೆ ದಂಡ ವಿಧಿಸಲಾಗಿದೆ. ಅವರಿಗೆ ೧೨ ಲಕ್ಷ ರೂ. ದಂಡ ವಿಧಿಸಲಾಗಿದೆ.

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ಸ್​​ ಅವರಿಗೆ ಸೋಲಿನ ಆಘಾತದ ನಡುವೆ ದಂಡದ ಬರೆ ಬಿದ್ದಿದೆ. ಏಪ್ರಿಲ್ 10ರ ಬುಧವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ನಿಧಾನಗತಿಯ ಓವರ್​ರೇಟ್ ಕಾಯ್ದುಕೊಂಡಿದ್ದಕ್ಕೆ ಸಂಜುಗೆ ದಂಡ ವಿಧಿಸಲಾಗಿದೆ. ‘ಇದು ಈ ಋತುವಿನಲ್ಲಿ ಸ್ಯಾಮ್ಸನ್​ ನೇತೃತ್ವದ ತಂಡಕ್ಕೆ ಬಿದ್ದ ಮೊದಲ ದಂಡವಾಗಿದೆ’ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ. ಐಪಿಎಲ್ ನಿಯಮಗಳ ಪ್ರಕಾರ, ಇನ್ನಿಂಗ್ಸ್​ನಲ್ಲಿ 20 ಓವರ್​ಗಳನ್ನು 90 ನಿಮಿಷದೊಳಗೆ ಮುಗಿಸಬೇಕಿತ್ತು. ಆದರೆ ವಿಫಲವಾದ ಕಾರಣ ಸ್ಯಾಮ್ಸನ್ಸ್​ಗೆ 12 ಲಕ್ಷ ದಂಡ ವಿಧಿಸಲಾಗಿದೆ.
icon

(1 / 5)

ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 3 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಸಂಜು ಪಡೆ ಈ ಟೂರ್ನಿಯಲ್ಲಿ ಇದೇ ಮೊದಲ ಸೋಲನುಭವಿಸಿತು. ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ಆರ್​ಆರ್​, ಐದನೇ ಪಂದ್ಯದಲ್ಲಿ ಮುಗ್ಗರಿಸಿತು. ರಶೀದ್ ಖಾನ್ ಅವರು ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿ ಗುಜರಾತ್​ಗೆ ಗೆಲುವು ತಂದುಕೊಟ್ಟರು. ತವರಿನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್, 3 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುಜರಾತ್ 7 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. 
icon

(2 / 5)

ಕೊನೆಯ ಎಸೆತದವರೆಗೂ ಸಾಗಿದ ಪಂದ್ಯದಲ್ಲಿ 2 ಎಸೆತಗಳಲ್ಲಿ 4 ರನ್​​ಗಳ ಅವಶ್ಯಕತೆಯಿತ್ತು. ರಾಹುಲ್ ತೆವಾಟಿಯಾ ಐದನೇ ಎಸೆತದಲ್ಲಿ 2 ರನ್ ಗಳಿಸಿ ರನೌಟ್ ಆದರು. ಹೀಗಾಗಿ ಕೊನೆಯ ಎಸೆತದಲ್ಲಿ 2 ರನ್​ಗಳ ಅವಶ್ಯಕತೆಯಿತ್ತು. ಆಗ ಬೌಂಡರಿ ಸಿಡಿಸಿದ ರಶೀದ್ ಖಾನ್ ಜಿಟಿಗೆ ಗೆಲುವು ತಂದುಕೊಟ್ಟರು. 
icon

(3 / 5)

ಟಾಸ್ ಗೆದ್ದ ಶುಭ್ಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಸಂಜು ಸ್ಯಾಮ್ಸನ್ ನಾಯಕನ ಇನ್ನಿಂಗ್ಸ್ ಆಡಿದರು. 38 ಎಸೆತಗಳಲ್ಲಿ 68 ರನ್ ಗಳಿಸಿ ಔಟಾಗದೆ ಉಳಿದರು. ಈ ಇನ್ನಿಂಗ್ಸ್ ನಲ್ಲಿ 2 ಸಿಕ್ಸರ್ ಗಳು ಮತ್ತು 7 ಬೌಂಡರಿಗಳು ಸೇರಿವೆ. ರಿಯಾನ್ ಪರಾಗ್ ಮತ್ತೊಂದು ಅದ್ಭುತ ಇನ್ನಿಂಗ್ಸ್ ಆಡಿದರು. ಈ ಐಪಿಎಲ್​ನಲ್ಲಿ ತಮ್ಮ 3ನೇ ಅರ್ಧಶತಕ ಸಿಡಿಸಿದರು. 48 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 3 ಬೌಂಡರಿಗಳೊಂದಿಗೆ 76 ರನ್ ಗಳಿಸಿದರು. ಅಂತಿಮವಾಗಿ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿತು.
icon

(4 / 5)

197 ರನ್​ಗಳ ಗುರಿ ಬೆನ್ನಟ್ಟಿದ ಗುಜರಾತ್, ಶುಭ್ಮನ್ ಗಿಲ್ (72) ಅವರು ಆಕರ್ಷಕ ಅರ್ಧಶತಕ ಸಿಡಿಸಿದರು. ಅಲ್ಲದೆ, ಕೊನೆಯಲ್ಲಿ ರಾಹುಲ್ ತೆವಾಟಿಯಾ 11 ಎಸೆತಗಳಲ್ಲಿ 22 ರನ್ ಮತ್ತು ರಶೀದ್ ಖಾನ್ 11 ಎಸೆತಗಳಲ್ಲಿ 24 ರನ್ ಗಳಿಸಿ ರೋಚಕ ಗೆಲುವಿಗೆ ಸಾಕ್ಷಿಯಾದರು.
icon

(5 / 5)

IPL_Entry_Point

ಇತರ ಗ್ಯಾಲರಿಗಳು