ಕನ್ನಡ ಸುದ್ದಿ  /  Photo Gallery  /  Sanju Samson To Replace Shreyas For Odi Series Against Australia

India vs Australia ODI: ಏಕದಿನ ಸರಣಿಗೆ ಶ್ರೇಯಸ್ ಬದಲಿಗೆ ಸ್ಯಾಮ್ಸನ್ ಆಯ್ಕೆ ಸಾಧ್ಯತೆ

  • IND vs AUS ODI: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ, ಶ್ರೇಯಸ್ ಅಯ್ಯರ್ ಬೆನ್ನುನೋವಿನಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಮಾರ್ಚ್ 17ರಿಂದ ನಡೆಯಲಿರುವ ಏಕದಿನ ಸರಣಿಗೆ ಅವರು ಆಡುವುದು ಅನುಮಾನ. ಕನಿಷ್ಠ ಮೊದಲ ಪಂದ್ಯದಲ್ಲಿ ಅವರು ಆಡದಿರುವುದು ಖಚಿತ ಎಂದು ‘ಇಎಸ್‌ಪಿಎನ್‌ ಕ್ರಿಕ್‌ಇನ್ಫೋ’ ವರದಿ ಮಾಡಿದೆ. ಹೀಗಾಗಿ ಅವರ ಬದಲಿಗೆ ತಂಡದಲ್ಲಿ ಬೇರೆ ಯಾರು ಸ್ಥಾನ ಪಡೆಯಲಿದ್ದಾರೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ. ಇವರಲ್ಲಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸದ ವೇಳೆ ಸಂಜು ಕೊನೆಯ ಬಾರಿಗೆ ಏಕದಿನ ಪಂದ್ಯ ಆಡಿದ್ದರು. ಅದೇ ಸಮಯದಲ್ಲಿ, ಅವರು ತಮ್ಮ ಟಿ20 ಪಂದ್ಯದಲ್ಲೂ ಕಾಣಿಸಿಕೊಂಡಿದ್ದರ. ನಂತರ ಕಾಲಿನ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ಅವರು ಮೈದಾನಕ್ಕೆ ಮರಳಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 66ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಸಂಜು ಅವರಿಗೆ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ ಎಂದು ಅಭಿಮಾನಿಗಳು ಆಗಾಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
icon

(1 / 5)

ಭಾರತ ಏಕದಿನ ತಂಡದ ಆಟಗಾರ ಶ್ರೇಯಸ್ ಅಯ್ಯರ್, ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದರು. ಅವರು ಬ್ಯಾಟಿಂಗ್‌ಗೂ ಬರಲಿಲ್ಲ. ಬೆನ್ನು ನೋವಿನಿಂದಾಗಿ ಅವರು ಪಂದ್ಯದಿಂದ ಹೊರಗುಳಿದಿದ್ದು, ಸ್ಕ್ಯಾನ್‌ಗೆ ಕಳುಹಿಸಲಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
icon

(2 / 5)

ಸದ್ಯದ ಪರಿಸ್ಥಿತಿ ಪ್ರಕಾರ, ಶ್ರೇಯಸ್ ಏಕದಿನ ಸರಣಿಯನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ. ಅವರ ಸ್ಥಾನಕ್ಕೆ ಸಂಜು ಬರಬೇಕೆಂದು ಅಭಿಮಾನಿಗಳು ಬಯಸಿದ್ದಾರೆ.
icon

(3 / 5)

ಮಾರ್ಚ್ 17ರಿಂದ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ‌ ಸರಣಿಯನ್ನು ಆಡಲಿದೆ. ಸಂಜು ಸ್ಯಾಮ್ಸನ್ ಈ ಸರಣಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಏಕೆಂದರೆ ಅವರು 50 ಓವರ್‌ಗಳ ಮಾದರಿಯಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.
icon

(4 / 5)

ಮತ್ತೊಂದೆಡೆ ಸಂಜು ಸ್ಯಾಮ್ಸನ್‌ ಸ್ಥಾನಕ್ಕೆ ಮಧ್ಯ ಪ್ರದೇಶದ ಆಟಗಾರ ರಜತ್‌ ಪಾಟಿದಾರ್‌ ಕೂಡಾ ಪೈಪೋಟಿ ನೀಡುತ್ತಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು