ಆಂಧ್ರ ಪ್ರದೇಶ, ತೆಲಂಗಾಣಗಳಲ್ಲಿ ಸಂಕ್ರಾಂತಿ ಕೋಳಿ ಪಂದ್ಯಕ್ಕೆ ತಯಾರಿ, ಆನ್‌ಲೈನ್‌ನಲ್ಲಿ ಕೋಳಿಗಳಿಗೆ ಭಾರೀ ಬೇಡಿಕೆ
ಹೊಸ ವರ್ಷವನ್ನು ಸ್ವಾಗತಿಸಲು ಇಡೀ ವಿಶ್ವವೇ ಸಜ್ಜಾಗುತ್ತಿದೆ. ಹಾಗೇ ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಗೆ ಈಗಿನಿಂದಲೇ ಸಿದ್ದತೆ ಆರಂಭವಾಗಿದೆ. ಆಂಧ್ರ ಪ್ರದೇಶ, ತೆಲಂಗಾಣ ಕಡೆ ಈ ಸಮಯದಲ್ಲಿ ಕೋಳಿ ಪಂದ್ಯ ಬಹಳ ಫೇಮಸ್ ಆಗಿದೆ.
(1 / 9)
ಸಂಕ್ರಾಂತಿ ಬಂತೆಂದರೆ ಸಾಕು, ಆಂಧ್ರದಲ್ಲಿ ಗಿಜಿಗುಡುವ ವಾತಾವರಣ. ಅದರಲ್ಲೂ ಗೋದಾವರಿ ಜಿಲ್ಲೆಗಳಲ್ಲಿ ಕೋಳಿ ಪಂದ್ಯ ವಿಶೇಷ ಆಕರ್ಷಣೆಯಾಗಿದೆ. ಈ ಸಮಯದಲ್ಲಿ ಕೋಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಬೆಟ್ಟಿಂಗ್ ಮಾಡುವವರ ಅಭಿರುಚಿಗೆ ತಕ್ಕಂತೆ ಕೋಳಿಗಳನ್ನು ಸಾಕಲಾಗುತ್ತಿದೆ.
(2 / 9)
ಸಂಕ್ರಾಂತಿ ಹಬ್ಬದ ಹಿನ್ನಲೆ ಪಂದ್ಯದ ಕೋಳಿಗಳಿಗೆ ಭಾರೀ ಬೇಡಿಕೆ ಬಂದಿದೆ. ಇನ್ಮುಂದೆ ಬಾಜಿ ಕಟ್ಟುವವರು ಗೆಲ್ಲುವ ಕೋಳಿಗಳಿಗಾಗಿ ಈಗಿನಿಂದಲೇ ಹುಡುಕಾಡುತ್ತಿದ್ದಾರೆ.
(3 / 9)
ಕೋಳಿ ಸಾಕಣೆದಾರರು ಕೋಳಿಗಳಿಗೆ ಭಾರೀ ಆರೈಕೆ ಮಾಡುತ್ತಿದ್ದಾರೆ. ಒಂದು ವೇಳೆ ಕೋಳಿಗಳನ್ನು ಕೊಳ್ಳಲು ಇವರ ಮನೆ ಬಳಿ ಬರದೆ ಇರುವವರಿಗೆ ಹೋಮ್ ಡೆಲಿವರಿ ಮಾಡಲಾಗುತ್ತಿದೆ. ಈಗ ಬೆಟ್ಟಿಂಗ್ ಕೋಳಿಗಳು ಆನ್‌ಲೈನ್‌ನಲ್ಲಿಯೂ ಲಭ್ಯವಿದೆ.
(4 / 9)
ಕೋಳಿ ಸಾಕುವವರು ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ಬೇಡಿಕೆ ಇರುವ ಕೋಳಿಗಳ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ನೋಡಿದವರು ತಮಗೆ ಬೇಕಾದುದನ್ನು ಆರಿಸಿ ಹಣ ಕೊಟ್ಟರೆ ಅವರ ಬಳಿಗೆ ಕೋಳಿಗಳನ್ನು ಕಳುಹಿಸುತ್ತಾರೆ.
(5 / 9)
ಸದ್ಯಕ್ಕೆ ಪೆರು ಮತ್ತು ಭಾರತೀಯ ತಳಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಒಂದು ಹುಂಜದ ಬೆಲೆ ರೂ.50 ಸಾವಿರದಿಂದ ಒಂದು ಲಕ್ಷ ರೂ. ಬೆಲೆ ಬಾಳುತ್ತದೆ.
(6 / 9)
ಸದ್ಯಕ್ಕೆ ಪೆರು ಮತ್ತು ಭಾರತೀಯ ತಳಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಒಂದು ಹುಂಜದ ಬೆಲೆ ರೂ.50 ಸಾವಿರದಿಂದ ಒಂದು ಲಕ್ಷ ರೂ. ಬೆಲೆ ಬಾಳುತ್ತದೆ.
(7 / 9)
ಈ ಪಂದ್ಯದ ಕೋಳಿಗಳು ಬಲಶಾಲಿ ಆಗುವುದಕ್ಕೆ ಅವುಗಳಿಗೆ ಈಜು ಕೂಡಾ ಮಾಡಿಸುತ್ತಾರೆ. ಜೊತೆಗೆ ಶಾಖ ಕೂಡಾ ನೀಡುತ್ತಾರೆ.
(8 / 9)
ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಪಂದ್ಯದ ಕೋಳಿಗಳನ್ನು ಹೆಚ್ಚು ಸಾಕಲಾಗುತ್ತದೆ. ಏಲೂರು ಜಿಲ್ಲೆಯ ಚಿಂತಲಪೂಡಿ ಮಂಡಲದ ವೆಂಕಟಾಪುರಂ ಗ್ರಾಮದ ತೋಟಗಳಲ್ಲಿ ಈ ರೀತಿಯ ಕೋಳಿಗಳನ್ನು ಬೆಳೆಸಲಾಗುತ್ತದೆ. ಪ್ರತಿ ಕೋಳಿ ಸಾಕಾಣಿಕೆಗೆ ಸುಮಾರು 25 ಸಾವಿರ ರೂ. ವೆಚ್ಚ ತಗುಲುತ್ತದೆ ಎಂದು ಕೋಳಿ ಸಾಕಣೆ ಮಾಡುವವರು ಮಾಹಿತಿ ನೀಡಿದ್ದಾರೆ.
( )ಇತರ ಗ್ಯಾಲರಿಗಳು