Sankranti 2025: ಸಂಕ್ರಾಂತಿ ಹಬ್ಬದ ದೇಸಿ ಸಡಗರ, ರಾಸುಗಳಿಗೆ ಬಗೆ ಬಗೆಯ ಅಲಂಕಾರ, ಕಿಚ್ಚು ಹಾಯಿಸುವ ಖುಷಿ
- ಕರ್ನಾಟಕದ ಹಲವು ಭಾಗಗಳಲ್ಲಿ ಸಂಕ್ರಾಂತಿ ವಿಭಿನ್ನ ಸಂಸ್ಕೃತಿಯಿದೆ. ಎತ್ತುಗಳನ್ನು ಅಲಂಕರಿಸಿ ಮೆರವಣಿಗೆ ಮಾಡಿದರೆ, ಹಳೆ ಮೈಸೂರು ಭಾಗದಲ್ಲಿ ಕಿಚ್ಚು ಹಾಯಿಸುವ ಸಂಪ್ರದಾಯವಿದೆ. ಇಂತಹ ಚಿತ್ರಗಳ ನೋಟ ಇಲ್ಲಿದೆ.
- ಕರ್ನಾಟಕದ ಹಲವು ಭಾಗಗಳಲ್ಲಿ ಸಂಕ್ರಾಂತಿ ವಿಭಿನ್ನ ಸಂಸ್ಕೃತಿಯಿದೆ. ಎತ್ತುಗಳನ್ನು ಅಲಂಕರಿಸಿ ಮೆರವಣಿಗೆ ಮಾಡಿದರೆ, ಹಳೆ ಮೈಸೂರು ಭಾಗದಲ್ಲಿ ಕಿಚ್ಚು ಹಾಯಿಸುವ ಸಂಪ್ರದಾಯವಿದೆ. ಇಂತಹ ಚಿತ್ರಗಳ ನೋಟ ಇಲ್ಲಿದೆ.
(1 / 10)
ಮೈಸೂರು ಹೊರ ವಲಯದಲ್ಲಿ ಮಂಗಳವಾರ ಸಂಜೆ ಸಂಕ್ರಾಂತಿ ಅಂಗವಾಗಿ ಕಿಚ್ಚು ಹಾಯಿಸುವ ಚಟುವಟಿಕೆ ಗಮನ ಸೆಳೆಯಿತು. ತನ್ನ ರಾಸು ಅಲಂಕರಿಸಿ ಕಿಚ್ಚು ಹಾಯಿಸಿದ ರೈತ.
(ಚಿತ್ರ: ಅವಿನಾಶ್ ದಮ್ನಳ್ಳಿ)(2 / 10)
ಸಂಕ್ರಾಂತಿ ಸಮಯದಲ್ಲಿ ತಮ್ಮ ಕೃಷಿ ಸಂಗಾತಿಗಳಾದ ರಾಸುಗಳನ್ನು ವಿಭಿನ್ನವಾಗಿ ಅಲಂಕರಿಸಿ ಅವುಗಳ ಮೆರವಣಿಗೆ ಮಾಡುವುದು ವಾಡಿಕೆ. ಹೀಗೆ ಮೆರವಣಿಗೆಗೆ ಅಣಿಯಾದ ಜೋಡಿ ನೋಟವಿದು.
(ಚಿತ್ರ: ಅವಿನಾಶ್ ದಮ್ನಳ್ಳಿ)(3 / 10)
ವರ್ಷವಿಡೀ ತಮ್ಮೊಂದಿಗೆ ದುಡಿದು ಸಂಕ್ರಾಂತಿ ಸುಗ್ಗಿಯ ಸಂಭ್ರಮದಲ್ಲಿ ರಾಸುಗಳಿಗೆ ಕೆಲ ದಿನ ಬಿಡುವು. ಈ ಹಬ್ಬದಲ್ಲಿ ಅವುಗಳನ್ನು ಅಲಂಕರಿಸುವುದೇ ರೈತರಿಗೆ ಖುಷಿಯ ಕ್ಷಣ.
(4 / 10)
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ದೇವಲಾಪುರದಲ್ಲಿ ಸಂಕ್ರಾಂತಿ ಅಂಗವಾಗಿ ನಡೆದ ಸುಗ್ಗಿ ಹಬ್ಬದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ರಾಸು ಹಿಡಿದು ಕಿಚ್ಚು ಹಾಯಿಸುವತ್ತ ತಂದರು.
(5 / 10)
ಹಳೆ ಮೈಸೂರು ಭಾಗದ ಹಳ್ಳಿಯೊಂದರಲ್ಲಿ ಸಂಕ್ರಾಂತಿ ಮೆರವಣಿಗೆ ತಮ್ಮ ಜೋಡಿ ಎತ್ತುಗಳನ್ನು ವಿಭಿನ್ನವಾಗಿ ಅಲಂಕರಿಸಿ ಕರೆ ತಂದ ರೈತ.
(6 / 10)
ಕೆಲವರು ರಾಸುಗಳಿಗೆ ವಿಭಿನ್ನವಾಗಿ ಅಲಂಕರಿಸಿದ್ದರು. ಜೋಡಿ ರಾಸುಗಳ ಬಾಲವನ್ನೇ ಜಡೆಯಂತೆ ಅಲಂಕರಿಸಿ ಗಮನ ಸೆಳೆದಿದ್ದು ಹೀಗೆ.
(8 / 10)
ಸಂಕ್ರಾಂತಿ ಹಬ್ಬ ಬಂದಾಗ ರಾಸುಗಳ ಅಲಂಕಾರದ ಖುಷಿ ಮಕ್ಕಳನ್ನೂ ಬಿಡುವುದಿಲ್ಲ. ಮಂಡ್ಯದ ಹಳ್ಳಿಯೊಂದರಲ್ಲಿ ತಮ್ಮ ರಾಸುಗಳೊಂದಿಗೆ ಮಕ್ಕಳ ಸಂಭ್ರಮ,
(9 / 10)
ಹಳ್ಳಿಗಳಲ್ಲಿ ಹುಲ್ಲಿಗೆ ಬೆಂಕಿ ಹಾಕಿ ತಾವು ಕೂಡ ಹಸುವಿನೊಂದಿಗೆ ಓಡಿ ಬಂದು ಖುಷಿ ಪಡುವುದು ಎಲ್ಲೆಡೆ ಈಗ ಕಾಣ ಸಿಗುತ್ತದೆ.
ಇತರ ಗ್ಯಾಲರಿಗಳು