ಸಾರಾ ತೆಂಡೂಲ್ಕರ್​ ಮತ್ತು ಸನಾ ಗಂಗೂಲಿ: ಸಚಿನ್-ಸೌರವ್ ಪುತ್ರಿಯರ ವಿದ್ಯಾರ್ಹತೆ ಏನು? ಇಬ್ಬರ ಪರಿಚಯ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಾರಾ ತೆಂಡೂಲ್ಕರ್​ ಮತ್ತು ಸನಾ ಗಂಗೂಲಿ: ಸಚಿನ್-ಸೌರವ್ ಪುತ್ರಿಯರ ವಿದ್ಯಾರ್ಹತೆ ಏನು? ಇಬ್ಬರ ಪರಿಚಯ ಇಲ್ಲಿದೆ

ಸಾರಾ ತೆಂಡೂಲ್ಕರ್​ ಮತ್ತು ಸನಾ ಗಂಗೂಲಿ: ಸಚಿನ್-ಸೌರವ್ ಪುತ್ರಿಯರ ವಿದ್ಯಾರ್ಹತೆ ಏನು? ಇಬ್ಬರ ಪರಿಚಯ ಇಲ್ಲಿದೆ

  • Sara Tendulkar vs Sana Ganguly: ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್​ ಅವರ ಪುತ್ರಿ ಸಾರಾ ತೆಂಡೂಲ್ಕರ್​ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಅವರ ಮಗಳು ಸನಾ ಗಂಗೂಲಿ ಅವರ ವಿದ್ಯಾರ್ಹತೆ ಏನು? ಇಬ್ಬರ ಪರಿಚಯ ಇಲ್ಲಿದೆ.

ಸಚಿನ್ ತೆಂಡೂಲ್ಕರ್​ ಮತ್ತು ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್​ನ ದಿಗ್ಗಜರು. ಅವರಿಬ್ಬರ ಸಾಧನೆಗಳು ಅನನ್ಯ, ಅಮೋಘ.
icon

(1 / 11)

ನಿವೃತ್ತರಾಗಿ ಹಲವು ವರ್ಷಗಳಾದರೂ, ಅವರ ಹೆಸರುಗಳು ಆಗಾಗ್ಗೆ ಸದ್ದು ಮಾಡುತ್ತಿರುತ್ತವೆ. ಹೆಚ್ಚಾಗಿ ಅವರ ಮಕ್ಕಳಿಂದ. ಈಗ ದಿಗ್ಗಜ ಕ್ರಿಕೆಟಿಗರಿಬ್ಬರ ಹೆಣ್ಣು ಮಕ್ಕಳ ಪರಿಚಯ ನೋಡೋಣ.
icon

(2 / 11)

ಸಚಿನ್ ಅವರ 27 ವರ್ಷದ ಮಗಳು ಸಾರಾ ತೆಂಡೂಲ್ಕರ್. ಸೌರವ್ ಗಂಗೂಲಿ ಅವರ 23 ವರ್ಷದ ಮಗಳ ಹೆಸರು ಸನಾ. ಸಾರಾ ಮತ್ತು ಸನಾ ವಿದ್ಯಾರ್ಹತೆ ಏನಿದೆ? ಇಲ್ಲಿದೆ ವಿವರ.
icon

(3 / 11)

1997ರ ಅಕ್ಟೋಬರ್​​ 12ರಂದು ಸಾರಾ ಮುಂಬೈನಲ್ಲಿ ಹುಟ್ಟಿದರು. ಸಾರಾ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್​​ನಲ್ಲಿ.
icon

(4 / 11)

ತನ್ನ ತಾಯಿಯ ವೈದ್ಯಕೀಯ ವೃತ್ತಿಯಿಂದ ಪ್ರೇರಿತವಾದ ಸಾರಾ, ಆರೋಗ್ಯ ಕ್ಷೇತ್ರದಲ್ಲಿ ಆಸಕ್ತಿ ತೋರಿದರು. ನಂತರ ಬಯೋಮೆಡಿಕಲ್ ಸೈನ್ಸ್​​ನಲ್ಲಿ ಪದವಿ ಪಡೆದರು.
icon

(5 / 11)

ಬಳಿಕ ಲಂಡನ್‌ನಲ್ಲಿ ತನ್ನ ಶೈಕ್ಷಣಿಕ ಪ್ರಯಾಣ ಪ್ರಾರಂಭಿಸಿದರು. ಯೂನಿವರ್ಸಿಟಿ ಕಾಲೇಜ್ ಲಂಡನ್‌ನಿಂದ ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
icon

(6 / 11)

ಸನಾ ಗಂಗೂಲಿ ಕೋಲ್ಕತ್ತಾದ ಲೊರೆಟೊ ಹೌಸ್ ಸ್ಕೂಲ್​ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದರು. ಬಳಿಕ ಇಂಗ್ಲೆಂಡ್​ನ ಆಕ್ಸ್​ಫರ್ಡ್​ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಂದುವರೆಸಿದರು.
icon

(7 / 11)

ಬಳಿಕ ಲಂಡನ್​ನ ಯೂನಿವರ್ಸಿಟಿ ಕಾಲೇಜ್ ಲಂಡನ್​ನಲ್ಲಿ ಅರ್ಥಶಾಸ್ತ್ರದಲ್ಲಿ (ಬಿಎಸ್ಸಿ) ಪದವಿ ಪಡೆದರು. ಇದೇ ಅವಧಿಯಲ್ಲಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ವಿವಿಧ ಇಂಟರ್ನ್‌ಶಿಪ್‌ ಮಾಡಿದ್ದರು.
icon

(8 / 11)

ರೂಪದರ್ಶಿಯಾಗಿರುವ ಸಾರಾ ಅವರು ಸಚಿನ್ ತೆಂಡೂಲ್ಕರ್ ಫೌಂಡೇಶನ್‌ ನಿರ್ದೇಶಕಿಯೂ ಆಗಿದ್ದಾರೆ. 2021ರಲ್ಲಿ ಮಾಡೆಲಿಂಗ್‌ಗೆ ಧುಮುಕಿದ್ದರು. ಅಂತಾರಾಷ್ಟ್ರೀಯ ಫ್ಯಾಷನ್ ಈವೆಂಟ್​ಗಳಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
icon

(9 / 11)

ಸನಾ ಗಂಗೂಲಿ, ಪ್ರಸ್ತುತ INNOVERVನಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ತಿಳಿಸಲಾಗಿದೆ. ಇಲ್ಲಿ ಅವರ ತಿಂಗಳ ಸಂಬಳ ಲಕ್ಷಗಟ್ಟಲೇ ಇದೆ ಎಂದು ತಿಳಿದು ಬಂದಿದೆ.
icon

(10 / 11)

ಕ್ಷಣ ಕ್ಷಣದ ಕ್ರಿಕೆಟ್ ಸುದ್ದಿಗಳ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(11 / 11)

ಇತರ ಗ್ಯಾಲರಿಗಳು