ಟಾಮ್ ಹಾರ್ಟ್ಲೆ ಟು ಧ್ರುವ್ ಜುರೆಲ್; ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆಗೈದ ಆಟಗಾರರು ಯಾರು, ಅವರ ಪ್ರದರ್ಶನ ಹೇಗಿದೆ?
- Debut Players List: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಎರಡೂ ತಂಡಗಳ ಪರ 6 ಆಟಗಾರರು ಪದಾರ್ಪಣೆ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, ಯಾರು, ಹೇಗೆ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ನೋಡೋಣ.
- Debut Players List: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಎರಡೂ ತಂಡಗಳ ಪರ 6 ಆಟಗಾರರು ಪದಾರ್ಪಣೆ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, ಯಾರು, ಹೇಗೆ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ನೋಡೋಣ.
(1 / 7)
ಧ್ರುವ್ ಜುರೆಲ್ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಅದ್ಭುತ ಆರಂಭ ಪಡೆದಿದ್ದಾರೆ. ದಿನೇಶ್ ಕಾರ್ತಿಕ್ ಅವರಿಂದ ಇಂಡಿಯಾ ಕ್ಯಾಪ್ ಪಡೆದ ನಂತರ, ಜುರೆಲ್ ಮೊದಲ ಇನ್ನಿಂಗ್ಸ್ನಲ್ಲಿ 46 ರನ್ ಕಲೆ ಹಾಕಿದರು. ತನ್ನ ಎರಡನೇ ಟೆಸ್ಟ್ನಲ್ಲಿ ಮಹತ್ವದ 90 ರನ್ ಗಳಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ದ್ವಿತೀಯ ಇನ್ನಿಂಗ್ಸ್ನಲ್ಲಿ ಅಜೇಯ 39 ರನ್ ಗಳಿಸಿ ಗೆಲುವು ತಂದುಕೊಟ್ಟರು.
(ANI)(2 / 7)
ವಿಶಾಖಪಟ್ಟಣಂನಲ್ಲಿ ನಡೆದ 2ನೇ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಿದ ರಜತ್ ಪಾಟೀದಾರ್, 3 ಪಂದ್ಯಗಳ ಅಂದರೆ 6 ಇನ್ನಿಂಗ್ಸ್ಗಳಲ್ಲಿ ಕೇವಲ 63 ರನ್ ಗಳಿಸಿದ್ದಾರೆ. ಸಿಕ್ಕ ಅವಕಾಶವನ್ನು ಕೈಚೆಲ್ಲಿದ ರಜತ್ ಪಾಟೀದಾರ್ ತೀವ್ರ ನಿರಾಸೆ ಮೂಡಿಸಿದ್ದಾರೆ.
(AFP)(3 / 7)
ರಾಂಚಿಯಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಆಕಾಶ್ ದೀಪ್ ಭಾರತದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದರು. ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡ ಆಕಾಶ್ ದೀಪ್, 3 ವಿಕೆಟ್ ಪಡೆದು ಮಿಂಚಿದರು.
(ANI)(4 / 7)
ರಾಜ್ಕೋಟ್ ಟೆಸ್ಟ್ನಲ್ಲಿ ಪದಾರ್ಪಣೆಗೈದ ಸರ್ಫರಾಜ್ ಖಾನ್ ಎರಡೂ ಇನ್ನಿಂಗ್ಸ್ಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದರು. ಆದರೆ ರಾಂಚಿ ಟೆಸ್ಟ್ನಲ್ಲಿ ವೈಫಲ್ಯ ಅನುಭವಿಸಿದರು.
(PTI)(5 / 7)
ಈ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆಗೈದ ಟಾಮ್ ಹಾರ್ಟ್ಲೆ, 20 ವಿಕೆಟ್ ಮತ್ತು 159 ರನ್ ಗಳಿಸಿದ್ದಾರೆ. ಈ ಅದ್ಭುತ ಪ್ರದರ್ಶನದ ಹೊರತಾಗಿಯೂ ಇಂಗ್ಲೆಂಡ್ ಸರಣಿ ಸೋತಿದೆ.
(PTI)(6 / 7)
ವಿಶಾಖಪಟ್ಟಣಂ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಿದ ಶೋಯೆಬ್ ಬಶೀರ್ ನಂತರ ರಾಂಚಿಯಲ್ಲಿ ನಡೆದ 4ನೇ ಟೆಸ್ಟ್ನಲ್ಲಿ ಕಣಕ್ಕಿಳಿದರು. ಈ ಎರಡು ಪಂದ್ಯಗಳಿಂದ 2 ವಿಕೆಟ್ ಪಡೆದಿದ್ದಾರೆ.
(PTI)ಇತರ ಗ್ಯಾಲರಿಗಳು