ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜೂನ್‌ 30 ರಿಂದ ಶನಿಯ ಹಿಮ್ಮುಖ ಚಲನೆ ಆರಂಭ; ಕೆಲವರಿಗೆ ಕಹಿ, ಉಳಿದವರಿಗೆ ಸಿಹಿ; ದ್ವಾದಶ ರಾಶಿ ಭವಿಷ್ಯ

ಜೂನ್‌ 30 ರಿಂದ ಶನಿಯ ಹಿಮ್ಮುಖ ಚಲನೆ ಆರಂಭ; ಕೆಲವರಿಗೆ ಕಹಿ, ಉಳಿದವರಿಗೆ ಸಿಹಿ; ದ್ವಾದಶ ರಾಶಿ ಭವಿಷ್ಯ

ಶನಿಯು ಅತಿ ನಿಧಾನವಾಗಿ ಚಲಿಸುವ ಗ್ರಹ. ಆದ್ದರಿಂದಲೇ ಪ್ರತಿಯೊಂದು ರಾಶಿಗೂ ಸಾಡೇಸಾತಿ ಪ್ರಭಾವ ಇರಲಿದೆ. ಶನಿದೇವನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷಗಳ ಕಾಲ ತೆಗೆದುಕೊಳ್ಳುತ್ತಾನೆ. ಜೂನ್‌ 30 ರಿಂದ ಶನಿ ಹಿಮ್ಮುಖ ಚಲನೆ ಆರಂಭಿಸಲಿದ್ದು ದ್ವಾದಶ ರಾಶಿಗಳ ಮೇಲೆ ಶನಿ ಪ್ರಭಾವ ಬೀರಲಿದ್ದಾನೆ.

ನವೆಂಬರ್‌ 14ವರೆಗೂ ಶನೈಶ್ಚರನು ಹಿಮ್ಮುಖವಾಗಿ ಚಲಿಸಲಿದ್ದು ಕೆಲವು ರಾಶಿಯವರಿಗೆ ಶುಭ ಫಲಗಳನ್ನು ನೀಡಿದರೆ, ಕೆಲವರಿಗೆ ಸಮಸ್ಯೆಗಳನ್ನು ತಂದೊಡ್ಡಲಿದ್ದಾನೆ. ಯಾವ ರಾಶಿಯವರಿಗೆ ಏನು ಫಲ ನೋಡೋಣ.
icon

(1 / 14)

ಮೇಷ: ಶನಿ ಹಿಮ್ಮೆಟುವಿಕೆ ಮೇಷ ರಾಶಿಗೆ ಶುಭ ಫಲ ನೀಡಲಿದೆ. ಧಾರ್ಮಿಕ ಚಟುವಟಿಕೆಗಳತ್ತ ತೊಡಗಿಸಿಕೊಳ್ಳಲಿದ್ದೀರಿ. ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ತಾಯಿ ಕಡೆಯಿಂದ ಸಹಾಯ ದೊರೆಯಲಿದೆ. ಆತ್ಮೀಯ ಸ್ನೇಹಿತರೊಬ್ಬರು ಬಹಳ ದಿನಗಳ ನಂತರ ನಿಮ್ಮನ್ನು ಭೇಟಿ ಮಾಡಲಿದ್ದಾರೆ. ಉದ್ಯೋಗ ಬದಲಿಸುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಮಾಡಲಿದ್ದೀರಿ.
icon

(2 / 14)

ವೃಷಭ ರಾಶಿ: ಶನಿ ಹಿಮ್ಮುಖ ಚಲನೆಯಿಂದ ವೃಷಭ ರಾಶಿಯವರಿಗೆ ಸಮಸ್ಯೆ ಉಂಟಾಗಬಹುದು. ನಿಮ್ಮ ಕಷ್ಟಕ್ಕೆ ಯಾರೂ ಆಗಿಬರುವುದಿಲ್ಲ. ನೀವು ಏಕಾಂಗಿಯಾಗಿ ಕಷ್ಟಗಳನ್ನು ಎದುರಿಸಲು ಸಿದ್ಧರಾಗಿ. ನಿಮ್ಮದೇ ತಪ್ಪಿನಿಂದ, ತಾಳ್ಮೆ ಇಲ್ಲದ ಕೆಲಸದಿಂದ ನೀವು ಅನೇಕರ ಸ್ನೇಹ ಕಳೆದುಕೊಳ್ಳಲಿದ್ದೀರಿ. ಕೆಲಸ ಬದಲಿಸುವ ಸಾಧ್ಯತೆ ಇದೆ.
icon

(3 / 14)

ಮಿಥುನ: ಹಿರಿಯರಿಗೆ ಅನಾರೋಗ್ಯ ಕಾಡಲಿದೆ. ಆಸ್ತಿ ಖರೀದಿ, ಷೇರು ಹೂಡಿಕೆಗೆ ಇದು ಉತ್ತಮ ಸಮಯವಲ್ಲ. ಲಾಭ ಬರುತ್ತದೆ ಎಂದು ಬಂಡವಾಳ ಹೂಡಿ ಹಣ ಕಳೆದುಕೊಳ್ಳಬೇಡಿ. ಹೆಚ್ಚಿನ ಜವಾಬ್ದಾರಿ ನಿಮ್ಮ ಮಾನಸಿಕ ನೆಮ್ಮದಿ ಹಾಳು ಮಾಡಬಹುದು. ನವೆಂಬರ್‌ 14ವರೆಗೂ ನೀವು ಬಹಳ ಎಚ್ಚರಿಕೆಯಿಂದ ಇರಬೇಕು
icon

(4 / 14)

ಕರ್ಕಾಟಕ: ಈ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ತಪ್ಪು ಮಾಡದಿದ್ದರೂ ನಿಮ್ಮ ಮೇಲೆ ಸುಖಾಸುಮ್ಮನೆ ಆರೋಪವೊಂದು ಎದುರಾಗಲಿದೆ. ವಾಹನ ಚಲಾಯಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.
icon

(5 / 14)

ಸಿಂಹ: ಸಂಗಾತಿ ಜೊತೆ ಮನಸ್ತಾಪ ಉಂಟಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ವಿವಾದ ಉದ್ಭವಿಸುವ ಸಾಧ್ಯತೆಗಳಿವೆ. ಬಹಳ ದಿನಗಳಿಂದ ಮಾಡಿದ್ದ ದೂರ ಪ್ರಯಾಣ ರದ್ದಾಗುವ ಸಾಧ್ಯತೆ ಇದೆ. ಹಣಕಾಸಿನ ಬಿಕ್ಕಟ್ಟು ಎದುರಾಗಬಹುದು. ಎಚ್ಚರದಿಂದಿರಿ.
icon

(6 / 14)

ಕನ್ಯಾ: ಶನಿಯ ಹಿಮ್ಮುಖ ಚಲನೆ ಕನ್ಯಾ ರಾಶಿಯವರಿಗೆ ಶುಭ ಫಲ ನೀಡಲಿದೆ. ವಿವಿಧ ಮೂಲಗಳಿಂದ ಆದಾಯ ದೊರೆಯಲಿದೆ. ಇದುವರೆಗೂ ನೀವು ಅನುಭವಿಸುತ್ತಿದ್ದ ಕಷ್ಟಗಳು ಕೊನೆಗೊಳ್ಳುತ್ತವೆ. ನಿಮಗೆ ತೊಂದರೆ ಕೊಟ್ಟವರೇ ಸಮಸ್ಯೆ ಎದುರಿಸುತ್ತಾರೆ. ಬಹಳ ದಿನಗಳಿಂದ ಕಾಡುತ್ತಿದ್ದ ಅನಾರೋಗ್ಯಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ. ಹೊಸ ವಾಹನ ಕೊಳ್ಳಲಿದ್ದೀರಿ.
icon

(7 / 14)

ತುಲಾ: ಮಾನಸಿಕ ಹಿಂಸೆ ಅನುಭವಿಸಲಿದ್ದೀರಿ. ಮಕ್ಕಳಿಂದ ನೀವು ಅವಮಾನ ಎದುರಿಸುವ ಸಾಧ್ಯತೆ ಇದೆ. ಕರುಳಿಗೆ ಸಂಬಂಧಿಸಿದ ಅನಾರೋಗ್ಯ ಕಾಡಬಹುದು. ಮತ್ತೊಬ್ಬರ ಹಣಕಾಸಿನ ವಿಚಾರದಲ್ಲಿ ಕೈ ಹಾಕಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ.
icon

(8 / 14)

ವೃಶ್ಚಿಕ: ಮನೆಯ ಹಿರಿಯರ ಆರೋಗ್ಯ ಸಮಸ್ಯೆಯಿಂದ ಯೋಚನೆಗೆ ಒಳಗಾಗುವಿರಿ. ಆಸ್ಪರ್ತೆ ಖರ್ಚು ವೆಚ್ಚ ಹೆಚ್ಚಾಗಲಿದೆ. ಇತರ ಕೆಲಸಗಳಿಗೆ ಕೂಡಾ ಹಣ ಹೆಚ್ಚು ಖರ್ಚು ಮಾಡಬೇಕಾಗಿ ಬರಬಹುದು. ಆಸ್ತಿ ವಿಚಾರದಲ್ಲಿ ವಿವಾದ ಉಂಟಾಗಲಿದೆ.
icon

(9 / 14)

ಧನಸ್ಸು: ಶನಿ ಹಿಮ್ಮೆಟುವಿಕೆ ನಿಮಗೆ ಒಳ್ಳೆಯ ಫಲಗಳನ್ನು ನೀಡಲಿದೆ. ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ. ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಇದ್ದಲ್ಲಿ ಎಲ್ಲವೂ ಸರಿ ಆಗಲಿದೆ. ಆದಾಯ ಹೆಚ್ಚಲಿದೆ. ಹೊಸ ವ್ಯಾಪಾರ ಆರಂಭಿಸಲಿದ್ದೀರಿ. ನಿಮ್ಮ ಶ್ರಮಕ್ಕೆ ಉತ್ತಮ ಪ್ರತಿಫಲ ದೊರೆಯಲಿದೆ.
icon

(10 / 14)

ಮಕರ: ನೀವೇ ಮಾಡಿದ ತಪ್ಪಿನಿಂದ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುವಿರಿ. ಸಾಲ ಕೊಟ್ಟವರು ನಿಮಗೆ ಅವಶ್ಯಕತೆ ಇರುವ ಸಮಯದಲ್ಲಿ ವಾಪಸ್‌ ನೀಡುವುದಿಲ್ಲ. ಸಾಮಾಜಿಕ ತಾಲತಾಣದಲ್ಲಿ ನೀವು ಮಾಡಿದ ಪೋಸ್ಟ್‌ ವಿವಾದಕ್ಕೆ ಒಳಗಾಗಬಹುದು.
icon

(11 / 14)

ಕುಂಭ: ಶನಿಯು ಸದ್ಯಕ್ಕೆ ಕುಂಭ ರಾಶಿಯಲ್ಲಿ ಚಲಿಸುತ್ತಿದ್ದರೂ ಶನಿಯ ಹಿಮ್ಮುಖ ಚಲನೆ ಈ ರಾಶಿಯವರಿಗೆ ಸಮಸ್ಯೆ ತಂದೊಡ್ಡುತ್ತದೆ. ಆರೋಗ್ಯ ಸಮಸ್ಯೆಗಳು ಕಾಡಲಿವೆ. ಆಸ್ಪತ್ರೆಗೆ ಖರ್ಚು ಹೆಚ್ಚಾಗಬಹುದು. ಎಲ್ಲರ ಮೇಲೆ ಸಿಟ್ಟು ತೋರುವಿರಿ. ಜಮೀನು ವಿಚಾರದಲ್ಲಿ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ.
icon

(12 / 14)

ಮೀನ: ವಿಪರೀತ ಹಣ ಖರ್ಚಾಗಲಿದೆ. ಎಲ್ಲಾ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಅದೇ ಸಮಸ್ಯೆ ಮತ್ತೆ ಉಲ್ಬಣಿಸಲಿದೆ. ಸಮಯ ಕೂಡಾ ವ್ಯರ್ಥವಾಗುತ್ತದೆ. ಯಾವುದೇ ಕೆಲಸ ಮಾಡಲಾಗದೆ ಮಾನಸಿಕ ಹಿಂಸೆಗೆ ಒಳಗಾಗುವಿರಿ.
icon

(13 / 14)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(14 / 14)

ಇತರ ಗ್ಯಾಲರಿಗಳು