ಸಂವಿಧಾನಕ್ಕೆ ಶಿರಬಾಗಿ ನಮಿಸಿ ಎನ್‌ಡಿಎ ಸಭೆ ವೇದಿಕೆ ಏರಿದ ನರೇಂದ್ರ ಮೋದಿ, ರಾಹುಲ್ ಗಾಂಧಿ ಅಭಿಯಾನಕ್ಕೆ ತಿರುಗೇಟು- ಮೋದಿ ಭಾವಭಂಗಿಯ ಚಿತ್ರನೋಟ
ಸಂವಿಧಾನ ರಕ್ಷಣೆ ಫೈಟ್; ಈ ಸಲದ ಲೋಕಸಭಾ ಚುನಾವಣೆಯ ಪ್ರಮುಖ ವಿಚಾರವನ್ನಾಗಿ ಕಾಂಗ್ರೆಸ್ ಪಕ್ಷ “ಸಂವಿಧಾನ ರಕ್ಷಣೆ”ಯನ್ನೆ ಪ್ರಸ್ತುತಿ ಮಾಡಿತ್ತು. ಇನ್ನೊಂದೆಡೆ, ಇಂದು ಸಂವಿಧಾನಕ್ಕೆ ಶಿರಬಾಗಿ ನಮಿಸಿ ಎನ್‌ಡಿಎ ಸಭೆ ವೇದಿಕೆ ಏರಿದ ನರೇಂದ್ರ ಮೋದಿ, ರಾಹುಲ್ ಗಾಂಧಿ ಅಭಿಯಾನಕ್ಕೆ ತಿರುಗೇಟಿನ ಸಂದೇಶ ನೀಡಿದಂತೆ ಇತ್ತು. ನರೇಂದ್ರ ಮೋದಿ ಭಾವಭಂಗಿಯ ಚಿತ್ರನೋಟ ಇಲ್ಲಿದೆ.
(1 / 8)
ಸಂವಿಧಾನ ರಕ್ಷಣೆಯ ಫೈಟ್ - ಈ ಸಲದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಸಂವಿಧಾನ ರಕ್ಷಣೆಯ ವಿಚಾರವನ್ನೆ ಮುಂದಿಟ್ಟುಕೊಂಡು ಮತಯಾಚನೆ ಮಾಡಿತ್ತು. ಅದರಲ್ಲೂ ರಾಹುಲ್ ಗಾಂಧಿ ಸಂವಿಧಾನದ ಕಿರುಪ್ರತಿಯನ್ನು ಹಿಡಿದು ತೋರಿಸುತ್ತ, ಸಂವಿಧಾನ ರಕ್ಷಣೆ ಆಗಬೇಕು ಎನ್ನುತ್ತ ಅಭಿಯಾನ ನಡೆಸಿದರು. ಇನ್ನೊಂದೆಡೆ, ಇಂದು (ಜೂನ್ 7) ಎನ್‌ಡಿಎ ಸಂಸದೀಯ ನಾಯಕರಾಗಿ ಆಯ್ಕೆಯಾದ ನರೇಂದ್ರ ಮೋದಿ ಸಭೆಗೆ ಮೊದಲು ಸಂಸತ್‌ನ ಸಂವಿಧಾನದ ಪ್ರತಿಗೆ ಶಿರಭಾಗಿ ನಮಿಸಿ, ಅದನ್ನು ಎತ್ತಿಕೊಂಡು ಹಣೆಗೂ ಒತ್ತಿಕೊಂಡರು. ಒಂದು ರೀತಿಯಲ್ಲಿ ರಾಹುಲ್ ಅಭಿಯಾನಕ್ಕೆ ತಿರುಗೇಟು ನೀಡಿದರು ಎನ್ನಿ.
(2 / 8)
ನವದೆಹಲಿಯಲ್ಲಿ ಸಂಸತ್ ಭವನದ ಸಂಸತ್ ಸದನದಲ್ಲಿ ಇಂದು (ಜೂನ್ 7) ನಡೆದ ಎನ್‌ಡಿಎ ನಾಯಕರ ಸಭೆಯ ವೇದಿಕೆಗೆ ಹೋಗುವ ಮೊದಲು ನರೇಂದ್ರ ಮೋದಿ ಅವರು ಹತ್ತಿರಲ್ಲದೇ ಇರಿಸಿದ್ದ ಭಾರತದ ಸಂವಿಧಾನದ ಪ್ರತಿಗೆ ನಮಸ್ಕರಿಸಿದರು.
(PTI)(4 / 8)
ಎನ್‌ಡಿಎ ಸಭೆಗೆ ಮೊದಲು ಸಂವಿಧಾನದ ಪ್ರತಿಗೆ ನರೇಂದ್ರ ಮೋದಿ ಅವರು ಶಿರಬಾಗಿ ನಮಿಸುವಾಗ ಅಲ್ಲಿದ್ದ ಅಚ್ಚರಿಯೊಂದಿಗೆ ಎನ್‌ಡಿಎ ನಾಯಕರು ಚಪ್ಪಾಳೆಯೊಂದಿಗೆ ಅವರನ್ನು ಬರಮಾಡಿಕೊಂಡರು
(PTI)(5 / 8)
ನರೇಂದ್ರ ಮೋದಿಯವರು ಸಂವಿಧಾನಕ್ಕೆ ಶಿರಬಾಗಿ ನಮಿಸಿದ ಬಳಿಕ ನಿಧಾನವಾಗಿ ಅದನ್ನೆತ್ತಿಕೊಂಡು ತಮ್ಮ ಹಣೆಗೆ ಒತ್ತಿಕೊಂಡರು.
(PTI)ಇತರ ಗ್ಯಾಲರಿಗಳು