ISRO Weather Satellite: ಸೈಕ್ಲೋನ್‌ ಮುನ್ಸೂಚನೆ ನೀಡುವ ಉಪಗ್ರಹ, ಇಸ್ರೋದಿಂದ ಉಡಾವಣೆ ಯಶಸ್ವಿ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Isro Weather Satellite: ಸೈಕ್ಲೋನ್‌ ಮುನ್ಸೂಚನೆ ನೀಡುವ ಉಪಗ್ರಹ, ಇಸ್ರೋದಿಂದ ಉಡಾವಣೆ ಯಶಸ್ವಿ Photos

ISRO Weather Satellite: ಸೈಕ್ಲೋನ್‌ ಮುನ್ಸೂಚನೆ ನೀಡುವ ಉಪಗ್ರಹ, ಇಸ್ರೋದಿಂದ ಉಡಾವಣೆ ಯಶಸ್ವಿ photos

  • ಚಂದ್ರನ ಮೇಲೆ ಕಾಲಿಟ್ಟ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ( ISRO) ಒಂದಿಲ್ಲೊಂದು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತದೆ. ಈಗ ಹವಾಮಾನ ಮುನ್ಸೂಚನೆ, ಅದರಲ್ಲೂ ಸೈಕ್ಲೋನ್‌( Cyclone) ಮುನ್ಸೂಚನೆ ಇನ್‌ಸ್ಯಾಟ್‌– 3ಡಿಎಸ್‌ ಉಪಗ್ರಹ ಉಡಾವಣೆಗೆ ಮುಂದಾಗಿದೆ. ಶನಿವಾರ ಸಂಜೆ ಶ್ರೀಹರಿಕೋಟಾದಲ್ಲಿ ಉಡಾವಣೆಯ ಸಂತಸ. ಏನಿದರ ವಿಶೇಷ. ಇಲ್ಲಿದೆ ಚಿತ್ರ ನೋಟ.

ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋ ಈಗ ಹವಾಮಾನಕ್ಕೆ ಸಂಬಂಧಿಸಿದ ಹೊಸ ಉಪಗ್ರಹ ಇನ್‌ಸ್ಯಾಟ್‌– 3ಡಿಎಸ್‌ ಉಡಾವಣೆಗೆ ಮುಂದಾಗಿದ್ದು. ಇದಕ್ಕೆ ಕ್ಷಣಗಣನೆ ಶುರುವಾಗಿದೆ.
icon

(1 / 8)

ಈಗಾಗಲೇ ಹವಾಮಾನ ಮುನ್ಸೂಚನೆಗಳ ಕುರಿತು ಮಾಹಿತಿ ನೀಡುವ ಮೂರು ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆದರೆ ಇನ್‌ಸ್ಯಾಟ್‌– 3ಡಿಎಸ್‌ ಸೈಕ್ಲೋನ್‌ಗಳ ಮುನ್ನೆಚ್ಚರಿಕೆಯನ್ನು ನೀಡುವ ಉಪಗ್ರಹ.
icon

(2 / 8)

ಭಾರತವು ಕೃಷಿ ಪ್ರಧಾನ ದೇಶವಾಗಿರುವುದರಿಂದ ಇಲ್ಲಿ ಹವಾಮಾನ ಅತಿಮುಖ್ಯ. ಇದರ ಕುರಿತು ಕೃಷಿಕರೂ ಸೇರಿದಂತೆ ಎಲ್ಲರಿಗೂ ಮಾಹಿತಿ ಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲ ಹವಾಮಾನ ವೈಪರಿತ್ಯಗಳಿಂದ ಸೈಕ್ಲೋನ್‌ಗಳ ಪ್ರಭಾವವೂ ಹೆಚ್ಚಿದೆ, 
icon

(3 / 8)

ಈ ಕಾರಣದಿಂದಲೇ ಸೈಕ್ಲೋನ್‌ಗಳ ನಿಖರ ಮಾಹಿತಿಯನ್ನು ಪಡೆದು ಜನರಿಗೆ ಒದಗಿಸಲು ಭವಿಷ್ಯದಲ್ಲಿ ಈ ಉಪಗ್ರಹ ಉಪಯುಕ್ತವಾಗಲಿದೆ ಎನ್ನುವುದು ಇಸ್ರೋ ಅಭಿಪ್ರಾಯ. ಶ್ರೀಹರಿಕೋಟಾದಲ್ಲಿ  ಉಡಾವಣೆಗೆ ಅಣಿಯಾದ ಇನ್‌ಸ್ಯಾಟ್‌– 3ಡಿಎಸ್‌ನ ವಿಹಂಗಮ ನೋಟ,
icon

(4 / 8)

 ಮೂರನೇ ತಲೆಮಾರಿನ ನವೀಕರಿಸಿದ ಉಪಗ್ರಹವಿದು. ಉಪಗ್ರಹವು 2,274 ಕೆ.ಜಿ ತೂಕವಿದೆ ಎನ್ನುವುದು ಇಸ್ರೋ  ನೀಡಿರುವ ಮಾಹಿತಿ.
icon

(5 / 8)

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್‌ ಉಪಗ್ರಹ ಕೇಂದ್ರದಲ್ಲಿ ಫೆಬ್ರವರಿ 17 ರ ಶನಿವಾರ ಸಂಜೆ 5.35ಕ್ಕೆ ಇನ್ಸಾಟ್-3ಡಿಎಸ್ ಉಪಗ್ರಹವನ್ನು ಜಿಎಸ್‌ಎಲ್‌ವಿ ಎಂಕೆ– 2 ಉಡಾವಣಾ ವಾಹನದ ಮೂಲಕ ಉಡ್ಡಯನ ಮಾಡಲಾಯಿತು,
icon

(6 / 8)

ಇನ್‌ಸ್ಯಾಟ್‌– 3ಡಿಎಸ್‌  ಉಪಗ್ರಹ ಉಡಾವಣೆಯನ್ನು ನೀವು ಲೈವ್‌ ಆಗಿಯೂ ವೀಕ್ಷಿಸುವ ಅವಕಾಶವನ್ನು ಇಸ್ರೋ ಮಾಡಿದೆ.  https://isro.gov.in   ಮೂಲಕ  ನೋಡಬಹುದು. ಫೇಸ್‌ಬುಕ್( Facebook) https://facebook.com/ISRO/ ‌ ಯೂಟೂಬ್‌ (YouTube )https://youtube.com/watch?v=jynmNenneFk…  ನಲ್ಲೂ ನೋಡಬಹುದು.
icon

(7 / 8)

ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್‌ ರಿಜೇಜು ಅವರು ಶ್ರೀಹರಿಕೋಟಾದಲ್ಲಿ ಉಡಾವಣೆಯಾಗಲಿರುವ ಇನ್‌ಸ್ಯಾಟ್‌– 3ಡಿಎಸ್‌ ಕುರಿತು ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡರು.
icon

(8 / 8)

ಇತರ ಗ್ಯಾಲರಿಗಳು