Isro: ಇಸ್ರೋದಿಂದ ಭೂಪರಿವೀಕ್ಷಣಾ ಉಪಗ್ರಹ ಉಡಾವಣೆ ಯಶಸ್ವಿ, ಮತ್ತೊಂದು ಮೈಲಿಗಲ್ಲು ಸಾಧಿಸಿದ ಬಾಹ್ಯಾಕಾಶ ಸಂಸ್ಥೆ photos
- Isro Updates ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ( Isro) ಮತ್ತೊಂದು ಮೈಲಿಗಲ್ಲು ತಲುಪಿದೆ. ಭೂಪರಿವೀಕ್ಷಣಾ ಉಪಗ್ರಹ(SSLV D3 EOS 08 Mission) ಉಡಾವಣೆ ಮಾಡಿದೆ.
- Isro Updates ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ( Isro) ಮತ್ತೊಂದು ಮೈಲಿಗಲ್ಲು ತಲುಪಿದೆ. ಭೂಪರಿವೀಕ್ಷಣಾ ಉಪಗ್ರಹ(SSLV D3 EOS 08 Mission) ಉಡಾವಣೆ ಮಾಡಿದೆ.
(1 / 7)
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಕಿರು ಉಪಗ್ರಹವನ್ನು ಶುಕ್ರವಾರದಂದು ಆಗಸಕ್ಕೆ ಉಡಾವಣೆ ಮಾಡಿದ್ದು, ಮೈಲಿಗಲ್ಲು ಸ್ಥಾಪಿಸಿದೆ.
(2 / 7)
ಬಾಹ್ಯಾಕಾಶದಲ್ಲಿ ವಿಭಿನ್ನ ಮುಂದಾಗಿರುವ ಇಸ್ರೋ 'ಇಒಎಸ್ -08' ಹೆಸರಿನ ಭೂವೀಕ್ಷಣಾ ಕಿರು ಉಪಗ್ರಹವನ್ನು ಇಸ್ರೋ ಶುಕ್ರವಾರ ಬೆಳಗ್ಗೆ ಶ್ರೀಹರಿಕೋಟಾದಿಂದ ಉಡ್ಡಯನ ಮಾಡುವಲ್ಲಿ ಯಶಸ್ವಿಯಾಗಿದೆ.
(3 / 7)
ಈ ವರ್ಷದಲ್ಲಿ ಪಿಎಸ್ಎಲ್ವಿ- ಸಿ58/ಎಕ್ಸ್ಪೋಸಾಟ್ ಹಾಗೂ ಜಿಎಸ್ಎಲ್ವಿ-ಎಫ್14/ಇನ್ಸಾಟ್-3ಡಿಎಸ್ ಮಿಷನ್ಗಳ ಯಶಸ್ವಿ ಉಡಾವಣೆ ನಂತರ 2024ರಲ್ಲಿ ಇಸ್ರೋದ ಮೂರನೇ ಯಶಸ್ವಿ ಉಡಾವಣೆ ಎಂದು ಸಂಸ್ಥೆ ಹೇಳಿಕೊಂಡಿದೆ.
(4 / 7)
ಐಒಎಸ್08 ಎಂಬ ಹೆಸರಿನ ಪುಟ್ಟ ಉಪಗ್ರಹವು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿ ಮಾಡಿರುವ ಎಸ್ಎಸ್‌ಎಲ್‌ವಿ ಡಿ3 ರಾಕೇಟ್ ಮೂಲಕ ಭೂಮಿಯಿಂದ ನಭಧತ್ತತ ಚಿಮ್ಮಿತು.
(5 / 7)
ಈ ಉಪಗ್ರಹದ ಉಡಾವಣೆಗೆ ವರ್ಷದಿಂದಲೇ ತಯಾರಿ ನಡೆದು ಗುರುವಾರದಿಂದಲೇ ಇಸ್ರೋ ವಿಜ್ಞಾನಿಗಳು ಉಡ್ಡಯನದ ಚಟುವಟಿಕೆ ಶುರು ಮಾಡಿದ್ದರು. ಗುರುವಾರ ತಡರಾತ್ರಿ 2.47ರಿಂದಲೇ ಕೌಂಟ್‌ಡೌನ್ ಆರಂಭಗೊಂಡಿತ್ತು..
(6 / 7)
ಕಕ್ಷೆ ಸೇರುವಲ್ಲಿ ಯಶಸ್ವಿಯಾಗಿರುವ ಐಒಎಸ್08 ಉಪಗ್ರಹವನ್ನು ಮೊದಲು 78ನೇ ಸ್ವಾತಂತ್ರ್ಯ ದಿನಾಚರಣೆಯಂದೇ ಉಡಾವಣೆ ಮಾಡಲು ಯೋಜಿಸಲಾಗಿತ್ತು. ಕಾರಣಾಂತರಗಳಿಂದ ಒಂದು ದಿನ ವಿಳಂಬವಾದರೂ ಉಡ್ಡಯನ ಯಶಸ್ವಿಯಾಗಿದೆ.
ಇತರ ಗ್ಯಾಲರಿಗಳು