ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ವಿಶ್ವಕಪ್: ಸ್ಕಾಟ್ಲೆಂಡ್‌ ವಿರುದ್ಧದ ಪಂದ್ಯ ಮಳೆಯಿಂದ ರದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಹೆಚ್ಚಿದ ಒತ್ತಡ

ಟಿ20 ವಿಶ್ವಕಪ್: ಸ್ಕಾಟ್ಲೆಂಡ್‌ ವಿರುದ್ಧದ ಪಂದ್ಯ ಮಳೆಯಿಂದ ರದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಹೆಚ್ಚಿದ ಒತ್ತಡ

  • ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ನಿರಾಶೆ ಅನುಭವಿಸಿದೆ. ತನಗಿಂತ ಕಡಿಮೆ ಶ್ರೇಯಾಂಕ ಹೊಂದಿರುವ ಸ್ಕಾಟ್ಲೆಂಡ್‌ ವಿರುದ್ದದ ಪಂದ್ಯವು ಮಳೆಯಿಂದ ರದ್ದಾಗಿ, ಕೇವಲ 1 ಅಂಕವನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಹೀಗಾಗಿ ಉಳಿದ ಪಂದ್ಯಗಳು ಆಂಗ್ಲರಿಗೆ ನಿರ್ಣಾಯಕವಾಗಲಿದೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಟಿ20 ವಿಶ್ವಕಪ್ ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿತು. ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಎರಡು ಅಂಕ ಪಡೆಯಲು ತಂಡಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಗುಂಪಿನ ಉಳಿದ ಪಂದ್ಯಗಳು ಜೋಸ್ ಬಟ್ಲರ್‌ ಬಳಗಕ್ಕೆ ನಿರ್ಣಾಯಕವಾಗಿವೆ. ಮುಂದಿನ ಪಂದ್ಯಕ್ಕೂ ಮಳೆ ಅಡ್ಡಿಯಾದರೆ, ತಂಡ ಲೀಗ್‌ನಿಂದ ಹೊರಬೀಳುವ ಸಾಧ್ಯತೆಯೂ ಇದೆ.
icon

(1 / 6)

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಟಿ20 ವಿಶ್ವಕಪ್ ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿತು. ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಎರಡು ಅಂಕ ಪಡೆಯಲು ತಂಡಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಗುಂಪಿನ ಉಳಿದ ಪಂದ್ಯಗಳು ಜೋಸ್ ಬಟ್ಲರ್‌ ಬಳಗಕ್ಕೆ ನಿರ್ಣಾಯಕವಾಗಿವೆ. ಮುಂದಿನ ಪಂದ್ಯಕ್ಕೂ ಮಳೆ ಅಡ್ಡಿಯಾದರೆ, ತಂಡ ಲೀಗ್‌ನಿಂದ ಹೊರಬೀಳುವ ಸಾಧ್ಯತೆಯೂ ಇದೆ.(PTI)

ಬಾರ್ಬಡಸ್‌ನಲ್ಲಿ ಮಂಗಳವಾರ ನಡೆದ ಟಿ20 ವಿಶ್ವಕಪ್ 2024ರ ಗ್ರೂಪ್ ಬಿ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಮುಖಾಮುಖಿಯಾದವು. ಪಂದ್ಯದಲ್ಲಿ ಟಾಸ್ ಗೆದ್ದ ಸ್ಕಾಟ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಟಾಸ್ ನಂತರ ಮಳೆಯಿಂದಾಗಿ ಪಂದ್ಯವನ್ನು ನಿಗದಿತ ಸಮಯದಲ್ಲಿ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಆದಾರೂ, ವಿಳಂಬವಾಗಿ ಪಂದ್ಯ ಆರಂಭವಾಯ್ತು.
icon

(2 / 6)

ಬಾರ್ಬಡಸ್‌ನಲ್ಲಿ ಮಂಗಳವಾರ ನಡೆದ ಟಿ20 ವಿಶ್ವಕಪ್ 2024ರ ಗ್ರೂಪ್ ಬಿ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಮುಖಾಮುಖಿಯಾದವು. ಪಂದ್ಯದಲ್ಲಿ ಟಾಸ್ ಗೆದ್ದ ಸ್ಕಾಟ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಟಾಸ್ ನಂತರ ಮಳೆಯಿಂದಾಗಿ ಪಂದ್ಯವನ್ನು ನಿಗದಿತ ಸಮಯದಲ್ಲಿ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಆದಾರೂ, ವಿಳಂಬವಾಗಿ ಪಂದ್ಯ ಆರಂಭವಾಯ್ತು.(PTI)

ಮಳೆಯ ನಂತರ ಪಂದ್ಯ ಪುನರಾರಂಭಗೊಂಡಿತು. ಬ್ಯಾಟಿಂಗ್‌ ನಡೆಸಿದ ಸ್ಕಾಟ್ಲೆಂಡ್ ಆರಂಭಿಕ ಆಟಟಗಾರರು ಭದ್ರ ಅಡಿಪಾಯ ಹಾಕಿಕೊಟ್ಟರು. ಪವರ್ ಪ್ಲೇ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದರು. ಸ್ಕಾಟ್ಲೆಂಡ್ 6.2 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 51 ರನ್ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಮಳೆಯ ನಂತರ ಆಟ ಪುನರಾರಂಭಗೊಂಡಾಗ ಓವರ್‌ಗಳನ್ನು ಕಡಿತಗೊಳಿಸಲಾಯ್ತು. ಇನ್ನಿಂಗ್ಸ್‌ಗೆ 10 ಓವರ್‌ ನಿಗದಿಪಡಿಸಲಾಯಿತು.
icon

(3 / 6)

ಮಳೆಯ ನಂತರ ಪಂದ್ಯ ಪುನರಾರಂಭಗೊಂಡಿತು. ಬ್ಯಾಟಿಂಗ್‌ ನಡೆಸಿದ ಸ್ಕಾಟ್ಲೆಂಡ್ ಆರಂಭಿಕ ಆಟಟಗಾರರು ಭದ್ರ ಅಡಿಪಾಯ ಹಾಕಿಕೊಟ್ಟರು. ಪವರ್ ಪ್ಲೇ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದರು. ಸ್ಕಾಟ್ಲೆಂಡ್ 6.2 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 51 ರನ್ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಮಳೆಯ ನಂತರ ಆಟ ಪುನರಾರಂಭಗೊಂಡಾಗ ಓವರ್‌ಗಳನ್ನು ಕಡಿತಗೊಳಿಸಲಾಯ್ತು. ಇನ್ನಿಂಗ್ಸ್‌ಗೆ 10 ಓವರ್‌ ನಿಗದಿಪಡಿಸಲಾಯಿತು.(AP)

ಸ್ಕಾಟ್ಲೆಂಡ್ ನಿಗದಿತ 10 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 90 ರನ್ ಗಳಿಸಿತು. ಜಾರ್ಜ್ ಮುನ್ಸಿ 31 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 41 ರನ್ ಗಳಿಸಿ ಅಜೇಯರಾಗಿ ಉಳಿದರು. ಮೈಕೆಲ್ ಜೋನ್ಸ್ 30 ಎಸೆತಗಳಲ್ಲಿ 45 ರನ್ ಗಳಿಸಿದರು. ಅವರು 4 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು.
icon

(4 / 6)

ಸ್ಕಾಟ್ಲೆಂಡ್ ನಿಗದಿತ 10 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 90 ರನ್ ಗಳಿಸಿತು. ಜಾರ್ಜ್ ಮುನ್ಸಿ 31 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 41 ರನ್ ಗಳಿಸಿ ಅಜೇಯರಾಗಿ ಉಳಿದರು. ಮೈಕೆಲ್ ಜೋನ್ಸ್ 30 ಎಸೆತಗಳಲ್ಲಿ 45 ರನ್ ಗಳಿಸಿದರು. ಅವರು 4 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು.

ಇಂಗ್ಲೆಂಡ್‌ ತಂಡದ ಯಾವುದೇ ಬೌಲರ್‌ಗಳು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಮಾರ್ಕ್ ವುಡ್ 2 ಓವರ್ ಗಳಲ್ಲಿ 11 ರನ್ ನೀಡಿದರು. ಜೋಫ್ರಾ ಆರ್ಚರ್ 2 ಓವರ್ಗಳಲ್ಲಿ 12 ರನ್ ನೀಡಿದರು.
icon

(5 / 6)

ಇಂಗ್ಲೆಂಡ್‌ ತಂಡದ ಯಾವುದೇ ಬೌಲರ್‌ಗಳು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಮಾರ್ಕ್ ವುಡ್ 2 ಓವರ್ ಗಳಲ್ಲಿ 11 ರನ್ ನೀಡಿದರು. ಜೋಫ್ರಾ ಆರ್ಚರ್ 2 ಓವರ್ಗಳಲ್ಲಿ 12 ರನ್ ನೀಡಿದರು.(AP)

ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಇಂಗ್ಲೆಂಡ್ ತಂಡಕ್ಕೆ 10 ಓವರ್‌ಗಳಲ್ಲಿ 109 ರನ್‌ಗಳ ಗುರಿ ನೀಡಲಾಯ್ತು. ಆದರೆ, ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಮತ್ತೆ ಮಳೆ ಸುರಿಯಿತು. ಆಟವು ಮತ್ತೆ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯವನ್ನು ಅರ್ಧದಲ್ಲೇ ರದ್ದುಪಡಿಸಲಾಯ್ತು. ಫಲಿತಾಂಶ ಇಲ್ಲದ ಕಾರಣ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ಗೆ ತಲಾ 1 ಅಂಕ ನೀಡಲಾಯಿತು.
icon

(6 / 6)

ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಇಂಗ್ಲೆಂಡ್ ತಂಡಕ್ಕೆ 10 ಓವರ್‌ಗಳಲ್ಲಿ 109 ರನ್‌ಗಳ ಗುರಿ ನೀಡಲಾಯ್ತು. ಆದರೆ, ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಮತ್ತೆ ಮಳೆ ಸುರಿಯಿತು. ಆಟವು ಮತ್ತೆ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯವನ್ನು ಅರ್ಧದಲ್ಲೇ ರದ್ದುಪಡಿಸಲಾಯ್ತು. ಫಲಿತಾಂಶ ಇಲ್ಲದ ಕಾರಣ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ಗೆ ತಲಾ 1 ಅಂಕ ನೀಡಲಾಯಿತು.(AP)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು