ಭಾವಿ ಪತಿ ಜತೆ ರೊಮ್ಯಾಂಟಿಕ್ ವಿಡಿಯೋ ಶೂಟ್‌ನಲ್ಲಿ ಮಿಂಚಿದ ಮೇಘನಾ ಶಂಕರಪ್ಪ; ಇದು ಸೀತಾ ರಾಮ ಸೀರಿಯಲ್ ನಟಿಯ ಹೊಸ ಆರಂಭ
- Seetha Rama Serial Meghana Shankarappa: ಸೀತಾ ರಾಮ ಸೀರಿಯಲ್ ಪ್ರಿಯಾ ಖ್ಯಾತಿಯ ನಟಿ ಮೇಘನಾ ಶಂಕರಪ್ಪ ಸದ್ಯ ಮದುವೆ ತಯಾರಿಯಲ್ಲಿದ್ದಾರೆ. ಫೆಬ್ರವರಿಯಲ್ಲಿ ಜಯಂತ್ ಕುಮಾರಸ್ವಾಮಿ ಎಂಬುವವರ ಜತೆ ಬಾಳ ಬಂಧನಕ್ಕೆ ಬಲಗಾಲಿಡಲಿರುವ ಮೇಘನಾ, ಇದೀಗ ಭಾವಿ ಪತಿ ಜತೆಗೆ ಮೇಲುಕೋಟೆಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಇಲ್ಲಿವೆ ನೋಡಿ ಅದರ ಫೋಟೋ ಝಲಕ್.

(1 / 12)
ಸೀತಾ ರಾಮ ಸೀರಿಯಲ್‌ನಲ್ಲಿ ಪಟ ಪಟ ಅಂತ ಮಾತನಾಡುವ, ಪ್ರಿಯಾ ಪಾತ್ರದ ಮೂಲಕವೇ ಕಿರುತೆರೆ ವೀಕ್ಷಕರ ಸೆಳೆದವರು ನಟಿ ಮೇಘನಾ ಶಂಕರಪ್ಪ.
(Instagram\ meghana Shankarappa)(2 / 12)
ಈಗ ಇದೇ ಮೇಘನಾ ಅಲಿಯಾಸ್ ಪ್ರಿಯಾ ಮದುವೆ ಸಂಭ್ರಮದಲ್ಲಿದ್ದಾರೆ. ಮದುವೆಗೂ ಮುನ್ನ ಭಾವಿ ಪತಿ ಜತೆಗೆ ಬಗೆಬಗೆ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.
(3 / 12)
ಇತ್ತೀಚೆಗಷ್ಟೇ ಸೀತಾ ರಾಮ ಸೀರಿಯಲ್‌ನ ಲೇಡಿ ಗ್ಯಾಂಗ್‌ಗೆ ಬ್ಯಾಚುಲರೇಟ್ ಪಾರ್ಟಿ ಕೊಟ್ಟಿದ್ದರು ಮೇಘನಾ ಶಂಕರಪ್ಪ.
(5 / 12)
ಇದೀಗ ಭಾವಿ ಪತಿ ಜಯಂತ್ ಕುಮಾರಸ್ವಾಮಿ ಅವರ ಜತೆಗೆ ಪ್ರೀ ವೆಡ್ಡಿಂಗ್ ಪೋಟೋ ಮತ್ತು ವಿಡಿಯೋ ಶೂಟ್ ಮಾಡಿಸಿದ್ದಾರೆ. ಮೇಲುಕೋಟೆಯಲ್ಲಿ ಈ ಜೋಡಿ ಕೈ ಕೈ ಹಿಡಿದು ಸುತ್ತಾಡಿದ್ದಾರೆ.
(6 / 12)
ನಾ ನಾನಾಗುವೆ ನಿನ್ನ ಜೊತೆ, ನೀ ನೀನಾಗಲು ಚೆಂದ ಕಥೆ.. ಎನ್ನುವ ರೊಮ್ಯಾಂಟಿಕ್ ಹಾಡಿಗೆ ಈ ಜೋಡಿ ಹೆಜ್ಜೆಹಾಕಿದೆ.
(7 / 12)
ಪ್ರೀ ವೆಡ್ಡಿಂಗ್ ವಿಡಿಯೋ ಶೂಟ್‌ನಲ್ಲಿ ಕ್ರೀಂ ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದರೆ, ವೈಟ್ ಕುರ್ತಾದಲ್ಲಿ ಜಯಂತ್ ಮಿಂಚಿದ್ದಾರೆ.
(8 / 12)
ಅಂದಹಾಗೆ, ಮೇಘನಾ ಮತ್ತು ಜಯಂತ್ ಆರಂಭದಲ್ಲಿ ಸ್ನೇಹಿತರಾಗಿ ಪರಚಯವಾಗಿ, ಬಳಿಕ ಪ್ರೀತಿಗೆ ತಿರುಗಿತ್ತು. ಅದಾದ ಮೇಲೆ ಮನೆಯವರೇ ಈ ಜೋಡಿಯ ಮದುವೆ ನಿಶ್ಚಯಿಸಿದ್ದರು.
(9 / 12)
ಕನ್ನಡ ಕಿರುತೆರೆಯಲ್ಲಿ ಮೇಘನಾ ಗುರುತಿಸಿಕೊಂಡಿದ್ದಾರೆ. ಇತ್ತ ಬೆಂಗಳೂರಿನವರೇ ಆದ ಜಯಂತ್, ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್.
ಇತರ ಗ್ಯಾಲರಿಗಳು