ವನಿತೆಯರ ಕ್ರಿಕೆಟ್‌ನಲ್ಲೇ ಅತಿ ವೇಗದ ಎಸೆತ; ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವೇಗಿ ಶಬ್ನಿಮ್ ಇಸ್ಮಾಯಿಲ್ ದಾಖಲೆ
- ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಶಬ್ನಿಮ್ ಇಸ್ಮಾಯಿಲ್, ವನಿತೆಯರ ಕ್ರಿಕೆಟ್‌ನಲ್ಲಿ ವೇಗವಾಗಿ ಬೌಲಿಂಗ್ ಮಾಡಿದ ದಾಖಲೆ ನಿರ್ಮಿಸಿದ್ದಾರೆ. ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ವೇಗಿ, 132.1 ಕಿಮೀ ವೇಗದಲ್ಲಿ ಚೆಂಡು ಎಸೆದಿದ್ದಾರೆ. ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ವೇಗವಾಗಿ ಬೌಲಿಂಗ್ ಮಾಡಿದ ದಾಖಲೆ ಮಾಡಿದ್ದಾರೆ.

(1 / 7)
ಮಹಿಳಾ ಕ್ರಿಕೆಟ್‌ನಲ್ಲಿ ಎಸೆತವೊಂದು 130kph ವೇಗದ ಗಡಿ ದಾಟಿದ್ದು ಇದೇ ಮೊದಲು. ಇದು ವಿಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ದಾಖಲಾಗಿರುವುದು ಇನ್ನೂ ವಿಶೇಷ.(Mumbai Indians-X)
(2 / 7)
ವನಿತಾ ಕ್ರಿಕೆಟಿಗರಲ್ಲಿ ಇದೇ ಮೊದಲ ಬಾರಿಗೆ ಇಷ್ಟು ವೇಗದ ಎಸೆತ ಬಂದಿದೆ. ಡೆಲ್ಲಿ ವಿರುದ್ಧದ ಪಂದ್ಯದ ಮೂರನೇ ಓವರ್‌ನ ಎರಡನೇ ಎಸೆತವು ಡೆಲ್ಲಿ ತಂಡದ ನಾಯಕಿ ಮೆಗ್ ಲ್ಯಾನಿಂಗ್‌ಗೆ ಪ್ಯಾಡ್‌ಗಳ ಮೇಲೆ ಬಡಿದಿದೆ. ಇದು ಗಂಟೆಗೆ 132.1 ಕಿಮೀ ವೇಗದಲ್ಲಿ ಸಾಗಿದೆ.(AFP)
(4 / 7)
2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಂಟೆಗೆ 128 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದರು. 2022 ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಎರಡು ಬಾರಿ ಗಂಟೆಗೆ 128 ಕಿಲೋಮೀಟರ್ ವೇಗದಲ್ಲಿ ಎಸೆದಿದ್ದರು. ದಕ್ಷಿಣ ಆಫ್ರಿಕಾ ಆಟಗಾರ್ತಿ ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ನಂತರ ನಿವೃತ್ತರಾದರು.(PTI)
(5 / 7)
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ಅವರು, 46 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಪಂದ್ಯದಲ್ಲಿ ಕೇವಲ 1 ವಿಕೆಟ್ ಪಡೆದರು.(PTI)
ಇತರ ಗ್ಯಾಲರಿಗಳು