ಕನ್ನಡ ಸುದ್ದಿ  /  Photo Gallery  /  Shadashtaka Yoga 2023 Shadashtak Yog Of Saturn Mars Till 30th June This Zodiac Sign Should Be Careful Mnk

Shadashtaka Yoga 2023: 30 ವರ್ಷಗಳ ಬಳಿಕ ಶನಿ- ಮಂಗಳನ ಸಂಯೋಗದಿಂದ ಷಡಷ್ಟಕ ಯೋಗ ಸೃಷ್ಟಿ; ಇದರ ಫಲಾಫಲಗಳೇನು?

  • Shadashtaka Yoga 2023: ಶನಿ- ಮಂಗಳ ಗ್ರಹಗಳ ಷಡಷ್ಟಕ ಯೋಗವು ಹಲವು ರಾಶಿಯವರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾದರೆ ಯಾರು ಜಾಗರೂಕರಾಗಿರಬೇಕು? ಇಲ್ಲಿದೆ ಮಾಹಿತಿ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಮತ್ತು ಶನಿಯನ್ನು ಪರಸ್ಪರ ಶತ್ರುಗಳೆಂದು ಪರಿಗಣಿಸಲಾಗುತ್ತದೆ. ಈ ಎರಡೂ ಗ್ರಹಗಳ ವ್ಯಕ್ತಿಯ ಕುಂಡಲಿಯಲ್ಲಿ ಒಟ್ಟಿಗೆ ಇರುವಾಗ ಅಂಥವರಿಗೆ ಸಮಸ್ಯೆಗಳೇ ಹೆಚ್ಚು. ಈ ಮಂಗಳ ಮತ್ತು ಶನಿ ಸಂಕ್ರಮಣದ ಸಮಯದಲ್ಲಿ ಹಲವು ರಾಶಿಯವರಿಗೆ ಅಶುಭ ಸೂಚಕ ಮತ್ತು ಅಡ್ಡಪರಿಣಾಮಗಳೇ ಹೆಚ್ಚು.
icon

(1 / 8)

ಮೇ 10 ರಿಂದ ಜೂನ್ 30 ರವರೆಗೆ ಇದೇ ರೀತಿಯ ಅಶುಭ ಯೋಗಗಳು ರೂಪುಗೊಂಡಿವೆ. ಅಂದಹಾಗೆ, 30 ವರ್ಷಗಳ ನಂತರ ಈ ಯೋಗ ಸೃಷ್ಟಿಯಾಗಿದೆ ಎನ್ನುತ್ತಾರೆ ಜ್ಯೋತಿಷಿಗಳು. ಈ ಯೋಗದ ಪ್ರಭಾವ ಎಲ್ಲ ರಾಶಿಗಳ ಮೇಲೂ ಬಿದ್ದಿದೆ.
icon

(2 / 8)

ಸದ್ಯ ಶನಿಯು ಕುಂಭ ರಾಶಿಯಲ್ಲಿದೆ. ಮಂಗಳ ಗ್ರಹವನ್ನು ಕೋಪ ಮತ್ತು ಹಿಂಸೆಗೆ ಕಾರಣವೆಂದು ಪರಿಗಣಿಸಿದರೆ, ಶನಿಯು ದುಃಖ ಮತ್ತು ಬಡತನಕ್ಕೆ ಕಾರಣ ಎನ್ನಲಾಗುತ್ತದೆ. ಇದೀಗ ಈ ಇವೆರಡೂ ಗ್ರಹಗಳ ಸಂಯೋಗದಿಂದ ಷಡಷ್ಟಕ ಯೋಗ ರೂಪುಗೊಳುತ್ತದೆ. ಕೆಲವರು ಈ ಸಮಯದಲ್ಲಿ ಜಾಗರೂಕರಾಗಿರುವುದು ಒಳಿತು. 
icon

(3 / 8)

ಕರ್ಕಾಟಕ: ಶನಿ ಮತ್ತು ಮಂಗಳನ ಈ ಅಶುಭ ಯೋಗ ರಚನೆಯಿಂದಾಗಿ, ಕರ್ಕ ರಾಶಿಯವರು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಈ ಸಮಯದಲ್ಲಿ ನೀವು ಆಸ್ತಿಗೆ ಸಂಬಂಧಿಸಿದ ಕೆಲವು ರೀತಿಯ ವಿವಾದದಲ್ಲಿ ಭಾಗಿಯಾಗಬಹುದು. ಈ ಸಂಯೋಜನೆಯಿಂದಾಗಿ, ನೀವು ಹಣವನ್ನು ಹೂಡಿಕೆ ಮಾಡುವ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕು. ಕೌಟುಂಬಿಕ ಕಲಹಗಳಿಂದ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ. ತಾಳ್ಮೆಯಿಂದಿರಿ.
icon

(4 / 8)

ಸಿಂಹ: ಶನಿ ಮತ್ತು ಮಂಗಳ ಗ್ರಹಗಳ ಷಡಷ್ಟಕ ಯೋಗದ ಕಾರಣ, ಸಿಂಹ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು. ಈ ಷಡಷ್ಟಕ ಯೋಗ ರಚನೆಯಿಂದಾಗಿ ನೀವು ಒತ್ತಡ ಮತ್ತು ಸಮಸ್ಯೆಗಳನ್ನು ಎದುರಿಸಬಹುದು. ಇದು ನಿಮ್ಮ ಕೆಲಸದ ಸ್ಥಳದ ಮೇಲೆ ಸಂಪೂರ್ಣವಾಗಿ ಪರಿಣಾಮ ಬೀರುತ್ತದೆ. ಹಣಕಾಸಿನ ಸಮಸ್ಯೆಗಳೂ ಬಂದು ನಿಮ್ಮ ಆದಾಯವನ್ನು ನಿಲ್ಲಿಸಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
icon

(5 / 8)

ಧನು ರಾಶಿ: ಧನು ರಾಶಿಯವರಿಗೆ, ಶನಿಯು ಮಂಗಳನೊಂದಿಗೆ ಎಂಟನೇ ಮನೆಯಲ್ಲಿ ಸಂಯೋಗ ಹೊಂದಿದ್ದಾನೆ. ಆದ್ದರಿಂದ ನೀವು ಗಳಿಸುವುದಕ್ಕಿಂತ ಹೆಚ್ಚಿನ ಖರ್ಚು ಮಾಡುವುದನ್ನು ತಪ್ಪಿಸಬೇಕು. ವಾಹನ ಅಪಘಾತಗಳು ಸಂಭವಿಸಬಹುದು ಆದ್ದರಿಂದ ಎಚ್ಚರಿಕೆಯಿಂದಿರಿ. ನೀವು ನಕಾರಾತ್ಮಕ ಪ್ರಭಾವಗಳಿಂದ ಪ್ರಭಾವಿತರಾಗುತ್ತೀರಿ. ಇದರಿಂದಾಗಿ ನೀವು ಒತ್ತಡವನ್ನು ಅನುಭವಿಸಬಹುದು. ಹೆಂಡತಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಆದ್ದರಿಂದ ವಾದ ಮಾಡಬೇಡಿ. ಸರಿಯಾದ ಸಮಯಕ್ಕಾಗಿ ಕಾಯಿರಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ.
icon

(6 / 8)

ಕುಂಭ ರಾಶಿ: ಶನಿ ಮಂಗಳ ಸಂಚಾರದಲ್ಲಿ ಷಷ್ಟಕ ಯೋಗದ ರಚನೆಯಿಂದಾಗಿ ಕುಂಭ ರಾಶಿಯವರು ಸಮಸ್ಯೆಗಳನ್ನು ಎದುರಿಸಬಹುದು. ಒತ್ತಡ ಸೃಷ್ಟಿಯಾಗಲಿದೆ. ಸ್ವಭಾವದಲ್ಲಿ ಸ್ವಲ್ಪ ಕೋಪ ಮತ್ತು ಆಕ್ರಮಣಕಾರಿ ಎನಿಸಬಹುದು. ಆದ್ದರಿಂದ ನೀವು ಕೋಪದಿಂದ ದೂರವಿರುವುದು ಮತ್ತು ವೈವಾಹಿಕ ಜೀವನದಲ್ಲಿ ಕೆಲವು ತಪ್ಪುಗ್ರಹಿಕೆಗಳನ್ನು ತಪ್ಪಿಸುವುದು ಉತ್ತಮ. ಈ ಸಮಯದಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು. ವಾಹನ ಚಲಾಯಿಸುವಾಗ ಅಪಘಾತವಾಗುವ ಸಂಭವವಿದ್ದು ಜಾಗರೂಕರಾಗಿರಿ.
icon

(7 / 8)

ಷಷ್ಟಕ ಯೋಗ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎರಡು ಗ್ರಹಗಳು ಜಾತಕದಲ್ಲಿ ಪರಸ್ಪರ ಆರನೇ ಮತ್ತು ಎಂಟನೇ ಮನೆಗಳಲ್ಲಿದ್ದಾಗ ಷಡಷ್ಟಕ ಯೋಗವು ರೂಪುಗೊಳ್ಳುತ್ತದೆ. ಈ ಷಡಷ್ಟಕವನ್ನು ಅಶುಭ ಯೋಗವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಯೋಗದಿಂದ ಜನರು ದುಃಖ, ದ್ವೇಷ, ಆತಂಕ, ದುರದೃಷ್ಟ ಮತ್ತು ಸಂಕಟಗಳನ್ನು ಎದುರಿಸಬೇಕಾಗುತ್ತದೆ.
icon

(8 / 8)

IPL_Entry_Point

ಇತರ ಗ್ಯಾಲರಿಗಳು