ಮಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ವೇಗದ ಶತಕ, ದ್ವಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ ಶಫಾಲಿ ವರ್ಮಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ವೇಗದ ಶತಕ, ದ್ವಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ ಶಫಾಲಿ ವರ್ಮಾ

ಮಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ವೇಗದ ಶತಕ, ದ್ವಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ ಶಫಾಲಿ ವರ್ಮಾ

  • Shafali Verma Records: ಟೆಸ್ಟ್ ಕ್ರಿಕೆಟ್​​ನಲ್ಲಿ ಸಿಡಿಸಿದ ತನ್ನ ಮೊದಲ ಶತಕವನ್ನೇ ದ್ವಿಶತಕವನ್ನಾಗಿ ಪರಿವರ್ತಿಸಿದ ಶೆಫಾಲಿ ವರ್ಮಾ, ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದ ಶಫಾಲಿ ವರ್ಮಾ ಅದನ್ನು ದ್ವಿಶತಕವಾಗಿ ಪರಿವರ್ತಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಚೆನ್ನೈನಲ್ಲಿ ಜೂನ್ 28ರಂದು ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯದಲ್ಲಿ ಭಾರತದ ಯುವ ಆಟಗಾರ್ತಿ 194 ಎಸೆತಗಳಲ್ಲಿ ದ್ವಿಶತಕ ಪೂರೈಸಿ ದಾಖಲೆ ಬರೆದಿದ್ದಾರೆ. ಅವರ ಇನ್ನಿಂಗ್ಸ್​​ನಲ್ಲಿ 23 ಬೌಂಡರಿ, 8 ಸಿಕ್ಸರ್​​​ಗಳಿವೆ.
icon

(1 / 6)

ಮಿಥಾಲಿ ರಾಜ್ ನಂತರ ಟೆಸ್ಟ್ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ 2ನೇ ಭಾರತೀಯ ಮಹಿಳಾ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2002ರಲ್ಲಿ ಟೌಂಟನ್​ನಲ್ಲಿ ಇಂಗ್ಲೆಂಡ್ ವಿರುದ್ಧ ಮಿಥಾಲಿ ದ್ವಿಶತಕ ಬಾರಿಸಿದ್ದರು. ಆಗ ಮಿಥಾಲಿ ಅವರಿಗೆ 19 ವರ್ಷ ವಯಸ್ಸಾಗಿತ್ತು. 22 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ ಡಬಲ್ ಸೆಂಚುರಿ ಬಾರಿಸಿದ ಭಾರತದ 2ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಶಫಾಲಿ ಪಾತ್ರರಾಗಿದ್ದಾರೆ.
icon

(2 / 6)

ಅಷ್ಟೇ ಅಲ್ಲ, ಮಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ದಾಖಲೆಯನ್ನೂ ಶಫಾಲಿ ನಿರ್ಮಿಸಿದ್ದಾರೆ. 2ನೇ ಸ್ಥಾನದಲ್ಲಿರುವ ಅನ್ನಾಬೆಲ್ ಸದರ್ಲ್ಯಾಂಡ್​ 248 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದೇ ಇದುವರೆಗಿನ ವೇಗದ ದ್ವಿಶತಕವಾಗಿದೆ. ಶಫಾಲಿ 194 ಎಸೆತಗಳಲ್ಲಿ 200 ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇಬ್ಬರೂ 2024ರಲ್ಲಿ ದ್ವಿಶತಕ ಬಾರಿಸಿದ್ದಾರೆ.
icon

(3 / 6)

ದ್ವಿಶತಕದ ಇನ್ನಿಂಗ್ಸ್ ಬೆನ್ನಲ್ಲೇ ಶಫಾಲಿ ರನೌಟ್ ಆದರು, 197 ಎಸೆತಗಳಲ್ಲಿ 205 ರನ್ ಗಳಿಸಿದ ನಂತರ ಡ್ರೆಸ್ಸಿಂಗ್ ರೂಮ್​ಗೆ ಮರಳಿದರು. 23 ಬೌಂಡರಿ, 8 ಸಿಕ್ಸರ್ ಸಹಿತ ಸ್ಟ್ರೈಕ್ ರೇಟ್ 104.06ರಲ್ಲಿ ರನ್ ಗಳಿಸಿದ್ದಾರೆ. 113 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದ ಶಫಾಲಿ, ಅಲ್ಲಿಂದ ದ್ವಿಶತಕ ತಲುಪಲು ಕೇವಲ 81 ಎಸೆತಗಳನ್ನು ತೆಗೆದುಕೊಂಡರು.
icon

(4 / 6)

ಟೆಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ನಂತರ ರನ್ ಔಟ್ ಆದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎನಿಸಿದ್ದಾರೆ. ಶಫಾಲಿಗಿಂತ ಮೊದಲು ಸಂಜಯ್ ಮಂಜ್ರೇಕರ್ 1989ರಲ್ಲಿ ಪಾಕಿಸ್ತಾನ ವಿರುದ್ಧ ದ್ವಿಶತಕ ಬಾರಿಸಿದ್ದರು. 2002ರಲ್ಲಿ ಇಂಗ್ಲೆಂಡ್ ವಿರುದ್ಧ ರಾಹುಲ್ ದ್ರಾವಿಡ್ ಡಬಲ್ ಸೆಂಚುರಿ ನಂತರ ರನೌಟ್ ಆಗಿದ್ದರು.
icon

(5 / 6)

ಶಫಾಲಿ 113 ಎಸೆತಗಳಲ್ಲಿ 100 ಪೂರೈಸುವ ಮೂಲಕ ಮಹಿಳಾ ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ವೇಗದ ಸೆಂಚುರಿ ಬಾರಿಸಿದ ಮೊದಲ ಆಟಗಾರ್ತಿ ಎಂಬ ವಿಶ್ವದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ದಾಖಲೆ ಇಂಗ್ಲೆಂಡ್ ಆಟಗಾರ್ತಿ ಜಾನೆಟ್ ಬ್ರಿಟಿನ್ ಹೆಸರಿನಲ್ಲಿತ್ತು. 1984ರಲ್ಲಿ ಆಸ್ಟ್ರೇಲಿಯಾ ಎದುರು 137 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು. ಇದೀಗ ಈ 40 ವರ್ಷಗಳ ಹಳೆಯ ದಾಖಲೆಯನ್ನು ಶಫಾಲಿ ಬ್ರೇಕ್ ಮಾಡಿದ್ದಾರೆ.
icon

(6 / 6)

ಶಫಾಲಿ 113 ಎಸೆತಗಳಲ್ಲಿ 100 ಪೂರೈಸುವ ಮೂಲಕ ಮಹಿಳಾ ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ವೇಗದ ಸೆಂಚುರಿ ಬಾರಿಸಿದ ಮೊದಲ ಆಟಗಾರ್ತಿ ಎಂಬ ವಿಶ್ವದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ದಾಖಲೆ ಇಂಗ್ಲೆಂಡ್ ಆಟಗಾರ್ತಿ ಜಾನೆಟ್ ಬ್ರಿಟಿನ್ ಹೆಸರಿನಲ್ಲಿತ್ತು. 1984ರಲ್ಲಿ ಆಸ್ಟ್ರೇಲಿಯಾ ಎದುರು 137 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು. ಇದೀಗ ಈ 40 ವರ್ಷಗಳ ಹಳೆಯ ದಾಖಲೆಯನ್ನು ಶಫಾಲಿ ಬ್ರೇಕ್ ಮಾಡಿದ್ದಾರೆ.(PTI)

ಇತರ ಗ್ಯಾಲರಿಗಳು