ಸಿಗರೇಟ್ ಸೇದೋಕೆ ನಿಮ್ ಅಡ್ಡನಾ; ಶಾರೂಖ್ ಖಾನ್ ಚಳಿ ಬಿಡಿಸಿದ ನೆಟ್ಟಿಗರು, ಕಿಂಗ್ ಖಾನ್​ರ ಐಪಿಎಲ್ ವಿವಾದಗಳಿಗೆ ಮತ್ತೊಂದು ಸೇರ್ಪಡೆ-shah rukh khan caught smoking during kkr vs srh ipl match in kolkata bollywood actor ipl controversy cricket news prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿಗರೇಟ್ ಸೇದೋಕೆ ನಿಮ್ ಅಡ್ಡನಾ; ಶಾರೂಖ್ ಖಾನ್ ಚಳಿ ಬಿಡಿಸಿದ ನೆಟ್ಟಿಗರು, ಕಿಂಗ್ ಖಾನ್​ರ ಐಪಿಎಲ್ ವಿವಾದಗಳಿಗೆ ಮತ್ತೊಂದು ಸೇರ್ಪಡೆ

ಸಿಗರೇಟ್ ಸೇದೋಕೆ ನಿಮ್ ಅಡ್ಡನಾ; ಶಾರೂಖ್ ಖಾನ್ ಚಳಿ ಬಿಡಿಸಿದ ನೆಟ್ಟಿಗರು, ಕಿಂಗ್ ಖಾನ್​ರ ಐಪಿಎಲ್ ವಿವಾದಗಳಿಗೆ ಮತ್ತೊಂದು ಸೇರ್ಪಡೆ

  • Shah Rukh Khan Caught Smoking : ಸನ್​​​ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವಿನ ಪಂದ್ಯದ ವೇಳೆ ಬಾಲಿವುಡ್ ನಟ ಶಾರೂಖ್ ಖಾನ್ ಸಿಗರೇಟ್ ಸೇದುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸಹ ಮಾಲೀಕ ಹಾಗೂ ಬಾಲಿವುಡ್ ನಟ ಶಾರೂಖ್ ಖಾನ್ ಅವರು ಕೆಕೆಆರ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ಪಂದ್ಯದ ವೇಲೆ ಸಿಗರೇಟ್ ಸೇದುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಆ ಮೂಲಕ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ ಕಿಂಗ್​ ಖಾನ್.
icon

(1 / 9)

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಐಪಿಎಲ್​ನ 3ನೇ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡವು 10 ಓವರ್ ಮುಕ್ತಾಯದ ಅವಧಿಗೆ 77 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಟೆನ್ಷನ್‌ನಲ್ಲಿ ಶಾರೂಕ್ ಖಾನ್ ಸ್ಮೋಕ್ ಮಾಡಿದ್ದಾರೆ ಎಂದು ಹೇಳಲಾಗಿದೆ.
icon

(2 / 9)

ಶಾರೂಖ್ ಅವರು ಪಂದ್ಯದ ಮಧ್ಯೆಯೇ ಸಿಗರೇಟ್ ಸೇದಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ. ಸಿಗರೇಟ್ ಸೇದೋಕೆ ಇದೇನು ನಿಮ್ಮ ಅಡ್ಡ ಅಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ನಿಮ್ಮ ಅಡ್ಡನಾ ಎಂದು ಫ್ಯಾನ್ಸ್ ಹೇಳಲು ಕಾರಣ ಇದೆ.
icon

(3 / 9)

ನಟ ಶಾರೂಖ್ ಈ ಹಿಂದೆಯೂ ಇದೇ ರೀತಿ ಮೈದಾನದಲ್ಲಿ ಸ್ಮೋಕ್ ಮಾಡಿ ವಿವಾದಕ್ಕೆ ಗುರಿಯಾಗಿದ್ದರು. ಈ ಹಿಂದೊಮ್ಮೆ ಜೈಪುರದ ಸವಾಯಿ ಮಾನ್​ಸಿಂಗ್​ ಮೈದಾನದಲ್ಲಿ ನಟ ಸಿಗರೇಟ್ ಸೇದಿದ್ದಕ್ಕೆ ಜೈಪುರದ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಮತ್ತೊಮ್ಮೆ ಸಿಗರೇಟ್​ ಸೇದಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
icon

(4 / 9)

ಸಿಗರೇಟ್ ಮಾತ್ರವಲ್ಲ, ಮೈದಾನದ ಸಿಬ್ಬಂದಿಯೊಂದಿಗೆ ದುರ್ವತನೆ ಕೂಡ ತೋರಿದ್ದರು. 2012ರ ಐಪಿಎಲ್​ನಲ್ಲಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ಭರ್ಜರಿ ಗೆಲುವು ಸಾಧಿಸಿತ್ತು. ಆಗ ಶಾರೂಖ್ ಕುಡಿದ ಮತ್ತಿನಲ್ಲಿ ಭದ್ರತಾ ಸಿಬ್ಬಂದಿ ಜತೆ ಜಗಳವಾಡಿದ್ದರು. ಹಾಗಾಗಿ ವಾಂಖೆಡೆಗೆ ಪ್ರವೇಶಿಸದಂತೆ ನಟನಿಗೆ 5 ವರ್ಷಗಳ ಕಾಲ ನಿಷೇಧದ ಶಿಕ್ಷೆ ವಿಧಿಸಲಾಗಿತ್ತು.
icon

(5 / 9)

ಶಾರೂಖ್ ಖಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಪ್ರೀಮಿಯರ್​ ಲೀಗ್​​ ಫೈನಲ್​ ಪಂದ್ಯದಲ್ಲಿ ಇಮಾದ್ ವಾಸೀಂ ಅವರು ತಮ್ಮ ಡ್ರೆಸ್ಸಿಂಗ್‌ ರೂಮ್​ನಲ್ಲಿ ಸಿಗರೇಟ್‌ ಸೇದಿ ಟೀಕೆಗೆ ಒಳಗಾಗಿದ್ದರು.
icon

(6 / 9)

ಎಸ್​ಆರ್​​ಹೆಚ್​ ವಿರುದ್ಧ ಕೆಕೆಆರ್​ ರೋಚಕ 4 ರನ್​ಗಳ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಕೋಲ್ಕತ್ತಾ, ಏಳು ವಿಕೆಟ್ ನಷ್ಟಕ್ಕೆ 208 ರನ್​ ಬಾರಿಸಿತು. ಆ್ಯಂಡ್ರೆ ರಸೆಲ್ ಅವರು ಸ್ಫೋಟಕ 64 ರನ್ ಚಚ್ಚಿದರು.
icon

(7 / 9)

ಎಸ್​ಆರ್​​ಹೆಚ್​ ವಿರುದ್ಧ ಕೆಕೆಆರ್​ ರೋಚಕ 4 ರನ್​ಗಳ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಕೋಲ್ಕತ್ತಾ, ಏಳು ವಿಕೆಟ್ ನಷ್ಟಕ್ಕೆ 208 ರನ್​ ಬಾರಿಸಿತು. ಆ್ಯಂಡ್ರೆ ರಸೆಲ್ ಅವರು ಸ್ಫೋಟಕ 64 ರನ್ ಚಚ್ಚಿದರು.(ANI )

209 ರನ್​ಗಳ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಸನ್​ರೈಸರ್ಸ್​  ಹೈದರಾಬಾದ್ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್​ ಗಳಿಸಿ ಕೇವಲ 4 ರನ್​ ಅಂತರದಿಂದ ಸೋಲೊಪ್ಪಿಕೊಂಡಿತು. ಹೆನ್ರಿಚ್​ ಕ್ಲಾಸೆನ್ ಕೊನೆಯವರೆಗೂ ಹೋರಾಟ ನಡೆಸಿದರು.
icon

(8 / 9)

209 ರನ್​ಗಳ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಸನ್​ರೈಸರ್ಸ್​  ಹೈದರಾಬಾದ್ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್​ ಗಳಿಸಿ ಕೇವಲ 4 ರನ್​ ಅಂತರದಿಂದ ಸೋಲೊಪ್ಪಿಕೊಂಡಿತು. ಹೆನ್ರಿಚ್​ ಕ್ಲಾಸೆನ್ ಕೊನೆಯವರೆಗೂ ಹೋರಾಟ ನಡೆಸಿದರು.(PTI)

ಹರ್ಷಿತ್ ರಾಣಾ ಕೊನೆಯ ಓವರ್‌ನಲ್ಲಿ ಸಂಚಲನ ಮೂಡಿಸಿದರು. ಕೇವಲ 13 ರನ್​ಗಳನ್ನು ರಕ್ಷಿಸಿಕೊಂಡು ಪ್ರಮುಖ ಎರಡು ವಿಕೆಟ್ ಪಡೆದು ಮಿಂಚಿದರು. ಕೆಕೆಆರ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
icon

(9 / 9)

ಹರ್ಷಿತ್ ರಾಣಾ ಕೊನೆಯ ಓವರ್‌ನಲ್ಲಿ ಸಂಚಲನ ಮೂಡಿಸಿದರು. ಕೇವಲ 13 ರನ್​ಗಳನ್ನು ರಕ್ಷಿಸಿಕೊಂಡು ಪ್ರಮುಖ ಎರಡು ವಿಕೆಟ್ ಪಡೆದು ಮಿಂಚಿದರು. ಕೆಕೆಆರ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.(PTI)

ಇತರ ಗ್ಯಾಲರಿಗಳು