Shaheen afridi wedding: 'ನಮ್ಮ ಖಾಸಗಿತನಕ್ಕೆ ಧಕ್ಕೆ ತರಬೇಡಿ'; ಅಭಿಮಾನಿಗಳ ನಡೆಗೆ ನವವಿವಾಹಿತ ಶಹೀನ್ ಬೇಸರ
shaheen afridi wedding photos : ಪಾಕಿಸ್ತಾನದ ವೇಗಿ ಶಹೀನ್ ಶಾ ಅಫ್ರಿದಿ, ಶನಿವಾರ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಮಗಳನ್ನು ವಿವಾಹವಾಗಿದ್ದಾರೆ. ಈ ಭವ್ಯ ಸಮಾರಂಭದಲ್ಲಿ ಹಲವಾರು ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಪಾಲ್ಗೊಂಡಿದ್ದರು. ಮದುವೆ ಕಾರ್ಯಕ್ರಮವು ಸುಗಮವಾಗಿ ಮುಗಿದಿದ್ದು, ಶಹೀನ್ ಸಂತಸಗೊಂಡಿದ್ದಾರೆ. ಆದರೆ, ಒಂದು ವಿಚಾರದ ಬಗ್ಗೆ ಅಸಾಮಾಧಾನಗೊಂಡಿರುವ ಅವರು, ಅಭಿಮಾನಿಗಳ ಬಗ್ಗೆ ಬೇಸರ ಹೊರಹಾಕಿದ್ದಾರೆ.
(1 / 8)
ಶಾಹೀನ್ ತನ್ನ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳದಂತೆ ವಿನಂತಿಸಿದ್ದರೂ, ಅವರ ಮದುವೆಯ ದೃಶ್ಯಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿದ್ದವು. ಇದರೊಂದಿಗೆ ಅಫ್ರಿದಿ ಬೇಸರಗೊಂಡಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಬೇಸರ ಹೊರಹಾಕಿದ್ದಾರೆ.
(2 / 8)
"ಪುನರಾವರ್ತಿತ ವಿನಂತಿಗಳ ಹೊರತಾಗಿಯೂ, ನಮ್ಮ ಗೌಪ್ಯತೆಗೆ ಘಾಸಿಯಾಗಿದೆ. ಜನರು ಈಗಲೂ ನಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದು ತುಂಬಾ ಬೇಸರವಾಗಿದೆ. ನಮ್ಮ ಈ ಅವಿಸ್ಮರಣೀಯ ದಿನವನ್ನು ಹಾಳುಮಾಡಲು ಪ್ರಯತ್ನಿಸಬೇಡಿ ಎಂದು ನಾನು ಮತ್ತೊಮ್ಮೆ ವಿನಮ್ರವಾಗಿ ವಿನಂತಿಸುತ್ತೇನೆ." ಶಹೀನ್ ಟ್ವೀಟ್ ಮಾಡಿದ್ದಾರೆ.
(3 / 8)
ಇವರಿಬ್ಬರ ನಿಶ್ಚಿತಾರ್ಥವು ಸುಮಾರು ಒಂದು ವರ್ಷದ ಹಿಂದೆಯೇ ನಡೆದಿತ್ತು. ಇದೀಗ ಕರಾಚಿಯಲ್ಲಿ ವಿವಾಹ ಸಮಾರಂಭ ನಡೆದಿದೆ.
(4 / 8)
ಪಾಕ್ ನಾಯಕ ಬಾಬರ್ ಅಜಮ್, ಮಾಜಿ ನಾಯಕ ಸರ್ಫರಾಜ್ ಅಹ್ಮದ್, ವೇಗದ ಬೌಲರ್ ನಸೀಮ್ ಶಾ ಮತ್ತು ಮಾಜಿ ಆಲ್ ರೌಂಡರ್ ಮೊಹಮ್ಮದ್ ಹಫೀಜ್ ಅವರೊಂದಿಗೆ ಶಾಹೀನ್ ಅವರ ಆರತಕ್ಷತೆಯಲ್ಲಿ ಶಾದಾಬ್ ಕೂಡ ಹಾಜರಿದ್ದರು. ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿವೆ.
(5 / 8)
2018ರ ಏಪ್ರಿಲ್‌ನಲ್ಲಿ ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಾಹೀನ್ ಅಫ್ರಿದಿ ಪದಾರ್ಪಣೆ ಮಾಡಿದ್ದರು. ಅವರು ಪಾಕ್ ಪರ 25 ಟೆಸ್ಟ್, 32 ಏಕದಿನ ಹಾಗೂ 47 ಟಿ20 ಪಂದ್ಯಗಳನ್ನು ಆಡಿದ್ದಾರೆ.
(6 / 8)
ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ 22ರ ಹರೆಯದ ಶಹೀನ್, ಟೆಸ್ಟ್‌ನಲ್ಲಿ 99, ಏಕದಿನದಲ್ಲಿ 62 ಮತ್ತು ಟಿ20ಯಲ್ಲಿ 58 ವಿಕೆಟ್‌ಗಳನ್ನು ಪಡೆದಿದ್ದಾರೆ.
(7 / 8)
ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆದ ಟೆಸ್ಟ್ ಸರಣಿಯ ಸಮಯದಲ್ಲಿ ಅಫ್ರಿದಿ ಅವರ ಮೊಣಕಾಲಿಗೆ ಗಾಯಗಳಾಗಿತ್ತು. ಆ ಬಳಿಕ ಅವರು ಏಷ್ಯಾಕಪ್‌ನಿಂದ ಹೊರಗುಳಿಯಬೇಕಾಯ್ತು.
ಇತರ ಗ್ಯಾಲರಿಗಳು