ಷಹಜಹಾನ್-ಮುಮ್ತಾಜ್: ತಾಜ್ ಮಹಲ್ ಹಿಂದಿನ ರೋಮ್ಯಾಂಟಿಕ್, ಹೃದಯವಿದ್ರಾವಕ ಲವ್ ಸ್ಟೋರಿ
- Shahjahan-Mumtaz Mahal Love Story: ಷಹಜಹಾನ್ ಮತ್ತು ಮುಮ್ತಾಜ್ ಮಹಲ್ ಅವರ ಪ್ರೇಮಕಥೆಯು ಒಂದು ಪ್ರಣಯ ಮತ್ತು ಹೃದಯವಿದ್ರಾವಕ ಕಥೆಯಾಗಿದೆ. ಅವರ ಪ್ರೀತಿ ಶುರುವಾಗಿದ್ದೆಲ್ಲಿ? ಇಲ್ಲಿದೆ ನೋಡಿ ವಿವರ.
- Shahjahan-Mumtaz Mahal Love Story: ಷಹಜಹಾನ್ ಮತ್ತು ಮುಮ್ತಾಜ್ ಮಹಲ್ ಅವರ ಪ್ರೇಮಕಥೆಯು ಒಂದು ಪ್ರಣಯ ಮತ್ತು ಹೃದಯವಿದ್ರಾವಕ ಕಥೆಯಾಗಿದೆ. ಅವರ ಪ್ರೀತಿ ಶುರುವಾಗಿದ್ದೆಲ್ಲಿ? ಇಲ್ಲಿದೆ ನೋಡಿ ವಿವರ.
(1 / 7)
ಪ್ರೀತಿ-ಪ್ರೇಮ ಎಂಬುದು ಸಾವಿರಾರು ವರ್ಷಗಳ ಹಿಂದೆಯೇ ಹುಟ್ಟಿದ್ದು ಎಂದು ವಿಶೇಷವಾಗಿ ಹೇಳಬೇಕಿಲ್ಲ. ಇತಿಹಾಸ ಪುಟಗಳಲ್ಲಿ ಅದೆಷ್ಟೋ ಪ್ರೇಮಿಗಳ ಹೆಸರು ದಾಖಲಾಗಿದೆ. ಪ್ರೇಮಿಗಳು ಎಂದಕೂಡಲೇ ನಮಗೆ ನೆನೆಪಿಗೆ ಬರುವ ಹೆಸರುಗಳೆಂದರೆ ರೋಮಿಯೋ-ಜೂಲಿಯೆಟ್, ಸಲೀಂ-ಅನಾರ್ಕಲಿ, ದುಷ್ಯಂತ-ಶಾಕುಂತಲೆ.. ಹೀಗೆ ಹಲವರು. ಈ ಪೈಕಿ ಇನ್ನೊಂದು ಜೋಡಿ ಅಂದರೆ ಷಹಜಹಾನ್-ಮುಮ್ತಾಜ್.
(2 / 7)
ಭಾರತದಲ್ಲಿ ಮೊಘಲ್ ಸಾಮ್ರಾಜ್ಯವನ್ನಾಳಿದ ಸುಲ್ತಾನ ಷಹಜಹಾನ್, ತನ್ನ ಪ್ರೇಯಸಿಗೆ ತಾಜ್ಮಹಲ್ ಎಂಬ ಸುಂದರ ಪ್ರೇಮಮಂದಿರ ನಿರ್ಮಿಸಿರುವುದೇ ಇದಕ್ಕೆ ಸಾಕ್ಷಿ. ಷಹಜಹಾನ್ ಮತ್ತು ಮುಮ್ತಾಜ್ ಪ್ರೇಮಕಥೆಯು ಒಂದು ಪ್ರಣಯ ಮತ್ತು ಹೃದಯವಿದ್ರಾವಕ ಕಥೆಯಾಗಿದೆ. ಮುಮ್ತಾಜ್ ಮರಣ ಹೊಂದಿದ ನಂತರ ಆಕೆಯ ನೆನಪಿಗಾಗಿ ಷಹಜಹಾನ್, ತಾಜ್ ಮಹಲ್ ಕಟ್ಟಿಸಿದ. ಇದು ವಿಶ್ವದ 7 ಅದ್ಭುತಗಳಲ್ಲಿ ಒಂದು.
(3 / 7)
ಮುಮ್ತಾಜ್ನನ್ನು ಷಹಜಹಾನ್ ಮೊದಲ ಬಾರಿಗೆ ನೋಡಿದ್ದು ಆಗ್ರಾದ ಮೀನಾ ಬಜಾರ್ನಲ್ಲಿ. ಅಲ್ಲಿ ಆಕೆ ಮಣಿಗಳು, ರೇಷ್ಮೆ ಸೀರೆಗಳನ್ನು ಮಾರುತ್ತಿದ್ದಳು. ಆಕೆಯನ್ನು ನೋಡಿದ ಮೊದಲ ನೋಟದಲ್ಲೇ ಹಷಜಹಾನ್ ಫಿದಾ ಆಗಿದ್ದ. ಐದು ವರ್ಷಗಳ ಕಾಲ ಆಕೆಯನ್ನೇ ಹಿಂಬಾಲಿಸಿದ್ದ. ಸಮುಮ್ತಾಜ್ ಮತ್ತು ಷಹಜಹಾನ್ ನಿಶ್ಚಿತಾರ್ಥ 1607ರಲ್ಲಿ ನಡೆಯಿತು.
(4 / 7)
ಆದರೆ ಮದುವೆ ದಿನಾಂಕ ನಿಗದಿಯಾಗದ ಕಾರಣ ಐದು ವರ್ಷಗಳ ಕಾಲ ಕಾಯಬೇಕಾಯಿತು. ಈ ಐದು ವರ್ಷಗಳ ಅವಧಿಯಲ್ಲಿ 1610ರಲ್ಲಿ ಷಹಜಹಾನ್ ಮೊದಲ ಪತ್ನಿ ರಾಜಕುಮಾರಿ ಕಂಧಾರಿ ಬೇಗಂ ಅವರನ್ನು ವಿವಾಹವಾದರು. ಇದರ ನಂತರ 1612ರಲ್ಲಿ ಮುಮ್ತಾಜ್ ಅವರನ್ನು ವರಿಸಿದರು. ಮದುವೆಯಾದಾಗ ಷಹಜಹಾನ್‌ಗೆ 20 ವರ್ಷ 1 ತಿಂಗಳು, 8 ದಿನವಾಗಿತ್ತು. ಮುಮ್ತಾಜ್ಗೆ 19 ವರ್ಷ, 1 ದಿನ ಆಗಿತ್ತು.
(5 / 7)
ಇದರ ನಂತರವೂ ಷಹಜಹಾನ್ ಹಲವರನ್ನು ಮದುವೆಯಾಗಿದ್ದರು. ಹಲವರನ್ನು ಮದುವೆಯಾಗಿದ್ದರೂ ಮುಮ್ತಾಜ್ ಮೇಲಿದ್ದ ಪ್ರೀತಿ ಎಲ್ಲರಿಗಿಂತ ಹೆಚ್ಚಿತ್ತು. ಅದಕ್ಕೆ ಉದಾಹರಣೆಗೆಯೇ ತಾಜ್ಮಹಲ್ ನಿರ್ಮಿಸಿದ್ದು. 1612ರಲ್ಲಿ ಷಹಜಹಾನ್ ಮುಮ್ತಾಜ್ ಅವರನ್ನು ವಿವಾಹವಾದ ಬಳಿಕ ಆಕೆಗೆ "ಮುಮ್ತಾಜ್ ಮಹಲ್" ಬೇಗಂ ಎಂಬ ಬಿರುದನ್ನು ನೀಡಿದರು. ಇದರರ್ಥ "ಅರಮನೆಯಲ್ಲಿ ಒಬ್ಬರು".
(6 / 7)
ಮುಮ್ತಾಜ್, ಷಹಜಹಾನ್‌ಗೆ ವಿಶ್ವಾಸಾರ್ಹ ಒಡನಾಡಿಯಾಗಿದ್ದರು. ಆಕೆ, ಪತಿಯೊಂದಿಗೆ ಮಿಲಿಟರಿ ಕಾರ್ಯಾಚರಣೆ ಮತ್ತು ದಂಗೆಗಳಲ್ಲಿ ಪಾಲ್ಗೊಳ್ಳುತ್ತಿದ್ದಳು. ಮುಮ್ತಾಜ್ ಅವರು ವಿಧವೆಯರು ಮತ್ತು ಅನಾಥರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು.ಮುಮ್ತಾಜ್ ಮತ್ತು ಷಹಜಹಾನ್ 14 ಮಕ್ಕಳನ್ನು ಹೊಂದಿದ್ದರು. ಆದರೆ 7 ಮಂದಿ ಮಾತ್ರ ಶೈಶವಾವಸ್ಥೆಯಲ್ಲಿ ಬದುಕುಳಿದರು. ಮುಮ್ತಾಜ್ ಮಹಲ್ ತನ್ನ 14 ನೇ ಮಗುವಿಗೆ ಜನ್ಮ ನೀಡಿದ ನಂತರ ನಿಧನರಾದರು.
ಇತರ ಗ್ಯಾಲರಿಗಳು