Shamar Joseph: ಗಬ್ಬಾ ಗೆಲುವಿನ ಹೀರೋ ಶಮರ್ ಜೋಸೆಫ್ಗೆ ವೆಸ್ಟ್ ಇಂಡೀಸ್ನಲ್ಲಿ ಸಿಕ್ತು ಅದ್ಧೂರಿ ಸ್ವಾಗತ
- Shamar Joseph : ಜನವರಿ 25ರಂದು ನಡೆದ ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 8 ರನ್ಗಳ ರೋಚಕ ಗೆಲುವು ಸಾಧಿಸಿತು. ಈ ಪಂದ್ಯವನ್ನು ಗೆಲ್ಲಿಸಿಕೊಟ್ಟ ಶಮರ್ ಜೋಸೆಫ್ಗೆ ಗಯಾನಾದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿತು.
- Shamar Joseph : ಜನವರಿ 25ರಂದು ನಡೆದ ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 8 ರನ್ಗಳ ರೋಚಕ ಗೆಲುವು ಸಾಧಿಸಿತು. ಈ ಪಂದ್ಯವನ್ನು ಗೆಲ್ಲಿಸಿಕೊಟ್ಟ ಶಮರ್ ಜೋಸೆಫ್ಗೆ ಗಯಾನಾದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿತು.
(1 / 6)
ಆಸ್ಟ್ರೇಲಿಯಾ ವಿರುದ್ದದ ಗಬ್ಬಾ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಐತಿಹಾಸಿಕ ಗೆಲುವು ತಂದು ಕೊಟ್ಟ ವೇಗಿ ಶಮರ್ ಜೋಸೆಫ್ಗೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಅವಿಸ್ಮರಣೀಯ ಗೆಲುವು ತಂದುಕೊಟ್ಟ ಜೋಸೆಫ್ ಅವರನ್ನು ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿತ್ತು.
(2 / 6)
ಗಯಾನಾದ ಚೆಡ್ಡಿ ಜಗನ್ ಇಂಟರ್‌ನ್ಯಾಷನಲ್ ಏರ್ಪೋರ್ಟ್ನಲ್ಲಿ ಕುಟುಂಬ ಸದಸ್ಯರು, ಅಭಿಮಾನಿಗಳಿಂದ ವೇಗದ ಬೌಲರ್ಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಏರ್ಪೋರ್ಟ್ನಲ್ಲೇ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಈ ಚಿತ್ರಗಳನ್ನು ವೆಸ್ಟ್ ಇಂಡೀಸ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
(3 / 6)
ಗಬ್ಬಾ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲುವ ಪಂದ್ಯವನ್ನು ಗೆಲ್ಲಿಸಿಕೊಟ್ಟ ಶಮರ್ ಜೋಸೆಫ್ 65 ರನ್ ನೀಡಿ ಬರೋಬ್ಬರಿ 7 ವಿಕೆಟ್ ಪಡೆದಿದ್ದರು. ಆ ಮೂಲಕ 27 ವರ್ಷಗಳ ನಂತರ ಆಸೀಸ್ ನೆಲದಲ್ಲಿ ವಿಂಡೀಸ್ ಗೆಲ್ಲಲು ಕಾರಣರಾದರು.
(4 / 6)
2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ 311 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಆಸೀಸ್ 9 ವಿಕೆಟ್ ನಷ್ಟಕ್ಕೆ 289 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದರೊಂದಿಗೆ ವಿಂಡೀಸ್ 22 ರನ್ಗಳ ಮುನ್ನಡೆ ಸಾಧಿಸಿತ್ತು. 2ನೇ ಇನ್ನಿಂಗ್ಸ್ನಲ್ಲಿ 193 ರನ್ಗಳಿಗೆ ಆಲೌಟ್ ಆಗಿ 216 ರನ್ಗಳ ಗುರಿ ನೀಡಿತ್ತು. ಆದರೆ ಆಸೀಸ್ 208 ರನ್ಗಳಿಗೆ ಆಲೌಟ್ ಆಗಿ 8 ರನ್ಗಳ ಅಂತರದಿಂದ ಸೋಲು ಕಂಡಿತು.
(5 / 6)
ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸುವ ವೇಳೆ ಮಿಚೆಲ್ ಸ್ಟಾರ್ಕ್ ಎಸೆದಿದ್ದ ಯಾರ್ಕರ್ ಬಾಲ್, ಕಾಲಿನ ಬೆರಳಿಗೆ ತಗುಲಿ ತೀವ್ರ ಗಾಯಗೊಂಡಿದ್ದರು. ರಕ್ತಸ್ರಾವ ಹೆಚ್ಚಾಗಿತ್ತು. ಹೀಗಾಗಿ ಆಡದೆ ರಿಟೈರ್ಡ್ ಹರ್ಟ್ ಆಗಿ ಮೈದಾನದಿಂದ ಹೊರ ನಡೆದಿದ್ದರು. ಆದರೆ ಮರುದಿನ 7 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದರು.(AFP)
ಇತರ ಗ್ಯಾಲರಿಗಳು