Shani Transit 2024: ಏಪ್ರಿಲ್‌ನಿಂದ ಬದಲಾಗಲಿದೆ ಈ ರಾಶಿಯವರ ಜೀವನ; ಕರ್ಮಕಾರಕ ಶನಿಯು ಯಾವ ರಾಶಿಯವರಿಗೆ ಯಾವ ಫಲ ನೀಡಲಿದ್ಧಾನೆ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಚಲನೆಯು ವ್ಯಕ್ತಿಯ ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಕರ್ಮಕಾರಕ ಶನಿಯು 30 ವರ್ಷಗಳ ನಂತರ ತನ್ನದೇ ಕುಂಭ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಇದರ ಪ್ರಕಾರ 3 ರಾಶಿಯವರಿಗೆ ಶನಿಯು ಉತ್ತಮ ಫಲಗಳನ್ನು ನೀಡಲಿದ್ದಾನೆ.
(1 / 5)
9 ಗ್ರಹಗಳಲ್ಲಿ ಶನಿಯು ನೀತಿವಂತ. ಕರ್ಮಕಾರಕ ಶನಿಯು ಮನುಷ್ಯ ಮಾಡಿದ ಕರ್ಮಕ್ಕೆ ತಕ್ಕಂತೆ ಸುಖ, ದುಃಖಗಳನ್ನು ನೀಡುತ್ತಾನೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗಲು ಎರಡೂವರೆ ವರ್ಷ ಬೇಕು. 9 ಗ್ರಹಗಳಲ್ಲಿ ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿದೆ.
(2 / 5)
ಶನಿಯು 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಶನಿಯ ಸಂಚಾರವು ಎಲ್ಲಾ ರಾಶಿಗಳ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಕರ್ಮದ ನಾಯಕನಾದ ಶನಿಯು ದುಪ್ಪಟ್ಟು ಲಾಭ ಅಥವಾ ನಷ್ಟವನ್ನು ನೀಡುತ್ತಾನೆ. ಶನಿಯು ವರ್ಷವಿಡೀ ಕುಂಭ ರಾಶಿಯಲ್ಲಿ ಸಂಚರಿಸುತ್ತಾನೆ. ಶನಿಯ ಆಶೀರ್ವಾದದಿಂದ ಅನೇಕ ರಾಶಿಯವರಿಗೆ ಒಳಿತಾಗುತ್ತದೆ.
(3 / 5)
ಮೇಷ ರಾಶಿ:: ಶನಿಯ ಸಂಚಾರವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಐಷಾರಾಮಿ ಸೌಲಭ್ಯಗಳು ಹೆಚ್ಚಾಗಲಿವೆ. ಮಕ್ಕಳಿಲ್ಲದವರಿಗೆ ಸಂತಾನ ಲಾಭ ದೊರೆಯಲಿದೆ. ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ನೀಡುತ್ತವೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ.
(4 / 5)
ವೃಷಭ: ಶನಿಯ ಸಂಚಾರವು ವೃಷಭ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ಬಡ್ತಿ ದೊರೆತು ಸಂಬಳ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ. ಎಲ್ಲಾ ಆಸೆಗಳು ಈಡೇರುತ್ತವೆ.
(5 / 5)
ಮಿಥುನ: ಶನಿಯ ಸಂಚಾರವು ಮೀನ ರಾಶಿಯವರಿಗೆ ಕೂಡಾ ಅದೃಷ್ಟವನ್ನು ನೀಡುತ್ತದೆ. ಏಪ್ರಿಲ್ ನಿಂದ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ. ನೀವು ಎಲ್ಲಾ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ. ಇತರರಿಂದ ಗೌರವ ಸಂಪಾದಿಸುತ್ತೀರಿ. ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮೇಲುಗೈ ಸಾಧಿಸುತ್ತಾರೆ. ಸಹೋದ್ಯೋಗಿಗಳು ನಿಮಗೆ ಅನುಕೂಲಕರವಾಗಿ ವರ್ತಿಸುತ್ತಾರೆ.
ಇತರ ಗ್ಯಾಲರಿಗಳು