ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶನಿ ಜಯಂತಿ ನಂತರ ಹಿಮ್ಮುಖವಾಗಿ ಚಲಿಸಲಿರುವ ಶನೈಶ್ಚರ; ನವೆಂಬರ್‌ವರೆಗೆ ದ್ವಾದಶ ರಾಶಿಗಳಿಗೆ ಈ ರೀತಿ ಫಲಗಳನ್ನು ನೀಡಲಿದ್ದಾನೆ ಕರ್ಮಕಾರಕ

ಶನಿ ಜಯಂತಿ ನಂತರ ಹಿಮ್ಮುಖವಾಗಿ ಚಲಿಸಲಿರುವ ಶನೈಶ್ಚರ; ನವೆಂಬರ್‌ವರೆಗೆ ದ್ವಾದಶ ರಾಶಿಗಳಿಗೆ ಈ ರೀತಿ ಫಲಗಳನ್ನು ನೀಡಲಿದ್ದಾನೆ ಕರ್ಮಕಾರಕ

ಶನಿ ಜಯಂತಿ 2024: ಜ್ಯೇಷ್ಠ ಅಮಾವಾಸ್ಯೆ ತಿಥಿಯಂದು ಶನಿ ದೇವನು ಅವತರಿಸಿದನೆಂದು ಸನಾತನ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಜೂನ್‌ 6 ರಂದು ಶನಿ ಜಯಂತಿ ಇದೆ. ಇದಾದ ಕೆಲವು ದಿನಗಳ ನಂತರ ಶನಿ ಹಿಮ್ಮುಖವಾಗಿ ಚಲಿಸಲು ಆರಂಭಿಸುತ್ತಾನೆ. 

ಜೂನ್‌ ತಿಂಗಳಿಂದ ನವೆಂಬರ್‌ವರೆಗೂ ಸುಮಾರು 139 ದಿನಗಳ ಕಾಲ ಹಿಮ್ಮುಖವಾಗಿ ಚಲಿಸಲಿದ್ದಾನೆ. ಈ ಸಮಯದಲ್ಲಿ ಶನಿಯು ಒಂದೊಂದು ರಾಶಿಯವರಿಗೆ ಒಂದೊಂದು ರೀತಿಯ ಫಲಗಳನ್ನು ನೀಡಲಿದ್ದಾನೆ. 
icon

(1 / 14)

ಹಿಮ್ಮೆಟುವಿಕೆ ಸಮಯದಲ್ಲಿ ಶನಿಯು ಯಾವ ರಾಶಿಯವರಿಗೆ ಏನು ಶುಭ ಫಲಗಳನ್ನು ನೀಡುತ್ತಾನೆ. ಯಾವ ರಾಶಿಯವರಿಗೆ ಮಧ್ಯಮ ಫಲ ಹಾಗೂ ಯಾರಿಗೆ ಸಮಸ್ಯೆಗಳನ್ನು ನೀಡಲಿದ್ದಾನೆ ನೋಡೋಣ. 
icon

(2 / 14)

ಮೇಷ: ಶನಿಯು ವಿರುದ್ಧ ದಿಕ್ಕಿನಲ್ಲಿ ಚಲಿಸುವುದರಿಂದ ಮೇಷ ರಾಶಿಯವರಿಗೆ ಬಹಳಷ್ಟು ತೊಂದರೆ ಕೊಡಲಿದ್ದಾನೆ. ನಿಮ್ಮ ಎಲ್ಲಾ ಕೆಲಸಗಳಗೆ ಶನಿ ಅಡ್ಡಿಯಾಗುತ್ತಾನೆ.  ಆರ್ಥಿಕ ನಷ್ಟ ಅನುಭವಿಸುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಯಾವುದೇ ಪ್ರಗತಿ ಕಂಡುಬರುವುದಿಲ್ಲ. ಪತಿ-ಪತ್ನಿ ಸಂಬಂಧ ಹದಗೆಡಬಹುದು. ಯಾರೊಂದಿಗಾದರೂ ನಿಮ್ಮ ವಾದ ಉಲ್ಬಣಗೊಳ್ಳಬಹುದು.  ಆರೋಗ್ಯ ಏರುಪೇರಾಗಬಹುದು ಎಚ್ಚರದಿಂದ ಇರಿ. 
icon

(3 / 14)

ವೃಷಭ ರಾಶಿಯವರಿಗೆ ಶನಿಯು ಒಳ್ಳೆ ಫಲಗಳನ್ನು ನೀಡಲಿದ್ದಾನೆ.  ಶನಿಯು ನಿಮ್ಮ ಜಾತಕದ 10ನೇ ಮನೆಯಲ್ಲಿ ಅಂದರೆ ಕರ್ಮ ಗೃಹದಲ್ಲಿ ಹಿಮ್ಮೆಟ್ಟುತ್ತಾನೆ. ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕ ಲಾಭಕ್ಕೆ ಉತ್ತಮ ಅವಕಾಶಗಳು ದೊರೆಯಲಿವೆ. ಉದ್ಯೋಗಿಗಳು ತಮ್ಮ ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು, ಇದರ ಹೊರತಾಗಿ, ಸಂಬಳ ಮತ್ತು ಬಡ್ತಿ ಹೆಚ್ಚಳದ ಸಾಧ್ಯತೆಯಿದೆ. ಗೌರವ ಮತ್ತು ಅದೃಷ್ಟವು ಹೆಚ್ಚಾಗುತ್ತದೆ, ಮುಂದಿನ 135 ದಿನಗಳು ನಿಮಗೆ ಅತ್ಯಂತ ಮಂಗಳಕರವಾಗಿರುತ್ತದೆ. 
icon

(4 / 14)

ಈ ರಾಶಿಯವರಿಗೆ ಕೂಡಾ ಶನಿ ಉತ್ತಮ ಫಲಗಳನ್ನು ನೀಡುತ್ತಾನೆ. ಈ ರಾಶಿಯಲ್ಲಿ ಜನಿಸಿದ, ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಆರ್ಥಿಕ ಲಾಭ ಉತ್ತಮವಾಗಿರಲಿದೆ.  ದೊಡ್ಡ ಲಾಭವನ್ನು ಮಾಡಬಹುದು.  ಬಾಕಿಯಿರುವ ಎಲ್ಲಾ ಕೆಲಸಗಳು ಶನಿದೇವನ ಕೃಪೆಯಿಂದ ಪೂರ್ಣಗೊಳ್ಳುತ್ತವೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ಶನಿಯ ಕೃಪೆಯಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಸಂತೋಷವನ್ನು ಹೊಂದಿರುತ್ತೀರಿ.   
icon

(5 / 14)

 ಕರ್ಕಾಟಕ ರಾಶಿಯವರಿಗೆ ಶುಕ್ರ ಮತ್ತು ಶನಿಯ ಸಂಯೋಗದಿಂದ ಹೊಸ ಅವಕಾಶಗಳು ಸಿಗಲಿವೆ. ನಿಮ್ಮ ಪ್ರೀತಿಯ ಜೀವನದಲ್ಲಿ ಉತ್ಸಾಹ ಮತ್ತು ಸಂತೋಷ ಇರುತ್ತದೆ. ವೃತ್ತಿ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಕೆಲಸದ ಸ್ಥಳದಲ್ಲಿ ಅದೃಷ್ಟ ಹಿಂಬಾಲಿಸಿ ಬರಲಿದೆ. ಅರ್ಧಕ್ಕೆ ನಿಲ್ಲಿಸಿದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ.  ನೀವು ಸಮಾಜದಲ್ಲಿ ಗೌರವ ಮತ್ತು ಖ್ಯಾತಿಯನ್ನು ಪಡೆಯುತ್ತೀರಿ. ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿ ಇರಲಿದೆ.
icon

(6 / 14)

ಶನಿ ಹಿಮ್ಮೆಟುವಿಕೆಯು ಸಿಂಹ ರಾಶಿಯವರಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು. . ಕೆಲಸದಲ್ಲಿ ಅಡಚಣೆ ಉಂಟಾಗಬಹುದು. ಹಣದ ನಷ್ಟದಿಂದಾಗಿ ನಿಮ್ಮ ಹಣಕಾಸಿನ ಪರಿಸ್ಥಿತಿ ಅತಂತ್ರವಾಗಬಹುದು. ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ವಾಗ್ವಾದಗಳು ಇರಲಿವೆ.  ಸಂಗಾತಿಯೊಂದಿಗಿನ ಜಗಳದಿಂದ ಮನಸ್ತಾಪ ಉಂಟಾಗುವುದು.
icon

(7 / 14)

ಈ ರಾಶಿಯವರಿಗೆ ಶನಿಯ ಹಿಮ್ಮೆಟುವಿಕೆ ವಿಶೇಷ ಫಲಗಳನ್ನು ನೀಡುತ್ತವೆ. ಶನಿಯು ನಿಮ್ಮ 6ನೇ ಮನೆಯಲ್ಲಿ ಹಿಮ್ಮೆಟ್ಟಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ ನೀವು ವಿವಾದಗಳಿಂದ ಮುಕ್ತರಾಗುತ್ತೀರಿ. ಈ ಸಮಯದಲ್ಲಿ ಶತ್ರುಗಳು ನಿಮ್ಮ ಗೆಳೆತನ ಬಯಸಿ ಬರಬಹುದು. ಕೋರ್ಟ್ ಕೇಸ್‌ನಲ್ಲಿ ಜಯ ಸಿಗಲಿದೆ.  ಕುಟುಂಬದಲ್ಲಿ  ಐಷಾರಾಮಿ ಜೀವನವನ್ನು ಆನಂದಿಸುವಿರಿ. ಉದ್ಯೋಗಿಗಳಿಗೆ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ.
icon

(8 / 14)

ಶನಿಯು ತುಲಾ ರಾಶಿಯವರಿಗೆ ಮಿಶ್ರ ಫಲಗಳನ್ನು ನೀಡಲಿದ್ದಾನೆ.  ವಿದ್ಯಾರ್ಥಿಗಳು ಇತರ ಕೆಲಸದ ಹೊರತಾಗಿ ಅಧ್ಯಯನಕ್ಕೆ ಸಾಕಷ್ಟು ಸಮಯವನ್ನು ಮೀಸಲಿಡಬೇಕು.  ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಲಿದ್ದೀರಿ. ಈ ಸಮಯದಲ್ಲಿ ಆಸ್ತಿಯನ್ನು ಖರೀದಿಸಲಿದ್ದೀರಿ. ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಲಿದೆ.  
icon

(9 / 14)

ವೃಶ್ಚಿಕ ರಾಶಿಯವರಿಗೆ ಕೂಡಾ ಶನಿಯು ಸಾಧಾರಣ ಫಲಗಳನ್ನು ನೀಡಲಿದ್ದಾನೆ.  ಪ್ರತಿಯೊಂದು ವಿಷಯದಲ್ಲೂ ನಿಮ್ಮ ಕುಟುಂಬದ ಸದಸ್ಯರಿಂದ ಸಂಪೂರ್ಣ ಬೆಂಬಲ ಮತ್ತು ಆರ್ಥಿಕ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಈ ಅವಧಿಯಲ್ಲಿ ನೀವು ಪೂರ್ವಜರ ಆಸ್ತಿಯನ್ನು ಪಡೆಯಬಹುದು.  ವಿವಾಹಿತರು ಈ ಅವಧಿಯಲ್ಲಿ ಸಂತೋಷದ ಜೀವನ ನಡೆಸುತ್ತಾರೆ.  ಧಾರ್ಮಿಕ ಕಾರ್ಯಗಳನ್ನು ನಡೆಸುವುದು, ಹಾಗೂ ತೀರ್ಥಯಾತ್ರೆಗೆ ಹೋಗುವ ಸಾಧ್ಯತೆಯಿದೆ.
icon

(10 / 14)

ಧನು ರಾಶಿಯರಿಗೆ ಶನಿ ಹಿಮ್ಮೆಟುವಿಕೆ ಅನುಕೂಲಕರವಾಗಿದೆ. ಇತರರನ್ನು ತಮ್ಮತ್ತ ಬಲವಾಗಿ ಆಕರ್ಷಿಸುತ್ತಾರೆ. ಧನು ರಾಶಿಯವರು ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರಲಿದೆ. ಹಣಕಾಸಿನ ಪರಿಸ್ಥಿತಿ ಕೂಡಾ ಉತ್ತಮವಾಗಿರಲಿದೆ.
icon

(11 / 14)

ಧನು ರಾಶಿಯರಿಗೆ ಶನಿ ಹಿಮ್ಮೆಟುವಿಕೆ ಅನುಕೂಲಕರವಾಗಿದೆ. ಇತರರನ್ನು ತಮ್ಮತ್ತ ಬಲವಾಗಿ ಆಕರ್ಷಿಸುತ್ತಾರೆ. ಧನು ರಾಶಿಯವರು ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರಲಿದೆ. ಹಣಕಾಸಿನ ಪರಿಸ್ಥಿತಿ ಕೂಡಾ ಉತ್ತಮವಾಗಿರಲಿದೆ.(Freepik)

ಶನಿಯ ಹಿಮ್ಮೆಟುವಿಕೆ  ಮಕರ ರಾಶಿಯವರಿಗೆ ಸಮಸ್ಯೆಗಳನ್ನು ಉಂಟು ಮಾಡಬಹುದು. ಅಪಾರ ಹಣದ ನಷ್ಟ ಉಂಟಾಗಲಿದೆ. ವ್ಯಾಪಾರ ಮಾಡುವವರಿಗೂ ತೊಂದರೆಯಾಗಬಹುದು. ಶನಿಯ ಹಿಮ್ಮೆಟ್ಟುವಿಕೆಯ ಋಣಾತ್ಮಕ ಪರಿಣಾಮವು ಆರೋಗ್ಯದ ಮೇಲೂ ಕಂಡುಬರುತ್ತದೆ. ಈ ಸಮಯದಲ್ಲಿ ನೀವು ಜಾಗರೂಕರಾಗಿರಬೇಕು.
icon

(12 / 14)

ಇದು ಶನಿಯ ಸ್ವಂತ ರಾಶಿಯಾಗಿದ್ದು,  ಹಿಮ್ಮುಖ ಚಲನೆಯಿಂದ ಶುಭ ಫಲಗಳನ್ನು ನೀಡಲಿದ್ದಾನೆ. ಶನಿಯು ನಿಮ್ಮ ರಾಶಿಯ ಲಗ್ನ ಮನೆಯಲ್ಲಿರುತ್ತಾನೆ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. 
icon

(13 / 14)

ಮೀನ ರಾಶಿಯವರಿಗೆ ಶನಿಯು ಅಶುಭ ಫಲಿತಾಂಶಗಳನ್ನು ನೀಡಲಿದ್ದಾನೆ. ಶನಿಯ ಹಿಮ್ಮೆಟುವಿಕೆ ಈ ರಾಶಿಯವರಿಗೆ ವೈಯಕ್ತಿಕವಾಗಿ ಸಮಸ್ಯೆ ಉಂಟು ಮಾಡಬಹುದು.  ಕಾನೂನು ವಿವಾದಗಳಲ್ಲಿ ಭಾಗಿಯಾಗಬಹುದು. ಆರ್ಥಿಕ ನಷ್ಟ ಸಾಧ್ಯತೆ ಇದೆ. 
icon

(14 / 14)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು