Srikanth Bolla: ಶಾರ್ಕ್ ಟ್ಯಾಂಕ್ ಇಂಡಿಯಾ ಷೋನ ಹೊಸ ಜಡ್ಜ್ ಶ್ರೀಕಾಂತ್ ಬೊಲ್ಲಾ ಹಿನ್ನೆಲೆ, ವಿದ್ಯಾರ್ಹತೆ ಏನು? ಇಲ್ಲಿದೆ ವಿವರ
- Shark Tank India Srikanth Bolla: ಬೊಲ್ಲಂಟ್ ಇಂಡಸ್ಟ್ರೀಸ್‌ನ ಸಂಸ್ಥಾಪಕ ಮತ್ತು ಚೇರ್‌ಮನ್ ಶ್ರೀಕಾಂತ್ ಬೊಲ್ಲಾ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 4 ರ ಜಡ್ಜ್ ಆಗಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಇವರ ಜೀವನಾಧಾರಿತ ಸಿನಿಮಾ ಕೂಡ ತೆರೆ ಕಂಡಿದೆ. ಇವರ ಪಯಣ ನಿಜಕ್ಕೂ ಸ್ಪೂರ್ತಿದಾಯಕ.
- Shark Tank India Srikanth Bolla: ಬೊಲ್ಲಂಟ್ ಇಂಡಸ್ಟ್ರೀಸ್‌ನ ಸಂಸ್ಥಾಪಕ ಮತ್ತು ಚೇರ್‌ಮನ್ ಶ್ರೀಕಾಂತ್ ಬೊಲ್ಲಾ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 4 ರ ಜಡ್ಜ್ ಆಗಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಇವರ ಜೀವನಾಧಾರಿತ ಸಿನಿಮಾ ಕೂಡ ತೆರೆ ಕಂಡಿದೆ. ಇವರ ಪಯಣ ನಿಜಕ್ಕೂ ಸ್ಪೂರ್ತಿದಾಯಕ.
(1 / 6)
ಶ್ರೀಕಾಂತ್ ಬೊಲ್ಲಾ 1991ರಲ್ಲಿ ಆಂಧ್ರಪ್ರದೇಶದ ಮಚಲಿಪಟ್ಟಣದಲ್ಲಿ ಜನಿಸಿದರು. ಶ್ರೀಕಾಂತ್ ಹುಟ್ಟಿನಿಂದಲೇ ಕುರುಡರಾಗಿದ್ದರು. ಅವರ ಕುಟುಂಬದ ಪ್ರಮುಖ ಜೀವನೋಪಾಯ ಕೃಷಿಯಾಗಿತ್ತು. ಅವರು ಬಾಲ್ಯದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದರು.
(Instagram Pic Credit- srikanthbollaofficial_)(2 / 6)
ಶ್ರೀಕಾಂತ್ ಹೈದರಾಬಾದ್‌ನ ದೇವ್ನರ್ ಅಂಧ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದರು. ಅವರು 10ನೇ ತರಗತಿಯಲ್ಲಿ ಶೇ 90 ಅಂಕಗಳನ್ನು ಗಳಿಸಿದ್ದರು
(Instagram Pic Credit- srikanthbollaofficial_)(3 / 6)
2007ರಲ್ಲಿ ಅವರು ರಾಯಲ್ ಜೂನಿಯರ್ ಕಾಲೇಜಿನಿಂದ ವಿಜ್ಞಾನ ವಿಭಾಗದಿಂದ 12ನೇ ತರಗತಿ ಉತ್ತೀರ್ಣರಾಗುತ್ತಾರೆ. 12ನೇ ತರಗತಿಯಲ್ಲಿ ಶೇ 98 ಅಂಕ ಗಳಿಸಿದ್ದಾರೆ
(Instagram Pic Credit- srikanthbollaofficial_)(4 / 6)
ಭಾರತದಲ್ಲಿ ಅಧ್ಯಯನ ಮುಗಿಸಿದ ನಂತರ, ಶ್ರೀಕಾಂತ್ ಬೊಲ್ಲಾ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಹೋದರು. ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಮ್ಯಾನೇಜ್‌ಮೆಂಟ್ ಸೈನ್ಸ್‌ನ ಮೊದಲ ಅಂಧ ವಿದ್ಯಾರ್ಥಿಯಾದರು. ಅಲ್ಲಿಂದ ಅವರು 2014ರಲ್ಲಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದರು.
(Instagram Pic Credit- srikanthbollaofficial_)(5 / 6)
ಶ್ರೀಕಾಂತ್ ಬೊಲ್ಲಾ ಓದಿನಲ್ಲಿ ಮಾತ್ರವಲ್ಲ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಬಹಳ ಸಕ್ರಿಯರಾಗಿದ್ದರು. ಅವರು ಆಂಧ್ರಪ್ರದೇಶ ರಾಜ್ಯ ಅಂಧರ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ರಾಷ್ಟ್ರಮಟ್ಟದ ಚೆಸ್ ಆಟಗಾರರೂ ಹೌದು.
(Instagram Pic Credit- srikanthbollaofficial_)ಇತರ ಗ್ಯಾಲರಿಗಳು