Hombuja Jatre 2025: ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದಲ್ಲಿ ಪಾರ್ಶ್ವನಾಥ ಸ್ವಾಮಿ, ಪದ್ಮಾವತಿ ಅಮ್ಮನವರ ಜಾತ್ರಾ ಸಡಗರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hombuja Jatre 2025: ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದಲ್ಲಿ ಪಾರ್ಶ್ವನಾಥ ಸ್ವಾಮಿ, ಪದ್ಮಾವತಿ ಅಮ್ಮನವರ ಜಾತ್ರಾ ಸಡಗರ

Hombuja Jatre 2025: ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದಲ್ಲಿ ಪಾರ್ಶ್ವನಾಥ ಸ್ವಾಮಿ, ಪದ್ಮಾವತಿ ಅಮ್ಮನವರ ಜಾತ್ರಾ ಸಡಗರ

  • Hombuja Jatre 2025: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಶ್ರೀಕ್ಷೇತ್ರ ಹೊಂಬುಜದಲ್ಲಿ ಶ್ರೀ ಪಾರ್ಶ್ವನಾಥರು ಹಾಗೂ ಪದ್ಮಾವತಿ ಅಮ್ಮನವರ ಜಾತ್ರಾ ಮಹೋತ್ಸವ ಶುರುವಾಗಿದೆ. ಶನಿವಾರ ಮಹಾರಥೋತ್ಸವ ಶ್ರೀ ಕ್ಷೇತ್ರದಲ್ಲಿ ಜರುಗಲಿದೆ. ಉತ್ಸವದ ಚಿತ್ರ ನೋಟ ಇಲ್ಲಿದೆ.

ಚಾರಿತ್ರಿಕ ಹಿನ್ನೆಲೆಯ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹೊಂಬುಜ ಕ್ಷೇತ್ರವಿಂದು ಧಾರ್ಮಿಕ-ಆಧ್ಯಾತ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರ ಎಂಬುದು ಜನಜನಿತವಾಗಿದೆ. ಇಲ್ಲಿ ಈಗ ಪಾರ್ಶ್ವನಾಥ ಸ್ವಾಮಿ ಹಾಗೂ ಪದ್ಮಾವತಿ ಅಮ್ಮನವರ ಜಾತ್ರಾ ಸಡಗರ ಜೋರಾಗಿದೆ.
icon

(1 / 10)

ಜಾತ್ರಾ ಮಹೋತ್ಸವದ ಎರಡನೇ ದಿನದಂದು ಹೊಂಬುಜ ಮಠದ ಆವರಣದಲ್ಲಿ ಹುಲಿ ವಾಹನೋತ್ಸವವು ಜರುಗಿತು.
icon

(2 / 10)

ಜಾತ್ರಾ ಮಹೋತ್ಸವದ ಎರಡನೇ ದಿನದಂದು ಹೊಂಬುಜ ಮಠದ ಆವರಣದಲ್ಲಿ ಹುಲಿ ವಾಹನೋತ್ಸವವು ಜರುಗಿತು.

ಹುಲಿ ವಾಹನೋತ್ಸವಕ್ಕೆ ವಿಶೇಷ ಅಲಂಕಾರಗಳನ್ನು ಹೊಂಬುಜ ಮಠದಲ್ಲಿ ಮಾಡಲಾಗಿತ್ತು.
icon

(3 / 10)

ಹುಲಿ ವಾಹನೋತ್ಸವಕ್ಕೆ ವಿಶೇಷ ಅಲಂಕಾರಗಳನ್ನು ಹೊಂಬುಜ ಮಠದಲ್ಲಿ ಮಾಡಲಾಗಿತ್ತು.

ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಪದ್ಮಾವತಿ ಅಮ್ಮನವರ ಜಾತ್ರಾ ಸಡಗರದ ಮೊದಲ ದಿನ ನಾಗ ವಾಹನೋತ್ಸವ ನಡೆಯಿತು.  ಈ ವೇಳೆ ವಿಶೇಷ ಪೂಜೆಗಳು ನೆರವೇರಿದವು.
icon

(4 / 10)

ಪ್ರಸ್ತುತ ಪಟ್ಟಾಚಾರ್ಯರಾದ ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ನಾಗವಾಹನೋತ್ಸವದ ವೇಳೆ ಪೂಜೆಗಳನ್ನು ಸಲ್ಲಿಸಿದರು.
icon

(5 / 10)

ಹೊಂಬುಜ ಮಠದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿದಿನ ಉತ್ಸವಗಳು ರಾತ್ರಿ ನಡೆಯಲಿದ್ದು. ಇದಕ್ಕಾಗಿ ಪದ್ಮಾವತಿ ಅಮ್ಮನವರ ಉತ್ಸವ ಮೂರ್ತಿಯನ್ನು ಅಲಂಕರಿಸಲಾಗಿದೆ.
icon

(6 / 10)

ಹೊಂಬುಜ ಮಠದ ಜಾತ್ರಾ ಮಹೋತ್ಸವದ ಮೊದಲ ದಿನ ನಾಗವಾಹನೋತ್ಸವಕ್ಕೆ ಪದ್ಮಾವತಿ ಅಮ್ಮನವರು ಹಾಗೂ ಶ್ರೀ ಪಾಶ್ವನಾಥರ ಉತ್ಸವಮೂರ್ತಿಗಳನ್ನು ಮೆರವಣಿಗೆ ಮೂಲಕ ತರಲಾಯಿತು.
icon

(7 / 10)

ವರ್ಷಂಪ್ರತಿ ಜರುಗುವ ರಥಯಾತ್ರಾ ಸಂದರ್ಭದಲ್ಲಿ ಶ್ರೀಮಠದ ಬಸದಿಯಲ್ಲಿ ಶ್ರೀ ನೇಮಿನಾಥ ಸ್ವಾಮಿ ಸನ್ನಿಧಿಯಲ್ಲಿ ‘ಗಣಧರವಲಯ ಆರಾಧನೆ’, ಶ್ರೀಮಕ್ಕಳ ಬಸದಿಯಲ್ಲಿ ಕಲ್ಯಾಣ ಮಂದಿರ ಆರಾಧನೆ, ನಗರ ಜಿನಾಲಯದಲ್ಲಿ ಭಕ್ತಾಮರ ಆರಾಧನೆ,  ಶ್ರೀ ಬೋಗಾರ ಬಸದಿಯಲ್ಲಿ ಚೌಷಟ್ ಋದ್ಧಿ ವಿಧಾನಗಳನ್ನು ಏರ್ಪಡಿಸಲಾಗಿತ್ತು. ಭಕ್ತವೃಂದದವರು ಆರಾಧನೆ, ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳುವರು. ವಿದ್ಯುದ್ದೀಪಾಲಂಕಾರ, ಪುಷ್ಪಹಾರಗಳಿಂದ ಮಂದಿರಗಳು ಭಕ್ತರಿಗೆ ಆಕರ್ಷಣೆ ಇರಲಿದೆ.
icon

(8 / 10)

ಚಾರಿತ್ರಿಕ ಹಿನ್ನೆಲೆಯ ಹೊಂಬುಜ ಕ್ಷೇತ್ರವಿಂದು ಧಾರ್ಮಿಕ-ಆಧ್ಯಾತ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರ ಎಂಬುದು ಜನಜನಿತವಾಗಿದೆ. ಮಲೆನಾಡಿನ ರಮ್ಯ ವಿಹಂಗಮ ಪ್ರಕೃತಿಯ ಮಡಿಲಲ್ಲಿ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಅಭೀಷ್ಠವರಪ್ರದಾಯಿನಿ ಯಕ್ಷಿ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಜಿನಮಂದಿರಗಳಿಗೆ 1300 ವರ್ಷಗಳ ಅಪೂರ್ವ ಇತಿಹಾಸವಿದೆ.
icon

(9 / 10)

ಕಾಲಕಾಲಕ್ಕೆ ಪೀಠಧೀಶರಾಗಿದ್ದ ಭಟ್ಟಾರಕ ಪರಂಪರೆಯ ಮಹಾಸ್ವಾಮಿಗಳವರ ಕ್ಷೇತ್ರದಲ್ಲಿ ಜೀರ್ಣೋದ್ಧಾರ, ಸಂರಕ್ಷಣೆ ಮತ್ತು ಜೈನ ಧರ್ಮ ಪ್ರಸಾರದ ಕುರಿತು ಸತ್ಕಾರ್ಯ ಯೋಜನೆಗಳನ್ನು ಸಮಾಜ ಬಾಂಧವರ ಸಹಕಾರ, ಸಹಯೋಗದಲ್ಲಿ ನೆರವೇರಿಸುತ್ತಾ ಬಂದಿದ್ದು. ವಾರ್ಷಿಕ ಜಾತ್ರಾ ಚಟುವಟಿಕೆಗಳು ನಡೆಯುತ್ತಿವೆ.
icon

(10 / 10)

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು