Jog Falls Calling: ಮಳೆಗೆ ಮತ್ತೆ ಅರಳಿದ ಶರಾವತಿ ಜಲಪಾತ, ಜೋಗದ ಗುಂಡಿ ಜೋಡಿಯಾಗಿ ನೋಡಲು ಅಣಿಯಾಗಿ
- Jog Tour ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ ಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ಕುಟುಂಬಗಳು ಹಾಗೂ ಜೋಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆನಂದಿಸುತ್ತಿದ್ದಾರೆ.
- Jog Tour ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ ಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ಕುಟುಂಬಗಳು ಹಾಗೂ ಜೋಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆನಂದಿಸುತ್ತಿದ್ದಾರೆ.
(1 / 8)
ಆಕಸ್ಮಿಕ ಚಿತ್ರದ ಅಣ್ಣಾವ್ರ ಹಾಡು ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ ಹಾಡು ನೆನಪಿರಬೇಕು. ಆ ಹಾಡನ್ನು ನೆನಪಿಸುವ ಸನ್ನಿವೇಶ ಜೋಗದಲ್ಲಿ ಮತ್ತೆ ನಿರ್ಮಾಣವಾಗಿದೆ.
(2 / 8)
ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಜೋಗ ಜಲಪಾತದ ವೈಭವ ಮರಳಿದೆ.
(3 / 8)
ಶರಾವತಿ ನದಿ ಮೂಲಕ ನೀರು ಹರಿದು ಬಂದು ರಾಜಾ. ರಾಣಿ. ರೋರಲ್ ಹಾಗೂ ರಾಕೆಟ್ ಎಂಬು ಹೆಸರಿನಲ್ಲಿ ಜಲಪಾತಗಳಾಗಿ ಧುಮ್ಮಿಕ್ಕುವ ಸೊಬಗು ಮೈಮನ ಅರಳಿಸುವಂತಿದೆ.
(4 / 8)
ಅದರಲ್ಲೂ ಜೋಗ ಜಲಪಾತದಲ್ಲಿ ಒಮ್ಮೆ ಮಂಜು ಮತ್ತೊಮ್ಮೆ ನೀರಿನ ವೈಭವವನ್ನು ಹತ್ತಿರದಿಂ ದ ನೋಡುವ ಅವಕಾಶ ಎಲ್ಲಾ ಕಾಲದಲ್ಲೂ ಸಿಗುವುದಿಲ್ಲ. ಮಳೆಗಾಲದಲ್ಲಿ ಮಾತ್ರ ಇಂತಹ ಸನ್ನಿವೇಶ ವೀಕ್ಷಣೆ ತಪ್ಪಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ.
(5 / 8)
ಜೋಗ ನೋಡಲು ಬೆಂಗಳೂರು, ಮೈಸೂರು, ಮಂಗಳೂರು ಮಾತ್ರವಲ್ಲದೇ ಉತ್ತರ ಕರ್ನಾಟಕ ಭಾಗದಿಂದಲೂ ನಿತ್ಯ ಪ್ರವಾಸಿಗರು ಆಗಮಿಸುತ್ತಿದ್ದಾರೆ.
(7 / 8)
ನೀರು ಧುಮ್ಮಿಕ್ಕುವ ಕ್ಷಣಗಳನ್ನು ಕಣ್ತುಂಬಿಕೊಳ್ಳುವುದು ಹಿರಿಯರಿಂದ ಹಿಡಿದು ಮಕ್ಕಳು, ಯುವಕರವರೆಗೂ ಖುಷಿ ಕೊಡುವಂತದ್ದು. ಹಾಗೆ ಬರುವವರು ಹತ್ತಿರದಿಂದಲೇ ಜೋಗವನ್ನು ಕಂಡು ಪುಳಕಿತರಾಗುತ್ತಿದ್ದಾರೆ.
ಇತರ ಗ್ಯಾಲರಿಗಳು