Tunga Dam: ತೆರೆದ ತುಂಗಾ ಜಲಾಶಯದ 21 ಗೇಟ್‌ಗಳಿಂದ 43 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ, ಹೀಗಿದೆ ಜಲವೈಭವ
- Shimoga News ಕರ್ನಾಟಕದಲ್ಲಿಯೇ ಮೊದಲು ತುಂಬುವ ಜಲಾಶಯ ತುಂಗಾ. ಈ ಬಾರಿ ಜೂನ್‌ನಲ್ಲಿಯೇ ತುಂಬಿದ್ದ ತುಂಗಾ ಜಲಾಶಯ( Tunga Dam) ನಿಂದ ಮೊದಲ ಬಾರಿಗೆ ಎಲ್ಲಾ ಗೇಟ್ ಮೂಲಕ ನೀರು ಹರಿಸಲಾಗುತ್ತಿದೆ. ಹೀಗಿತ್ತು. ಆ ಜಲ ವೈಭವ.
- Shimoga News ಕರ್ನಾಟಕದಲ್ಲಿಯೇ ಮೊದಲು ತುಂಬುವ ಜಲಾಶಯ ತುಂಗಾ. ಈ ಬಾರಿ ಜೂನ್‌ನಲ್ಲಿಯೇ ತುಂಬಿದ್ದ ತುಂಗಾ ಜಲಾಶಯ( Tunga Dam) ನಿಂದ ಮೊದಲ ಬಾರಿಗೆ ಎಲ್ಲಾ ಗೇಟ್ ಮೂಲಕ ನೀರು ಹರಿಸಲಾಗುತ್ತಿದೆ. ಹೀಗಿತ್ತು. ಆ ಜಲ ವೈಭವ.
(2 / 6)
ಭಾರೀ ಮಳೆ ಕಾರಣದಿಂದ ಈಗಾಗಲೇ ತುಂಬಿರುವ ತುಂಗಾ ಜಲಾಶಯದ ಎಲ್ಲಾ 21 ಗೇಟ್‌ಗಳ ಮುಖಾಂತರ 43000 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ.
(3 / 6)
ಜಲಾಶಯದ ಎಲ್ಲಾ ಗೇಟ್‌ಗಳನ್ನು ತೆರೆದಿದ್ದರಿಂದ ನೀರು ಏಕಾಏಕಿ ನುಗ್ಗಿ ಅಲ್ಲಿ ಸೃಷ್ಟಿಸಿದ ವೈಭವವನ್ನು ಪ್ರವಾಸಿಗರೂ ಕಣ್ತುಂಬಿಕೊಂಡರು.
(4 / 6)
ತುಂಗಾ ಜಲಾಶಯದಿಂದ ಕಳೆದ ವಾರವೇ ಎರಡು ಗೇಟ್‌ಗಳಲ್ಲಿ ಮಾತ್ರ ನೀರು ಹರಿಸಲಾಗುತ್ತಿತ್ತು. ಮೂರು ದಿನದಿಂದ ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆಯಾಗಿ ಒಳ ಹರಿವು ಹೆಚ್ಚಿದ್ದರಿಂದ ಹೊರ ಹರಿವನ್ನು ಗುರುವಾರ ಹೆಚ್ಚಿಸಲಾಯಿತು.
(5 / 6)
ಗಾಜನೂರಿನ ತುಂಗಾ ಜಲಾಶಯ ಪ್ರಮುಖ ಪ್ರವಾಸಿ ತಾಣವೂ ಹೌದು. ಶಿವಮೊಗ್ಗ ತೀರ್ಥಹಳ್ಳಿ ಮಾರ್ಗ ಮಧ್ಯೆದಲ್ಲಿ ಬರುವ ಈ ಜಲಾಶಯ ತುಂಬಿ ನೀರು ಹೋದರೆ ತುಂಗಭದ್ರಾ ಜಲಾಶಯ ತುಂಬಲು ಸಹಕಾರಿಯಾಗಲಿದೆ.
ಇತರ ಗ್ಯಾಲರಿಗಳು