ನಿರ್ಮಾಪಕನ ಜತೆಗಿನ ʻಆ ಕರಾಳ ಅನುಭವʼದ ಬಗ್ಗೆ ಮೊದಲ ಸಲ ಬಾಯ್ಬಿಟ್ಟ ʻಶ್ರಾವಣಿ ಸುಬ್ರಮಣ್ಯʼ ಸೀರಿಯಲ್ ನಟಿ ಆಸಿಯಾ ಫಿರ್ದೋಸ್
- ಬಣ್ಣದ ಲೋಕದಲ್ಲಿ ಆಗಾಗ ಕಾಸ್ಟಿಂಗ್ ಕೌಚ್ ತಲ್ಲಣ ಸೃಷ್ಟಿಸುತ್ತಿರುತ್ತದೆ. ತಮ್ಮ ಕಹಿ ಅನುಭವಗಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡ ಸಾಕಷ್ಟು ನಟಿಯರಿದ್ದಾರೆ. ಇನ್ನು ಕೆಲವರು ಆ ಕೆಟ್ಟ ಸಂಪ್ರದಾಯದ ವಿರುದ್ಧ ಕಾನೂನಿನ ಮೊರೆ ಹೋದ ಉದಾಹರಣೆಗಳೂ ಇವೆ. ಇದೀಗ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಮೂಲಕ ಗುರುತಿಸಿಕೊಂಡ ಆಸಿಯಾ ಫಿರ್ದೋಸ್ ಸಹ ಇದೇ ವಿಷ್ಯವಾಗಿ ಮಾತನಾಡಿದ್ದಾರೆ.
- ಬಣ್ಣದ ಲೋಕದಲ್ಲಿ ಆಗಾಗ ಕಾಸ್ಟಿಂಗ್ ಕೌಚ್ ತಲ್ಲಣ ಸೃಷ್ಟಿಸುತ್ತಿರುತ್ತದೆ. ತಮ್ಮ ಕಹಿ ಅನುಭವಗಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡ ಸಾಕಷ್ಟು ನಟಿಯರಿದ್ದಾರೆ. ಇನ್ನು ಕೆಲವರು ಆ ಕೆಟ್ಟ ಸಂಪ್ರದಾಯದ ವಿರುದ್ಧ ಕಾನೂನಿನ ಮೊರೆ ಹೋದ ಉದಾಹರಣೆಗಳೂ ಇವೆ. ಇದೀಗ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಮೂಲಕ ಗುರುತಿಸಿಕೊಂಡ ಆಸಿಯಾ ಫಿರ್ದೋಸ್ ಸಹ ಇದೇ ವಿಷ್ಯವಾಗಿ ಮಾತನಾಡಿದ್ದಾರೆ.
(1 / 11)
ʻಶ್ರಾವಣಿ ಸುಬ್ರಮಣ್ಯʼ ಧಾರಾವಾಹಿ ಜೀ ಕನ್ನಡದ ಟಾಪ್ ಧಾರಾವಾಹಿಯಲ್ಲಿ ಗಟ್ಟಿಯಾಗಿ ನಿಂತಿದೆ. ಟಿಆರ್‌ಪಿಯಲ್ಲಿ ಮುಂದಡಿ ಇರಿಸಿರುವ ಈ ಸೀರಿಯಲ್‌ಗೆ ಕರುನಾಡ ವೀಕ್ಷಕ ಫಿದಾ ಆಗಿದ್ದಾನೆ. ಇದೇ ಸೀರಿಯಲ್‌ನ ನಾಯಕಿ ಶ್ರಾವಣಿ ಅಲಿಯಾಸ್ ಆಸಿಯಾ ಫಿರ್ದೋಸ್, ಬಣ್ಣದ ಲೋಕದಲ್ಲಿನ ಕಾಸ್ಟಿಂಗ್ ಕೌಚ್ ಕರಾಳತೆಯ ಅನುಭವದ ಬಗ್ಗೆ ಮಾತನಾಡಿದ್ದಾರೆ.
(Instagram)(2 / 11)
ಈ ಕಾಸ್ಟಿಂಗ್ ಕೌಚ್ ವಿಚಾರದ ಬಗ್ಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಆಸಿಯಾ ಫಿರ್ದೋಸ್ ಮೊದಲ ಸಲ ಮಾತನಾಡಿದ್ದಾರೆ. ಅವರ ಮಾತಿನ ಧಾಟಿಯಲ್ಲಿಯೇ ಆ ಅನುಭವವನ್ನು ಮುಂದೆ ಓದಿ.
(3 / 11)
ಸೀರಿಯಲ್ ಜತೆಗೆ ಎರಡು ಸಿನಿಮಾಗಳಲ್ಲಿಯೂ ನಟಿಸಿದ್ದೇನೆ. ಹೀಗಿರುವಾಗಲೇ ನಿರ್ಮಾಪಕರೊಬ್ಬರು ಕರೆ ಮಾಡಿ, ಹೀಗೊಂದು ಸಿನಿಮಾ ಇದೆ ಎಂದು ಹೇಳಿದ್ದರು. ನಾನೂ ಕುತೂಹಲದಲ್ಲಿಯೇ ಹೋಗಿದ್ದೆ. ಆ ನಿರ್ಮಾಪಕರ ಆಫೀಸ್ ನಮ್ಮ ಮನೆ ಬಳಿಯೇ ಇದ್ದಿದ್ದರಿಂದ, ನಾನೊಬ್ಬಳೇ ಹೋಗಿದ್ದೆ.
(4 / 11)
ಅದಾದ ಮೇಲೆ ಸಿನಿಮಾ ಮಾತುಕತೆ ಶುರುವಾಯ್ತು. ಸಿನಿಮಾದ ಕಥೆಯನ್ನೂ ಹೇಳಿದರು. ನಿಮಗೆ ಇಂಟ್ರೆಸ್ಟ್ ಇದೆಯಾ? ಎಂದೂ ಕೇಳಿದರು.
(5 / 11)
ಕಥೆ ಕೇಳಿ ನನಗೂ ಓಕೆ ಎನಿಸಿ ನಟಿಸಲು ಒಪ್ಪಿದೆ. ಆ ಸಮಯದಲ್ಲಿ ನನಗೂ ಹಣಕಾಸಿನ ಅವಶ್ಯಕತೆ ಇತ್ತು. ತಕ್ಷಣ ಒಪ್ಪಿಕೊಂಡೆ. ಸಂಭಾವನೆ ವಿಚಾರವನ್ನೂ ಮಾತನಾಡಿದರು.
(6 / 11)
ಎಷ್ಟು ಸಂಭಾವನೆ ನಿರೀಕ್ಷೆ ಮಾಡುತ್ತಿರಾ? ಎಂದೆಲ್ಲ ಕೇಳಿದರು. ಮೊದಲಿಗೆ ನಾನು ಕೇಳಿದಷ್ಟು ಸಂಭಾವನೆ ಕೊಡಲು ಒಪ್ಪಲಿಲ್ಲ. ಅದಾದ ಮೇಲೆ ಸರಿ ಕೊಡೋಣ ಬಿಡಿ ಎಂದು ಹೇಳಿದರು. ನಾನೂ ಓಕೆ ಎಂದೆ.
(7 / 11)
ಆದರೆ, ಆ ವರೆಗೂ ಆಡಿದ ಮಾತಿಗೂ, ಸಂಭಾವನೆ ಅಂತಿಮವಾದ ಬಳಿಕ ಆಡಿದ ಮಾತುಗಳಿಗೂ ಸಾಕಷ್ಟು ವ್ಯತ್ಯಾಸ ಕಂಡುಬಂದಿತು. ಅವರ ಮಾತು ಬೇರೆ ಕಡೆ ಹೊರಟಿತು. ನಿಮ್ಮ ಪರ್ಸನಾಲಿಟಿ ಚೆನ್ನಾಗಿದೆ. ತುಂಬ ಚೆನ್ನಾಗಿ ಎಲ್ಲರನ್ನ ಮಾತನಾಡಿಸ್ತೀರಾ ಎಂದರು.
(8 / 11)
ಅದಾದ ಮೇಲೆ ನಾನು ನಿಮ್ಮ ಫ್ರೆಂಡ್ ಆಗಲು ಬಯಸುತ್ತೇನೆ ಎಂದು ಹೇಳಿದರು. ಅವರ ಮಾತಿನ ಮರ್ಮ ನನಗೆ ಆ ಕ್ಷಣಕ್ಕೆ ಗೊತ್ತಾಗಲಿಲ್ಲ.
(9 / 11)
ಯಾವ ಥರ ಸರ್ ಎಂದು ಅವರನ್ನೇ ಮರು ಪ್ರಶ್ನೆ ಮಾಡಿದೆ. "ನಾನೆಲ್ಲಾದರೂ ಸಿನಿಮಾಕ್ಕೆ ಹೋಗ್ತಿದ್ದೀನಿ ಅಂದ್ರೆ, ನೀವು ನನ್ನ ಜತೆ ಬರಬೇಕು ಅಂತಂದ್ರು. ನನಗೆ ಒಮ್ಮೆಲೇ ಕೋಪ ನೆತ್ತಿಗೇರಿತು.
(10 / 11)
ನನ್ನ ಎಷ್ಟೋ ಸ್ನೇಹಿತರು ಕರೆದರೇ ನಾನು ಅವರ ಜೊತೆಗೆ ಹೋಗಲ್ಲ. ನನಗೆ ಟೈಮೂ ಇರಲ್ಲ. ನಿಮ್ಮ ಜತೆ ನಾನ್ಯಾಕೆ ಬರಲಿ ಎಂದು ಅವರನ್ನೇ ಕೇಳಿದೆ. ನಾನು ಇಂಡಸ್ಟ್ರಿಗೆ ಬಂದಿದ್ದು ಫ್ರೆಂಡ್ಸ್ ಮಾಡಿಕೊಳ್ಳುವುದಕ್ಕಲ್ಲ. ಕೆಲಸ ಮಾಡುವುದಕ್ಕೆ. ಫ್ರೊಫೆಷನಲ್ ಆಗಿರುವುದಕ್ಕೆ. ಆಕ್ಟಿಂಗ್ ಮಾಡುವುದಕ್ಕೆ. ಫ್ರೆಂಡ್ಸ್ ಮಾಡಿಕೊಳ್ಳಲೇಬೇಕು ಎಂದಾದರೆ ಬೇರೆಯವರನ್ನು ನೋಡಿಕೊಳ್ಳಿ ಎಂದು ಹೇಳಿ ಎದ್ದು ನಡೆದೆ.
ಇತರ ಗ್ಯಾಲರಿಗಳು