ಟಿ20 ಕ್ರಿಕೆಟ್ನಲ್ಲಿ ಶುಭ್ಮನ್ ಹೊಸ ಮೈಲಿಗಲ್ಲು; ಕೊಹ್ಲಿ ಹಿಂದಿಕ್ಕಿ ವೇಗದ 5000 ರನ್ ಗಳಿಸಿದ 2ನೇ ಬ್ಯಾಟರ್ ಗಿಲ್
- ಮೇ 19ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರು ಭರ್ಜರಿ ಅರ್ಧಶತಕ ಗಳಿಸುವ ಮೂಲಕ ವೈಯಕ್ತಿಕ ಮೈಲಿಗಲ್ಲು ದಾಟಿದ್ದಾರೆ.
- ಮೇ 19ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರು ಭರ್ಜರಿ ಅರ್ಧಶತಕ ಗಳಿಸುವ ಮೂಲಕ ವೈಯಕ್ತಿಕ ಮೈಲಿಗಲ್ಲು ದಾಟಿದ್ದಾರೆ.
(1 / 8)
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ನ 60ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ಟಿ20 ಕ್ರಿಕೆಟ್ನಲ್ಲಿ ನೂತನ ಮೈಲಿಗಲ್ಲು ಸಾಧಿಸಿದ್ದಾರೆ.
(AFP)(2 / 8)
ಸ್ವಲ್ಪದರಲ್ಲಿ ಶತಕ ವಂಚಿತರಾದರೂ ಅಜೇಯರಾಗಿ 53 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಸಹಿತ 93 ರನ್ ಗಳಿಸಿದ ಶುಭ್ಮನ್ ಗಿಲ್, ತಂಡವನ್ನು ಪ್ಲೇಆಫ್ಗೇರಿಸುವುದರ ಜೊತೆಗೆ ತಾನೂ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ದಾಖಲೆಯನ್ನೂ ಮುರಿದಿದ್ದಾರೆ.
(Surjeet Yadav)(3 / 8)
ಅರ್ಧಶತಕ ಬಾರಿಸುವ ಮೂಲಕ ಗಿಲ್ ಟಿ20 ವೃತ್ತಿಜೀವನದಲ್ಲಿ 5000 ರನ್ಗಳ ಮೈಲಿಗಲ್ಲು ದಾಟಿದರು. ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವೇಗವಾಗಿ 5000 ರನ್ ಪೂರೈಸಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. ತಾನು 21 ರನ್ ಗಳಿಸಿದ್ದಾಗ ಈ ಸಾಧನೆ ಮಾಡಿದ್ರು. ಇದಕ್ಕೂ ಮುನ್ನ ವಿರಾಟ್ 2ನೇ ಸ್ಥಾನದಲ್ಲಿದ್ದರು.
(4 / 8)
ಶುಭ್ಮನ್ 33 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ಗಳ ಸಹಾಯದಿಂದ ತಮ್ಮ ವೈಯಕ್ತಿಕ ಅರ್ಧಶತಕ ಪೂರ್ಣಗೊಳಿಸಿದರು. ಅಂತಿಮವಾಗಿ ಗಿಲ್ 53 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ಗಳ ನೆರವಿನಿಂದ 93 ರನ್ ಗಳಿಸಿ ಅಜೇಯರಾಗಿ ಉಳಿದರು. ಇದು ಅವರ ಐಪಿಎಲ್ ವೃತ್ತಿಜೀವನದ 26ನೇ ಅರ್ಧಶತಕವಾಗಿದೆ.
(5 / 8)
ಗಿಲ್ 157 ಟಿ20 ಪಂದ್ಯಗಳಲ್ಲಿ 154 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿ 5000 ರನ್ ಗಡಿ (5072) ದಾಟಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅವರು ಒಟ್ಟು 6 ಶತಕ, 32 ಅರ್ಧಶತಕಗಳನ್ನೂ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
(6 / 8)
ಟಿ20 ಕ್ರಿಕೆಟ್ನಲ್ಲಿ ಗಿಲ್ ಅವರ ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 129 ರನ್. ಶುಭ್ಮನ್ ಟಿ20 ಕ್ರಿಕೆಟ್ನಲ್ಲಿ ಒಟ್ಟು 492 ಬೌಂಡರಿ ಮತ್ತು 166 ಸಿಕ್ಸರ್ಬಾರಿಸಿದ್ದಾರೆ. ಅತಿ ವೇಗವಾಗಿ 5000 ರನ್ ಗಳಿಸಿದ ಆಟಗಾರ ಕೆಎಲ್ ರಾಹುಲ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(7 / 8)
ಭಾರತೀಯ ಕ್ರಿಕೆಟಿಗರಲ್ಲಿ ಕೆಎಲ್ ರಾಹುಲ್ ಮಾತ್ರ ಶುಭ್ಮನ್ ಗಿಲ್ಗಿಂತ ಕಡಿಮೆ ಇನ್ನಿಂಗ್ಸ್ಗಳಲ್ಲಿ 5000 ಟಿ20 ರನ್ ಪೂರೈಸಿದ್ದಾರೆ. 143 ಇನ್ನಿಂಗ್ಸ್ಗಳಲ್ಲಿ ಕರ್ನಾಟಕದ ಆಟಗಾರ ಈ ಸಾಧನೆ ಮಾಡಿದ್ದಾರೆ. ಶುಭ್ಮನ್ ಗಿಲ್ ಎರಡನೇ ಸ್ಥಾನ ಪಡೆದಿದ್ದಾರೆ.
ಇತರ ಗ್ಯಾಲರಿಗಳು