ಕನ್ನಡ ಸುದ್ದಿ  /  Photo Gallery  /  Shubman Gill Father Lakhwinder Make Cricket Ground For His Son

Shubman gill Success story: ಮಗನಿಗಾಗಿ ಕೃಷಿಭೂಮಿಯನ್ನೇ ಕ್ರಿಕೆಟ್‌ ಮೈದಾನವಾಗಿಸಿದ್ರು ಅಪ್ಪ; ಅವರೇ ನನ್ನ ಹೀರೋ ಅಂದ್ರು ಗಿಲ್

  • ಭಾರತ ಕ್ರಿಕೆಟ್‌ ತಂಡದಲ್ಲಿ ಯುವ ಕ್ರಿಕೆಟಿಗೆ ಶುಬ್ಮನ್‌ ಗಿಲ್‌ ಮಿಂಚು ಹರಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕದ ಸಾಧನೆ ಮಾಡಿದ್ದ ಅವರು, ಕಿವೀಸ್‌ ವಿರುದ್ಧ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಅಪರೂಪದ ದಾಖಲೆ ನಿರ್ಮಿಸಿದರು. 23ರ ಹರೆಯದ ಗಿಲ್‌, ಭಾರತ ಕ್ರಿಕೆಟ್‌ನ ಭರವಸೆಯ ಬೆಳಕಾಗಿದ್ದಾರೆ. ಈಗಾಗಲೇ ಅವರನ್ನು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯವರಂತಹ ದಿಗ್ಗಜರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲೂ ನಿರ್ಭೀತರಾಗಿ ಬ್ಯಾಟ್‌ ಬೀಸುವ ಇವರ ಚಾಣಾಕ್ಷ ಬ್ಯಾಟಿಂಗ್‌ ಸಮರ್ಥ್ಯಕ್ಕೆ ಕ್ರಿಕೆಟ್‌ ಜಗತ್ತು ತಲೆದೂಗುತ್ತಿದೆ. ಇದರ ಹಿಂದೆ ಇವರ ಅಪಾರ ಶ್ರಮವಿದೆ. ಸಣ್ಣ ವಯಸ್ಸಿನಕಲ್ಲೇ ದೊಡ್ಡ ಕ್ರಿಕೆಟರ್‌ ಆಗಬೇಕೆನ್ನುವ ಇವರ ಕನಸಿಗೆ ತಂದೆಯ ಅಪಾರ ಬೆಂಬಲವಿದೆ.

ಏಕದಿನ ಕ್ರಿಕೆಟ್‌ನಲ್ಲಿ ಗಿಲ್‌ ದಾಖಲೆ ಅದ್ಭುತವಾಗಿದೆ. ಇದುವರೆಗೆ 21 ಏಕದಿನ ಪಂದ್ಯ ಆಡಿರುವ ಗಿಲ್‌, ಬರೋಬ್ಬರಿ 1,254 ರನ್ ಕಲೆ ಹಾಕಿದ್ದಾರೆ. 73.76ರ ಸರಾಸರಿಯಲ್ಲಿ ಬ್ಯಾಟ್‌ ಬೀಸುವುದೆಂದರೆ ಸಣ್ಣ ಮಾತೇನಲ್ಲ. ಈಗಾಗಲೇ ತಮ್ಮ ಹೆಸರಿನಲ್ಲಿ ನಾಲ್ಕು ಶತಕ ಬರೆದುಕೊಂಡಿದ್ದಾರೆ. ಇದರಲ್ಲಿ ಒಂದು ದ್ವಿಶತಕ ಸಾಧನೆ. 
icon

(1 / 9)

ಗಿಲ್‌ ಪವರ್‌ ಹಿಟ್ಟರ್‌ ಅಲ್ಲ. ಆದರೆ, ನಿರಾಯಾಸವಾಗಿ ಹೆಚ್ಚು ಶ್ರಮ ಹಾಕದೆ ಚೆಂಡನ್ನು ಸಿಕ್ಸರ್‌ಗಟ್ಟುವ ಸಾಮರ್ಥ್ಯ ಇವರಲ್ಲಿದೆ. ಇದು ಇವರ ಚಾಣಾಕ್ಷ ಬ್ಯಾಟಿಂಗ್‌ ಕಲೆ. ಇದೇ ಕಾರಣಕ್ಕೆ ಭಾರತ ತಂಡದಲ್ಲಿ ಹಿರಿಯರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮೊದಲಾದವರಿಲ್ಲದಿದ್ದರೂ ಕೂಡ, ಪಂದ್ಯವನ್ನು ಭಾರಿ ಅಂತರದಲ್ಲಿ ಗೆಲ್ಲಿಸಿಕೊಡುವ ಸಾಮರ್ಥ್ಯ ಇವರಲ್ಲಿದೆ.
icon

(2 / 9)

13 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಗಿಲ್‌, 32ರ ಸರಾಸರಿಯಲ್ಲಿ 736 ರನ್ ಹೊಡೆದಿದ್ದಾರೆ. ಇದರಲ್ಲೂ ಒಂದು ಶತಕವಿದೆ. ಟಿ20 ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಮೂರೂ ಮಾದರಿಯಲ್ಲಿ ಶತಕ ಸಿಡಿಸಿದ ಭಾರತದ ಐದನೇ ಆಟಗಾರ ಎನಿಸಿಕೊಂಡಿದ್ದಾರೆ. 
icon

(3 / 9)

13 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಗಿಲ್‌, 32ರ ಸರಾಸರಿಯಲ್ಲಿ 736 ರನ್ ಹೊಡೆದಿದ್ದಾರೆ. ಇದರಲ್ಲೂ ಒಂದು ಶತಕವಿದೆ. ಟಿ20 ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಮೂರೂ ಮಾದರಿಯಲ್ಲಿ ಶತಕ ಸಿಡಿಸಿದ ಭಾರತದ ಐದನೇ ಟಗಾರ ಎನಿಸಿಕೊಂಡಿದ್ದಾರೆ. 
icon

(4 / 9)

ಶುಬ್ಮನ್‌ ಗಿಲ್ ಮೂಲತಃ ಪಂಜಾಬ್‌ನವರು. ಅಷ್ಟೇ ಅಲ್ಲ. ಇವರೊಬ್ಬ ಸಾಮಾನ್ಯ ರೈತನ ಮಗ. ಪಂಜಾಬ್‌ನ ಜಲಾಲಾಬಾದ್‌ ನಗರದಲ್ಲಿ ಸಾಮಾನ್ಯ ರೈತನ ಮಗನಾಗಿರುವ ಗಿಲ್‌ ಇಂದು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದ್ದಾರೆ. 
icon

(5 / 9)

ಮಗ ಗಿಲ್‌ ಪಾಲಿಗೆ ತಂದೆಯೇ ನಿಜವಾದ ಹೀರೋ. ಅವರ ಹೆಸರು ಲಖ್ವಿಂದರ್ ಸಿಂಗ್‌. ಬಾಲ್ಯದಲ್ಲೇ ಮಗನ ಕ್ರಿಕೆಟ್ ಪ್ರತಿಭೆಗೆ ನೀರೆರೆದು ಪೋಷಿಸಿದ ಅವರು, ಮಗನನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಮಗನ ಭವಿಷ್ಯ ಯಾವುದೇ ಕಾರಣಕ್ಕೂ ಕಮರಬಾರದು ಎಂಬ ದಿಸೆಯಲ್ಲಿ, ತಮ್ಮ ಫಲವತ್ತಾದ ಕೃಷಿಭೂಮಿಯನ್ನೇ ಕ್ರಿಕೆಟ್ ಮೈದಾನವಾಗಿಸಿದರು ಲಖ್ವಿಂದರ್‌. ಮಗನ ಆಟಕ್ಕೆ ತಾನೇ ಸಹ ಆಟಗಾರನಾದರು. ಮಗ ಬ್ಯಾಟ್‌ ಬೀಸಿದರೆ, ಅಪ್ಪನೇ ಬೌಲರ್‌ ಆದರು.
icon

(6 / 9)

ಗಿಲ್ ತನ್ನ ಮೂರನೇ ವಯಸ್ಸಿನಲ್ಲೇ ಕ್ರಿಕೆಟ್ ಬ್ಯಾಟ್‌ ಹಿಡಿದಿದ್ದರಂತೆ. ರಾತ್ರಿ ಮಲಗುವ ವೇಳೆಯೂ, ಕ್ರಿಕೆಟ್ ಬ್ಯಾಟ್ ಮತ್ತು ಚೆಂಡನ್ನು ತನ್ನ ಬೆಡ್‌ ಪಕ್ಕದಲ್ಲೇ ಇಟ್ಟು ಮಲಗುತ್ತಿದ್ದರಂತೆ. ಇದೇ ಕಾರಣಕ್ಕೆ ಅವರ ತಂದೆ ಎಲ್ಲಾ ಹಂತದಲ್ಲೂ ಬೆಂಬಲ ನೀಡಿದರು. ತನ್ನ ಎಲ್ಲ ಕ್ರಿಕೆಟ್ ಸಾಧನೆಗಳಿಗೆ ತನ್ನ ತಂದೆಯ ತ್ಯಾಗವೇ ಕಾರಣ ಎಂದು ಖುದ್ದು ಗಿಲ್‌ ಹೇಳಿದ್ದಾರೆ.
icon

(7 / 9)

ರಣಜಿ ಪಂದ್ಯಗಳಲ್ಲೂ ಪಂಜಾಬ್ ಪರ ಗಿಲ್‌ ಅಮೋಘ ದಾಖಲೆ ನಿರ್ಮಿಸಿದ್ದಾರೆ. ಅಂಡರ್ 19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ಉಪನಾಯಕನಾಗಿ ಆಡಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು. ಪಾಕ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿ ಭಾರತವನ್ನು ಗೆಲ್ಲಿಸಿದ್ದರು.
icon

(8 / 9)

ಐಪಿಎಲ್‌ನಲ್ಲೂ ಗಿಲ್‌ ದಾಖಲೆಗಳು ಅತ್ಯುತ್ತಮವಾಗಿವೆ. 2019ರ ಆವೃತ್ತಿಯಲ್ಲಿ 'ಎಮರ್ಜಿಂಗ್ ಪ್ಲೇಯರ್' ಅವಾರ್ಡ್ ಪಡೆದಿದ್ದ ಗಿಲ್‌, ಕಳೆದ ವರ್ಷ ಐಪಿಎಲ್ ಟ್ರೋಫಿ ಗೆದ್ದ ಗುಜರಾತ್ ಟೈಟಾನ್ ಪರ ಅತ್ಯುತ್ತಮವಾಗಿ ಆಡಿದ್ದರು.
icon

(9 / 9)

IPL_Entry_Point

ಇತರ ಗ್ಯಾಲರಿಗಳು