Yoga: ಜೀರ್ಣಕ್ರಿಯೆ ಸರಾಗಗೊಳಿಸಲು ಮದ್ದೇಕೆ; ಈ ಸರಳ ಯೋಗಾಸನಗಳನ್ನು ನಿತ್ಯವೂ ಮಾಡಿ
- ಯೋಗದ ಕೆಲವೊಂದು ಭಂಗಿಗಳು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಅಲ್ಲದೆ ದೇಹದ ಜೀರ್ಣಕ್ರಿಯೆಯನ್ನು ಶುದ್ಧೀಕರಿಸುವ ಮೂಲಕ ನಿತ್ಯದ ಚಟುವಟಿಕೆಗಳನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆ ವೃದ್ಧಿಸಲು ಈ ಕೆಳಗಿನ ಯೋಗಾಸನಗಳನ್ನು ಮಾಡಿ. ಪ್ರತಿ ಆಸನವನ್ನು ಕನಿಷ್ಠ 30 ಸೆಕೆಂಡುಗಳಿಗಿಂತ ಹೆಚ್ಚು ಹೊತ್ತು ಮಾಡಲಿ ಪ್ರಯತ್ನಿಸಿ.
- ಯೋಗದ ಕೆಲವೊಂದು ಭಂಗಿಗಳು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಅಲ್ಲದೆ ದೇಹದ ಜೀರ್ಣಕ್ರಿಯೆಯನ್ನು ಶುದ್ಧೀಕರಿಸುವ ಮೂಲಕ ನಿತ್ಯದ ಚಟುವಟಿಕೆಗಳನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆ ವೃದ್ಧಿಸಲು ಈ ಕೆಳಗಿನ ಯೋಗಾಸನಗಳನ್ನು ಮಾಡಿ. ಪ್ರತಿ ಆಸನವನ್ನು ಕನಿಷ್ಠ 30 ಸೆಕೆಂಡುಗಳಿಗಿಂತ ಹೆಚ್ಚು ಹೊತ್ತು ಮಾಡಲಿ ಪ್ರಯತ್ನಿಸಿ.
(1 / 6)
ಸುಖಾಸನ (ಪದ್ಮಾಸನ): ಎರಡೂ ಕಾಲುಗಳನ್ನು ಚಾಚಿ ಎಡಗಾಲನ್ನು ಮಡಚಿ ಬಲತೊಡೆಯೊಳಗೆ ತೂರಿ. ನಂತರ ಬಲಗಾಲನ್ನು ಮಡಚಿ ಎಡತೊಡೆಯ ಮೇಲೆ ಇಟ್ಟುಕೊಳ್ಳಿ. ನೇರವಾಗಿ ಕುಳಿತುಕೊಂಡು ನಿಮ್ಮ ಅಂಗೈಗಳನ್ನು ಮೊಣಕಾಲುಗಳ ಮೇಲೆ ಇರಿಸಿ. ಸುಲಭ ಆಸನವನ್ನು ನಿತ್ಯ ಮಾಡಿದರೆ, ಜೀರ್ಣಕ್ರಿಯೆ ವೃದ್ಧಿಸಬಹುದು.(Photo by Mor Shani on Unsplash)
(2 / 6)
ವಜ್ರಾಸನ (Vajrasana): ಮಂಡಿಯೂರಿ ಮಾಡುವ ಸುಲಭ ಭಂಗಿ ಇದು. ಮಂಡಿಯೂರಿ ಕುಳಿತು ಅಂಗೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ. ನಿಮ್ಮ ಹಿಮ್ಮಡಿಗಳ ಮೇಲೆ ಕುಳಿತುಕೊಳ್ಳಿ. ನಿಮ್ಮ ಬೆನ್ನು ಮತ್ತು ಮುಖವನ್ನು ಮುಂದಕ್ಕೆ ಚಾಚಿ ನೇರವಾಗಿ ಕುಳಿತುಕೊಳ್ಳಿ.(Photo by Tim Chow on Unsplash)
(3 / 6)
ಹಸ್ತ ಉತ್ತಾನಾಸನ (Hasta Uttanasana): ನೀರವಾಗಿ ನಿಂತು ಕೈಗಳನ್ನು ತಲೆಯ ಮೇಲಕ್ಕೆತ್ತಿ. ಉಸಿರು ಮೇಲಕ್ಕೆ ತೆಗೆದುಕೊಂಡು ನಿಮ್ಮ ತಲೆ, ಕುತ್ತಿಗೆ ಮತ್ತು ಸೊಂಟಕ್ಕಿಂತ ಮೇಲ್ಭಾಗವನ್ನು ನಿಧಾನವಾಗಿ ಹಿಂದಕ್ಕೆ ಬಗ್ಗಿಸಿ. ನಿಮ್ಮ ಕೈಗಳನ್ನು ನಿಮ್ಮ ಕಿವಿಗೆ ಹತ್ತಿರ ಇರಿಸಿ.(Instagram/@nikkiwellsyoga)
(4 / 6)
ಭುಜಂಗಾಸನ (Bhujangasana): ಹೊಟ್ಟೆಯ ಮೇಲೆ ಮಲಗಿ, ಕೈಗಳನ್ನು ಬೆಂಬಲವಾಗಿ ನೆಲಕ್ಕೆ ಊರಿ ಸೊಂಟಕ್ಕಿಂತ ಮೇಲ್ಭಾಗವನ್ನು ನಿಧಾನವಾಗಿ ಎಚ್ಚರಿಕೆಯಿಂದ ಮೇಲಕ್ಕೆತ್ತಿ. ಕುತ್ತಿಗೆಯನ್ನು ಸ್ವಲ್ಪ ಹಿಂದಕ್ಕೆ ತಿರುಗಿಸಬೇಕು. ನಿಮ್ಮ ಹೊಕ್ಕುಳವು ನೆಲಕ್ಕೆ ಸ್ಪರ್ಶಿಸಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.(Instagram/cronesima)
(5 / 6)
ಸರ್ವಾಂಗಾಸನ (Sarvangasana): ದೇಹದ ಸರ್ವ ಭಾಗಗಳಿಗೂ ವ್ಯಾಯಾಮ ಆಗುವಂತೆ ಮಾಡುವ ಆಸನವೇ ಸರ್ವಾಂಗಾಸನ. ಮೊದಲಿಗೆ ಬೆನ್ನಿನ ಮೇಲೆ ಮಲಗಿ. ನಿಮ್ಮ ಕಾಲುಗಳನ್ನು ನೆಲದಿಂದ ಮೇಲಕ್ಕೆತ್ತಿ ನಂತರ ನಿಮ್ಮ ಸೊಂಟವನ್ನು ಕೂಡಾ ಚಿತ್ರದಲ್ಲಿ ತೋರಿಸಿರುವಂತೆ ನಿಧಾನವಾಗಿ ಮೇಲಕ್ಕೆತ್ತಿ. ನಿಮ್ಮ ಅಂಗೈಗಳಿಂದ ನಿಮ್ಮ ಬೆನ್ನಿನ ಭಾಗಕ್ಕೆ ಆಧಾರ ಕೊಡಿ. ಕಾಲುಗಳು ಮತ್ತು ಪಾದಗಳನ್ನು ಜೋಡಿಸಿ. ನಿಮ್ಮ ನೋಟವನ್ನು ನಿಮ್ಮ ಪಾದಗಳ ಕಡೆಗೆ ಕೇಂದ್ರೀಕರಿಸಿ. ಮಣಿಕಟ್ಟು, ಕುತ್ತಿಗೆ ಅಥವಾ ಭುಜದ ಸಮಸ್ಯೆಗಳಿರುವ ಈ ಆಸನವನ್ನು ಮಾಡುವುದರಿಂದ ದೂರವಿರುವುದು ಒಳ್ಳೆಯದು. ಮಹಿಳೆಯರು ಮುಟ್ಟಿನ ಸಮಯದಲ್ಲಿ ಅಥವಾ ಗರ್ಭಾವಸ್ಥೆಯಲ್ಲಿ ಈ ಆಸನವನ್ನು ಮಾಡಬಾರದು.(Twitter/CandidEssential)
(6 / 6)
ಜೀರ್ಣಕ್ರಿಯೆ ಸುಧಾರಿಸಬೇಕೆಂದು ನೀವು ಬಯಸಿದರೆ, ಆಗಾಗ ತಿನ್ನುವುದನ್ನು ತಪ್ಪಿಸಿ. ಮಸಾಲೆಯುಕ್ತ, ಸಂಸ್ಕರಿಸಿದ ಅಥವಾ ಹೆಚ್ಚಿನ ಕೊಬ್ಬು ಅಥವಾ ಸಕ್ಕರೆ ಅಂಶವಿರುವ ಆಹಾರವನ್ನು ಕಡಿಮೆ ಮಾಡಿ. ಮನೆಯೂಟ ಸೇವನೆ ಹೆಚ್ಚಿಸಿ. ಫೈಬರ್ ಅಂಶ ಸೇವನೆಯನ್ನು ಹೆಚ್ಚಿಸಿದರೆ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯಿರಿ. ಯೋಗವು ನಿಮ್ಮ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೀಗಾಗಿ ಚೆನ್ನಾಗಿ ನಿದ್ರೆ ಮಾಡಬಹುದು.(Prasanth Inturi)
ಇತರ ಗ್ಯಾಲರಿಗಳು