Sini Shetty: ವಿಶ್ವಸುಂದರಿ ಸ್ಪರ್ಧೆಗೆ ದಿನಗಣನೆ; ಉದ್ಘಾಟನಾ ಸಮಾರಂಭದಲ್ಲಿ 2 ಲಕ್ಷ ರೂ ಬೆಲೆಯ ಸೀರೆ ಉಟ್ಟು ಮಿಂಚಿದ ಸಿನಿ ಶೆಟ್ಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sini Shetty: ವಿಶ್ವಸುಂದರಿ ಸ್ಪರ್ಧೆಗೆ ದಿನಗಣನೆ; ಉದ್ಘಾಟನಾ ಸಮಾರಂಭದಲ್ಲಿ 2 ಲಕ್ಷ ರೂ ಬೆಲೆಯ ಸೀರೆ ಉಟ್ಟು ಮಿಂಚಿದ ಸಿನಿ ಶೆಟ್ಟಿ

Sini Shetty: ವಿಶ್ವಸುಂದರಿ ಸ್ಪರ್ಧೆಗೆ ದಿನಗಣನೆ; ಉದ್ಘಾಟನಾ ಸಮಾರಂಭದಲ್ಲಿ 2 ಲಕ್ಷ ರೂ ಬೆಲೆಯ ಸೀರೆ ಉಟ್ಟು ಮಿಂಚಿದ ಸಿನಿ ಶೆಟ್ಟಿ

ಕೆಲವು ದಿನಗಳ ಹಿಂದಷ್ಟೇ ಎಲ್‌ ಸಾಲ್ವಡಾರ್‌ನಲ್ಲಿ ಭುವನ ಸುಂದರಿ ಸ್ಪರ್ಧೆ ನಡೆದಿತ್ತು.  ಇನ್ನು ಕೆಲವೇ ದಿನಗಳಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಯಲಿದೆ. ಇತ್ತೀಚೆಗೆ ಮಿಸ್‌ ವರ್ಲ್ಡ್‌ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನೆರವೇರಿದೆ. 

ಮಾರ್ಚ್‌ 9ರಂದು ವಿಶ್ವ ಸುಂದರಿ ಸ್ಪರ್ಧೆ ನಡೆಯಲಿದ್ದು ಮಂಗಳವಾರವಷ್ಟೇ ದೆಹಲಿಯ ಅಶೋಕ ಹೋಟೆಲ್‌ನಲ್ಲಿ 71 ನೇ ವಿಶ್ವ ಸುಂದರಿ ಸ್ಪರ್ಧೆಯ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಿದ್ದರು. 
icon

(1 / 9)

(PC: Sini Shetty Instagram)

ಉದ್ಘಾಟನಾ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದದ್ದು ಸಿನಿ ಶೆಟ್ಟಿಯ ಸೀರೆ. ನೇರಳೆ ಬಣ್ಣದ ರವಿಕೆ, ಕೆಂಪು ಬಣ್ಣದ ಸೀರೆ ಹಾಗೂ ಆಕರ್ಷಕ ಒಡವೆಗಳೊಂದಿಗೆ ಸಿನಿ ಶೆಟ್ಟಿ ಎಲ್ಲರ ಗಮನ ಸೆಳೆದರು. 
icon

(2 / 9)

ಜಯಂತಿ ರೆಡ್ಡಿ ವಿನ್ಯಾಸ ಮಾಡಿದ್ದ ಕೆಂಪು ಬನಾರಸ್‌ ಸೀರೆಯನ್ನು ಸಿನಿ ಶೆಟ್ಟಿ ಉಟ್ಟಿದ್ದರು. ಈ ಫೋಟೋಗಳನ್ನು ಮಿಸ್‌ ಇಂಡಿಯಾ ಸಿನಿ ಶೆಟ್ಟಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(3 / 9)

ಸೀರೆ ಬೆಲೆ ಕೇಳಿದವರು ದಂಗಾಗಿದ್ದಾರೆ. ಏಕೆಂದರೆ ಈ ಬನಾರಸ್‌ ಸೀರೆ ಬೆಲೆ ಬರೋಬ್ಬರಿ    ₹225,900 ರೂಗಳು. ಜಯಂತಿ ರೆಡ್ಡಿ, ತಮ್ಮ ಫ್ಯಾಷನ್‌ ವೆಬ್‌ಸೈಟ್‌ನಲ್ಲಿ ಈ ಸೀರೆ ಬೆಲೆಯನ್ನು ಹಂಚಿಕೊಂಡಿದ್ದಾರೆ. 
icon

(4 / 9)

ಸೀರೆ ಬೆಲೆ ಕೇಳಿದವರು ದಂಗಾಗಿದ್ದಾರೆ. ಏಕೆಂದರೆ ಈ ಬನಾರಸ್‌ ಸೀರೆ ಬೆಲೆ ಬರೋಬ್ಬರಿ   225,900 ರೂಗಳು. ಜಯಂತಿ ರೆಡ್ಡಿ, ತಮ್ಮ ಫ್ಯಾಷನ್‌ ವೆಬ್‌ಸೈಟ್‌ನಲ್ಲಿ ಈ ಸೀರೆ ಬೆಲೆಯನ್ನು ಹಂಚಿಕೊಂಡಿದ್ದಾರೆ. 

ಅಶೋಕ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿ ಶೆಟ್ಟಿ ಜೊತೆಗೆ ಸುಮಾರು 115 ಸ್ಪರ್ಧಿಗಳು ಭಾಗವಹಿಸಿದ್ದರು. ಸುಂದರಿಯರು ರಾಂಪ್‌ ವಾಕ್‌ ಮಾಡಿ ನೋಡುಗರ ಗಮನ ಸೆಳೆದರು. 
icon

(5 / 9)

ಸಿನಿ ಶೆಟ್ಟಿ ಉಡುಪಿ ಮೂಲದವರು. ಆದರೆ ಆಕೆ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಸದಾನಂದ್‌ ಶೆಟ್ಟಿ ಮತ್ತು ಹೇಮಾ ಶೆಟ್ಟಿ ದಂಪತಿ ಪುತ್ರಿ ಸಿನಿ ಶೆಟ್ಟಿ  ಅಕೌಂಟಿಂಗ್‌ ಮತ್ತು ಫೈನಾನ್ಸ್‌ ವಿಷಯದಲ್ಲಿ ಪದವಿ ಪಡೆದಿದ್ದು, ಈಗ ಸಿಎಫ್‌ಎ ಕೋರ್ಸ್‌ ಮಾಡುತ್ತಿದ್ದಾರೆ
icon

(6 / 9)

ಬಹಳ ವರ್ಷಗಳಿಂದಲೇ ಮಾಡೆಲಿಂಗ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಿನಿ ಶೆಟ್ಟಿ ಪ್ರತಿಷ್ಠಿತ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಗುರುತಿಸಿಕೊಂಡಿದ್ದಾರೆ. 
icon

(7 / 9)

ಮಾರ್ಚ್‌ 9 ರಂದು ನಡೆಯಲಿರುವ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ವಿಶ್ವ ಸುಂದರಿ ಪಟ್ಟ ಗೆದ್ದು, ಕರ್ನಾಟಕದ ಕೀರ್ತಿ ಪತಾಕೆ ಹಾರಿಸಲಿ ಎಂದು ಹಾರೈಸೋಣ. 
icon

(8 / 9)

ಲೈಫ್‌ಸ್ಟೈಲ್‌ ಕಾಪಿಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವೆಬ್‌ಸೈಟ್‌ ಭೇಟಿ ಕೊಡಿ
icon

(9 / 9)

ಇತರ ಗ್ಯಾಲರಿಗಳು