Uttara Kannada Mango: ಉತ್ತರ ಕನ್ನಡದ ಮಾವಿನ ತಳಿ ಗಿಡುಗ, ಶಿವಾನಂದ ಕಳವೆ ಬಿಚ್ಚಿಟ್ಟ ರುಚಿ ಕಥೆ photo
- Mango time ಉತ್ತರ ಕನ್ನಡ ಹಲವು ಹಣ್ಣುಗಳ ಸಂಗಮ. ವೈವಿಧ್ಯಮಯ ತಳಿಗಳು ಈಗಲೂ ಅಲ್ಲಿ ಲಭ್ಯ. ಅದರಲ್ಲಿ ಮಾವಿನ ತಳಿಗಳು ಕೂಡ. ಈ ಕುರಿತು ಲೇಖಕ ಶಿವಾನಂದ ಕಳವೆ ಅವರು ವಿವರಿಸಿರುವ ಮಾವಿನ ತಳಿಯ ಮಾಹಿತಿ ಇಲ್ಲಿದೆ
- Mango time ಉತ್ತರ ಕನ್ನಡ ಹಲವು ಹಣ್ಣುಗಳ ಸಂಗಮ. ವೈವಿಧ್ಯಮಯ ತಳಿಗಳು ಈಗಲೂ ಅಲ್ಲಿ ಲಭ್ಯ. ಅದರಲ್ಲಿ ಮಾವಿನ ತಳಿಗಳು ಕೂಡ. ಈ ಕುರಿತು ಲೇಖಕ ಶಿವಾನಂದ ಕಳವೆ ಅವರು ವಿವರಿಸಿರುವ ಮಾವಿನ ತಳಿಯ ಮಾಹಿತಿ ಇಲ್ಲಿದೆ
(1 / 6)
ಇದು ಮಾವಿನ ತಳಿ. ಇದನ್ನು ಹಣ್ಣಿನ ರೂಪದಲ್ಲಿ ಸೇವಿಸಲು ಬಳಸಲಾಗುತ್ತದೆ. ಇದರ ಮೂತಿ ಗಿಡುಗನಂತೆ ಇರುವ ಕಾರಣದಿಂದ ಗಿಡುಗ ಮಾವು ಎಂದೇ ಕರೆಯಲಾಗುತ್ತದೆ,
(3 / 6)
ಈಗಲೂ ಉತ್ತರ ಕನ್ನಡದ ಶಿರಸಿ. ಸಿದ್ದಾಪುರ ಸಹಿತ ಹಲವು ಭಾಗಗಳಲ್ಲಿ ಗಿಡುಗ ಮಾವನ್ನು ಕೆಲವರು ತಮ್ಮ ತೋಟಗಳಲ್ಲಿ ಬೆಳಯುತ್ತಾರೆ.
(4 / 6)
ಈಗ ಹತ್ತು ಹನ್ನೆರಡು ವರ್ಷಗಳ ಹಿಂದೆ ನಮ್ಮನೆ ಎದುರಿನ ಕಾಡು ಮಾವಿನ ಗಿಡಕ್ಕೆ ಇದರ ಕಸಿ ಮಾಡಿಸಿದೆ. ಅಮಚಿಮನೆ.ವಿ ಜಿ ಹೆಗಡೆಯವರು ಕಸಿ ಕಟ್ಟಿಕೊಟ್ಟ ಗಿಡ ಎರಡನೇ ವರ್ಷಕ್ಕೆ ಫಲ ನೀಡಿತು. ಅಲ್ಲಿಂದ ಇಲ್ಲಿಯವರೆಗೂ ಪ್ರತೀ ವರ್ಷ ಗಿಡುಗ ಆಗಮನ ನಿಶ್ಚಿತ. ಯಾವಾಗಲೂ ಮಾವಿನ ಕೊನೆಯ ಕೊಯ್ಲು ಈ ತಳಿಯದು.ಅತ್ಯಂತ ಸಿಹಿ ರುಚಿ, ಗಿಡುಗ ಪಕ್ಷಿಯ ಮೂತಿ ನೋಡಿದಂತೆ ಕಾಣುವ ಕಾರಣಕ್ಕೋ ಏನೋ ನಾಟಿ ಮಾವಿಗೆ ಗಿಡುಗನ ಮನೆ ಎಂಬ ಹೆಸರು.ಮಲೆನಾಡಿನ ಜನ ತಮ್ಮ ಹಿತ್ತಲಿನಲ್ಲಿ ಒಂದಾದರೂ ಈ ತಳಿ ಬೆಳೆಸಬಹುದು ಎನ್ನುವುದು ಕಳವೆ ನೀಡುವ ವಿವರಣೆ.
(5 / 6)
ಮಿಡಿ ಮಾವಿನ ತಳಿ ಹುಡುಕಾಟದ ಕಾರ್ಯ ಮಾಡುತ್ತಾ ನಾಟಿ ಮಾವಿನ ಹುಚ್ಚು ಹೆಚ್ಚಿದ 2005-06ರ ಕಾಲ. ಮಳೆಗಾಲ ಶುರುವಿನಲ್ಲಿ ಶಿರಸಿ ತಟ್ಟಿಸರ ಅನಂತ ಹೆಗಡೆ, ಅಮಚಿಮನೆ. ವಿ ಜಿ ಹೆಗಡೆಯವರ ಮನೆಗೆ ಹೋದಾಗೆಲ್ಲ ಒರಟೆ ಗಿಡಗ ಹಣ್ಣು ಸಿಗುತ್ತಿತ್ತು. ಹಣ್ಣು ಕತ್ತರಿಸಿ ಚಮಚೆ ಹಾಕಿ ಕೊಟ್ಟರೆ ಐಸ್ ಕ್ರೀಂ ತಿನ್ನುವಂತೆ ಮಾವು ತಿನ್ನುತ್ತಿದ್ದೆವು ಎಂದು ಶಿವಾನಂದ ಕಳವೆ ನೆನಪಿಸಿಕೊಳ್ಳುತ್ತಾರೆ.
ಇತರ ಗ್ಯಾಲರಿಗಳು