Six planets alignment: ಖಗೋಳಪ್ರಿಯರೇ ರಾತ್ರಿಯ ಆಕಾಶ ನೋಡಿ, ಜ 21ರಿಂದ ಆರು ಗ್ರಹಗಳಿಂದ ಆಕರ್ಷಕ ಖಗೋಳ ಪ್ರದರ್ಶನ
- Six planets alignment 2025: ಶುಕ್ರ, ಶನಿ, ಗುರು, ಮಂಗಳ, ನೆಪ್ಚೂನ್, ಯುರೇನಸ್ ಗ್ರಹಗಳು ಜನವರಿ 21ರಿಂದ 25ರವರೆಗೆ ಆಕಾಶದಲ್ಲಿ ಒಂದೇ ಸಾಲಿನಲ್ಲಿ ಇರಲಿವೆ. ಇವುಗಳಲ್ಲಿ ಶುಕ್ರ, ಶನಿ, ಗುರು, ಮಂಗಳ ಗ್ರಹಗಳನ್ನು ಭೂಮಿಯಿಂದ ಬರಿಗಣ್ಣಲ್ಲಿ ನೋಡಬಹುದು. ಈ ಅಪರೂಪದ ಖಗೋಳ ವಿದ್ಯಮಾನದ ಕುರಿತು ಇಲ್ಲಿದೆ ವಿವರ.
- Six planets alignment 2025: ಶುಕ್ರ, ಶನಿ, ಗುರು, ಮಂಗಳ, ನೆಪ್ಚೂನ್, ಯುರೇನಸ್ ಗ್ರಹಗಳು ಜನವರಿ 21ರಿಂದ 25ರವರೆಗೆ ಆಕಾಶದಲ್ಲಿ ಒಂದೇ ಸಾಲಿನಲ್ಲಿ ಇರಲಿವೆ. ಇವುಗಳಲ್ಲಿ ಶುಕ್ರ, ಶನಿ, ಗುರು, ಮಂಗಳ ಗ್ರಹಗಳನ್ನು ಭೂಮಿಯಿಂದ ಬರಿಗಣ್ಣಲ್ಲಿ ನೋಡಬಹುದು. ಈ ಅಪರೂಪದ ಖಗೋಳ ವಿದ್ಯಮಾನದ ಕುರಿತು ಇಲ್ಲಿದೆ ವಿವರ.
(1 / 10)
Six planets alignment 2025: ಜನವರಿ 21ರಿಂದ 25ರವರೆಗೆ ಅಪರೂಪದ ಖಗೋಳ ವಿದ್ಯಮಾನವನ್ನು ನೋಡಬಹುದು. ಶುಕ್ರ, ಶನಿ, ಗುರು ಮತ್ತು ಮಂಗಳ ಗ್ರಹಗಳನ್ನು ಭೂಮಿಯಲ್ಲಿರುವ ನಾವೆಲ್ಲರೂ ಬರಿಗಣ್ಣಿನಲ್ಲಿ ನೋಡಬಹುದು. ಆರು ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಲಿವೆ. ಶುಕ್ರ ಮತ್ತು ಶನಿ ಸಂಯೋಗವೂ ಈ ಅಚ್ಚರಿಗಳಲ್ಲಿ ಒಂದಾಗಿದೆ.
(2 / 10)
ಯಾವಾಗ ನೋಡಬಹುದು?: ಜನವರಿ 21ರಿಂದ 25ರವರೆಗೆ ಸೂರ್ಯಾಸ್ತವಾದ 45 ನಿಮಿಷಗಳ ತರುವಾಯ ಈ ವಿದ್ಯಮಾನ ಅತ್ಯುತ್ತಮವಾಗಿ ಕಾಣಿಸಲಿದೆ. ಈ ಆರು ಗ್ರಹಗಳು ಒಂದಿಷ್ಟು ಅಸಮರ್ಪಕ ಸಾಲಲ್ಲಿ ಒಂದೇ ನೇರದಲ್ಲಿ ಇರಲಿದೆ. ಆದರೆ, ಇವು ಒಂದರಿಂದ ಒಂದು ಹತ್ತು ಹಲವು ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಇರಲಿವೆ.
(3 / 10)
ಎಲ್ಲಿ ನೋಡಬಹುದು?: ನಗರದ ದೀಪಗಳಿಂದ ದೂರವಿರುವ ಕತ್ತಲೆಯ ಸ್ಥಳವನ್ನು ಹುಡುಕಿ. ನೈಋತ್ಯ ದಿಗಂತದ ಕಡೆಗೆ ನೋಡಿದರೆ ಹೆಚ್ಚು ಆಕರ್ಷಕವಾಗಿ ಕಾಣಿಸಲಿದೆ. ಬೆಂಗಳೂರು, ಮಂಗಳೂರು, ಮೈಸೂರು, ಧಾರಾವಾಡ ಸೇರಿದಂತೆ ಕರ್ನಾಟಕದ ಯಾವುದೇ ನಗರಗಳಲ್ಲಿಯೂ ಇದನ್ನು ನೋಡಬಹುದು.
(ಸಾಂದರ್ಭಿಕ ಚಿತ್ರ- pixabay)(4 / 10)
ಆದರೆ, ಹೆಚ್ಚು ದೀಪದ ಬೆಳಕು ಇರುವ ನಗರಗಳಲ್ಲಿ ಬಹುಮಹಡಿಗಳ ಮೇಲೆ ಹೋಗಿ ನೋಡಿದರೆ ಉತ್ತಮವಾಗಿ ಕಾಣಿಸಬಹುದು. ಹಳ್ಳಿಗರಿಗೆ ಈ ವಿದ್ಯಮಾನ ಹೆಚ್ಚು ಅದ್ಭುತವಾಗಿ ಕಾಣಿಸಲಿದೆ.
(ಸಾಂದರ್ಭಿಕ ಚಿತ್ರ- pixabay)
(5 / 10)
ಬೈನಾಕ್ಯೂಲರ್, ದೂರದರ್ಶಕ ಬೇಕೆ?: ಈ ಸಮಯದಲ್ಲಿ ಶುಕ್ರ, ಶನಿ, ಗುರು, ಮಂಗಳ ಗ್ರಹಗಳನ್ನು ಬರೀಗಣ್ಣಿನಿಂದ ಭೂಮಿಯಿಂದ ನೋಡಬಹುದು. ಬೈನಾಕ್ಯೂಲರ್ ಅಥವಾ ದೂರದರ್ಶಕ ಬಳಸಿದರೆ ಇನ್ನಷ್ಟು ಹತ್ತಿರದಿಂದ ನೋಡಬಹುದು.
(ಸಾಂದರ್ಭಿಕ ಚಿತ್ರ- pixabay)(6 / 10)
ನೆಪ್ಚೂನ್ ಮತ್ತು ಯುರೇನಸ್: ಈ ಅವಧಿಯಲ್ಲಿ ನೆಪ್ಚೂನ್ ಮತ್ತು ಯುರೇನಸ್ ಅನ್ನು ದೂರದರ್ಶಕದ ಮೂಲಕ ನೋಡಲು ಸಾಧ್ಯವಾಗುತ್ತದೆ. ಆದರೆ, ಬುಧ ಗ್ರಹ ಕಾಣಿಸದು. ಸೂರ್ಯನ ಪ್ರಜ್ವಲಿಕೆಯಿಂದಾಗಿ ಬುಧ ಅಸ್ಪಷ್ಟವಾಗಿರುತ್ತದೆ.
(7 / 10)
ಶುಕ್ರ ಮತ್ತು ಶನಿ ಗ್ರಹಗಳು ಪರಿಸ್ಪರ ಎರಡು ಡಿಗ್ರಿಗಳ ಅಂತರದಲ್ಲಿ ಇರಲಿವೆ. ಆರು ಗ್ರಹಗಳನ್ನು ಒಂದೇ ಸಾಲಿನಲ್ಲಿ ನೋಡಬಹುದಾದ ಅಪರೂಪದ ಕ್ಷಣವಿದು. ವಿಶೇಷವಾಗಿ, ಖಗೋಳಾಸಕ್ತರು, ನಕ್ಷತ್ರವೀಕ್ಷಕರು, ಖಗೋಳ ವಿದ್ಯಾರ್ಥಿಗಳು ತಪ್ಪದೇ ಈ ವಿದ್ಯಾಮಾನವನ್ನು ಕಣ್ತುಂಬಿಕೊಳ್ಳಬಹುದು.
(8 / 10)
ಜನವರಿ 18ರಿಂದ ಶುಕ್ರ ಮತ್ತು ಶನಿ ಸಂಯೋಗ ಆರಂಭವಾಗಿದೆ. ಆಕಾಶದಲ್ಲಿ ಎರಡನೇ ಅತ್ಯಂತ ಪ್ರಕಾಶಮಾನವಾದ ಶುಕ್ರವು ಶನಿಗಿಂತ 110 ಪಟ್ಟು ಪ್ರಕಾಶಮಾನವಾಗಿ ಕಾಣಿಸಿಕೊಂಡಿದೆ. ಈ ಎರಡು ಗ್ರಹಗಳು ಬರೀ ಗಣ್ಣಿಗೆ ತುಂಬಾ ಹತ್ತಿರದಲ್ಲಿದ್ದಂತೆ ಗೋಚರಿಸುತ್ತದೆ. ಬೈನಾಕ್ಯುಲರ್ ಮೂಲಕ ನೋಡಿದವರಿಗಂತೂ ಈ ಎರಡು ಗ್ರಹಗಳು ಕಣ್ಣ ಮುಂದೆಯೇ ಇರುವಂತೆ ಕಾಣಿಸಿದೆ.
(9 / 10)
ಈ ಜನವರಿ ತಿಂಗಳು ಅನೇಕ ಆಕರ್ಷಕ ಪ್ರದರ್ಶನಗಳಿಗೆ ಆಕಾಶ ಸಾಕ್ಷಿಯಾಗಿದೆ. ಜನವರಿ 12ರಂದು ಮಂಗಳ ಗ್ರಹವು ಅತ್ಯಂತ ಪ್ರಕಾಶಮಾನವಾಗಿ ಕಾಣಿಸಿದೆ. ಜನವರಿ 31ರಂದು ಅರ್ಧ ಚಂದ್ರನು ಶನಿಯಿಂದ ಕೇವಲ ಒಂದು ಡಿಗ್ರಿ ಅಂತರದಲ್ಲಿ ಕಾಣಿಸಿಕೊಳ್ಳುತ್ತಾನೆ. ಫೆಬ್ರವರಿ 1ರಂದು ಶುಕ್ರನ ಸಮೀಪದಲ್ಲಿ ಇದು ಕಾಣಲಿದೆ. ಒಟ್ಟಾರೆ ಖಗೋಳಪ್ರಿಯರಿಗೆ ಈ ಜನವರಿ ಮತ್ತು ಫೆಬ್ರವರಿ ತಿಂಗಳು ಹಬ್ಬ ಎಂದರೆ ತಪ್ಪಾಗದು.
ಇತರ ಗ್ಯಾಲರಿಗಳು