ಕನ್ನಡ ಸುದ್ದಿ  /  Photo Gallery  /  Skin Care Mango Feel For Skin Problem Benefits And Use Summer Season Beauty Tips In Kannada Rst

Skin Care: ಮಾವಿನಸಿಪ್ಪೆಯಲ್ಲಿದೆ ಸೌಂದರ್ಯದ ಗುಟ್ಟು; ಮೊಡವೆಗೂ, ಸನ್‌ಬರ್ನ್‌ಗೂ ಇದುವೇ ಮದ್ದು

  • ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವಿನಹಣ್ಣು ಬಹುತೇಕರಿಗೆ ಅಚ್ಚುಮೆಚ್ಚು. ಇದು ಆರೋಗ್ಯಕ್ಕೂ ಉತ್ತಮ. ಅಲ್ಲದೆ ತ್ವಚೆಯ ಅಂದಕ್ಕೂ ಮಾವಿನಹಣ್ಣು ಪ್ರಯೋಜನಕಾರಿ ಎಂದರೆ ನಂಬಲೇಬೇಕು. ಮಾವಿನಹಣ್ಣಿನಿಂದ ಸೌಂದರ್ಯ ವೃದ್ಧಿಸಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಉತ್ತರ.

ಬೇಸಿಗೆಯಲ್ಲಿ ಅತಿಯಾದ ಬಿಸಿಲಿನ ಶಾಖದಿಂದ ಟ್ಯಾನ್‌ ಉಂಟಾಗುವುದು ಸಾಮಾನ್ಯ. ಟ್ಯಾನ್‌ ನಿವಾರಣೆಗೆ ವಿವಿಧ ಸೌಂದರ್ಯವರ್ಧಕಗಳನ್ನು ಬಳಸಲಾಗುತ್ತದೆ. ಆದರೆ ಹಣ್ಣುಗಳ ರಾಜ ಮಾವಿನಹಣ್ಣು ಚರ್ಮದ ಟ್ಯಾನ್‌ ನಿವಾರಿಸುತ್ತದೆ ಎಂದರೆ ನಂಬಲೇಬೇಕು. ಅಲ್ಲದೆ ಇದು ಮುಖದ ಮೇಲಿನ ಕಲೆಗಳನ್ನೂ ನಿವಾರಿಸುತ್ತದೆ. ಮಾವಿನಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ ಮಾತ್ರವಲ್ಲ, ತ್ವಚೆಯ ಅಂದಕ್ಕೂ ಇದು ಉತ್ತಮ. ಹಾಗಾದರೆ ಸೌಂದರ್ಯವರ್ಧಕವಾಗಿ ಇದನ್ನು ಬಳಸುವುದು ಹೇಗೆ? 
icon

(1 / 7)

ತ್ವಚೆಯ ಅಂದಕ್ಕೆ ಮಾವು: ಮಾವಿನಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಅಂಶಗಳು ಸಮೃದ್ಧವಾಗಿವೆ. ಚರ್ಮದಲ್ಲಿ ತೇವಾಂಶ ಉಳಿಯಲು ಇದು ಸಹಾಯ ಮಾಡುತ್ತದೆ. ಕಾಂತಿಯುತ, ಹೊಳಪಿನ ಚರ್ಮ ನಿಮ್ಮದಾಗಬೇಕು ಎಂದಿದ್ದರೆ ಇದು ನೆರವಾಗುತ್ತದೆ. ಮಾವು ತಿನ್ನಲು ಎಷ್ಟು ರುಚಿಕರವಾಗಿರುತ್ತದೆಯೋ ಅಷ್ಟೇ ತ್ವಚೆಗೂ ಪರಿಣಾಮಕಾರಿ.  
icon

(2 / 7)

ತ್ವಚೆಯ ಅಂದಕ್ಕೆ ಮಾವು: ಮಾವಿನಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಅಂಶಗಳು ಸಮೃದ್ಧವಾಗಿವೆ. ಚರ್ಮದಲ್ಲಿ ತೇವಾಂಶ ಉಳಿಯಲು ಇದು ಸಹಾಯ ಮಾಡುತ್ತದೆ. ಕಾಂತಿಯುತ, ಹೊಳಪಿನ ಚರ್ಮ ನಿಮ್ಮದಾಗಬೇಕು ಎಂದಿದ್ದರೆ ಇದು ನೆರವಾಗುತ್ತದೆ. ಮಾವು ತಿನ್ನಲು ಎಷ್ಟು ರುಚಿಕರವಾಗಿರುತ್ತದೆಯೋ ಅಷ್ಟೇ ತ್ವಚೆಗೂ ಪರಿಣಾಮಕಾರಿ.  (HT_PRINT)

ಮಾವಿನಸಿಪ್ಪೆಯ ಸ್ಕ್ರಬ್‌: ಮಾವಿನಸಿಪ್ಪೆಯನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಕಾಫಿ ಪುಡಿಯನ್ನು ಮಿಶ್ರಣ ಮಾಡಿ. ನಿಮ್ಮದು ಒಣ ಚರ್ಮವಾಗಿದ್ದರೆ, ಸ್ವಲ್ಪ ಆಲಿವ್‌ ಎಣ್ಣೆ ಅಥವಾ ತೆಂಗಿನೆಣ್ಣೆ ಮಿಶ್ರಣ ಮಾಡಿಕೊಳ್ಳಿ. ಇದನ್ನು ಸ್ಕ್ರಬರ್‌ ಆಗಿ ಬಳಸಬಹುದು. 
icon

(3 / 7)

ಟ್ಯಾನ್‌ ನಿವಾರಣೆ: ಮಾವಿನಸಿಪ್ಪೆಯು ಚರ್ಮದ ಟ್ಯಾನ್‌ ಅನ್ನು ನಿವಾರಿಸುತ್ತದೆ. ಮಾವಿನಸಿಪ್ಪೆಯ ಒಳಭಾಗದ ಮೇಲೆ ನಿಂಬೆರಸ ಹರಡಿ. ಇದನ್ನು ಮುಖಕ್ಕೆ ಚೆನ್ನಾಗಿ ಉಜ್ಜಿ. 20 ರಿಂದ 30 ನಿಮಿಷಗಳ ಕಾಲ ಒಣಗಿಸಿ, ನಂತರ ನೀರಿನಿಂದ ತೊಳೆಯಿರಿ.
icon

(4 / 7)

ತ್ವಚೆಯ ಹೊಳಪಿಗೆ: ತ್ವಚೆಯ ಹೊಳಪು ಹೆಚ್ಚಲು ಮಾವಿನಹಣ್ಣಿನ ಸಿಪ್ಪೆ, ಒಂದು ಚಮಚ ಹಾಲು ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ಪ್ಯಾಕ್‌ ತಯಾರಿಸಿ, ಇದನ್ನು ಮುಖಕ್ಕೆ ಹಚ್ಚಿ. 10 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಇದರಿಂದ ಕಾಂತಿಯುತ ಚರ್ಮ ನಿಮ್ಮದಾಗುತ್ತದೆ. 
icon

(5 / 7)

ಫೋಲಿಕಲ್ ಸಮಸ್ಯೆ ನಿವಾರಣೆ: ಮುಖದ ಕೂದಲಿನ ಸಮಸ್ಯೆ ಇದ್ದರೆ, ಮಾವನ್ನು ಸ್ವಲ್ಪ ಸಮಯದವರೆಗೆ ಫ್ರಿಜ್‌ನಲ್ಲಿಡಿ. ನಂತರ ಅದರ ಸಿಪ್ಪೆಯನ್ನು ನಿಮ್ಮ ಮುಖದ ಮೇಲೆ ವಿರುದ್ಧ ದಿಕ್ಕಿನಲ್ಲಿ ಉಜ್ಜಿಕೊಳ್ಳಿ. ಇದು ಚರ್ಮಕ್ಕೆ ವಿಶ್ರಾಂತಿ ಸಿಗುವಂತೆ ಮಾಡುವುದು ಮಾತ್ರವಲ್ಲ,  ರಂಧ್ರಗಳನ್ನು ಕುಗ್ಗಿಸುತ್ತದೆ. ಮೊಡವೆ ಸಮಸ್ಯೆಯಿಂದಲೂ ಪರಿಹಾರ ನೀಡುತ್ತದೆ. 
icon

(6 / 7)

ನಯವಾದ ಚರ್ಮಕ್ಕಾಗಿ ಏನು ಮಾಡಬೇಕು: 2 ಚಮಚ ಹಸಿಹಾಲು, 3 ರಿಂದ 4 ಚಮಚ ಬಾದಾಮಿ ಪೇಸ್ಟ್, 1 ಚಮಚ ಓಟ್ಸ್ ಮತ್ತು ಮಾವಿನ ಸಿಪ್ಪೆಯ ಪೇಸ್ಟ್‌ನೊಂದಿಗೆ ಫೇಸ್ ಪ್ಯಾಕ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಬಿಡಿ ಮತ್ತು ನಂತರ ನೀರಿನಿಂದ ತೊಳೆಯಿರಿ. (ಈ ವರದಿಯಲ್ಲಿನ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಹೆಚ್ಚಿನ ವಿವರಗಳಿಗಾಗಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ.)
icon

(7 / 7)

IPL_Entry_Point

ಇತರ ಗ್ಯಾಲರಿಗಳು